ಉಚಿತ ದಂತ ಚಿಕಿತ್ಸಾ ಶಿಬಿರ

ಉಚಿತ ದಂತ ಚಿಕಿತ್ಸಾ ಶಿಬಿರ

ಕರ್ನಾಟಕ ಸರ್ಕಾರ. ಜಿಲ್ಲಾ ಪಂಚಾಯತ್ ಮಂಡ್ಯ. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕೆಂಪಯ್ಯನ ದೊಡ್ಡಿ. ನಗು ಫೌಂಡೇಶನ್ ಮಳವಳ್ಳಿ. ಇವರ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಕೆಂಪಯ್ಯನ ದೊಡ್ಡಿ ಶಾಲಾ ಆವಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕಲಾ ಶಿಕ್ಷಕರಾದ ಕಲಾಪ್ರಿಯ ಸಿದ್ದರಾಜು ಗಿಡಕ್ಕೆ ನೀರಿರದು ಕಾರ್ಯಕ್ರಮವನ್ನು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು. ಕೆಂಪಯ್ಯನ ದೊಡ್ಡಿ ಶಾಲೆ, ಉತ್ತಮ ವಾತಾವರಣದಲ್ಲಿದೆ. ಇಲ್ಲೆಯ ಮುಖ್ಯ ಶಿಕ್ಷಕರಾದ ಸುಂದರಪ್ಪ ರವರು. ಶಾಲಾ ಆವರಣದಲ್ಲಿ ಗಿಡ ಮರ ನೆಟ್ಟು ಪರಿಸರ ಕಾಪಾಡುತ್ತಿದ್ದಾರೆ. ಸರ್ಕಾರದ ಆದೇಶದಂತೆ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮದ ಜೊತೆಗೆ. ಬೇಸಿಗೆ ಶಿಬಿರ ನಡೆಯುತ್ತಿರುವುದು ಮಕ್ಕಳಿಗೆ ಅನುಕೂಲವಾಗುತ್ತದೆ. ನಮ್ಮ ದೇಹಕ್ಕೆ ಹಲ್ಲು ತುಂಬಾ ಅವಶ್ಯಕತೆ. ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೂ ಉಚಿತ ದಂತ ಚಿಕಿತ್ಸೆ ಮಾಡುತ್ತಿರುವುದು ಒಳ್ಳೆಯದು ಎಂದರು. ದಂತ ವೈದ್ಯರಾದ ಡಾಕ್ಟರ್ ಅರುಣ್ ರವರು ಮಾತನಾಡಿ. ಹಳ್ಳಿಗಾಡಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಜನ ಭಾಗವಹಿಸಬೇಕು. ನಗರ ಪ್ರದೇಶಗಳಲ್ಲಿ ಸಾವಿರಾರು ಹಣ ಖರ್ಚು ಮಾಡಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇಲ್ಲಿಯ ಮುಖ್ಯ ಶಿಕ್ಷಕರಾದ ಸುಂದರಪ್ಪನ್ ರವರು ಒಳ್ಳೆಯ ಹೃದಯವಂತರು. ನನ್ನನ್ನು ಭೇಟಿ ಮಾಡಿ ನಮ್ಮ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಒಂದು ದಿವಸ ಮಕ್ಕಳಿಗೆ ದಂತ ಚಿಕಿತ್ಸೆ ಕಾರ್ಯಕ್ರಮ ಮಾಡಿಕೊಡಿ ಎಂದು ಕೇಳಿದರು ನನಗೂ ತುಂಬಾ ಖುಷಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಚಂದ್ರಪ್ಪ. ಡಾಕ್ಟರ್ ಅರುಣ್ ಕಲಾಪ್ರಿಯ ಸಿದ್ದರಾಜು. ದೇವಿಕಾ. ಎಸ್ ಡಿ ಎಂ ಸಿ ಅಧ್ಯಕ್ಷ ಜಯ ಶಂಕರ. ಗ್ರಾಮಸ್ಥರದ ಬಸವರಾಜು ಹಾಜರಿದ್ದರು.