ಎಸ್.ಡಿ.ಎಮ್.ಸಿ, ಅಧ್ಯಕ್ಷರ ಮತ್ತು ಗ್ರಾಮಸ್ಥರ ಕರೇಗೆ ಸ್ಫಂದನೆ ನೀಡಿದ ಅಧಿಕಾರಿ

ಎಸ್.ಡಿ.ಎಮ್.ಸಿ, ಅಧ್ಯಕ್ಷರ ಮತ್ತು ಗ್ರಾಮಸ್ಥರ ಕರೇಗೆ ಸ್ಫಂದನೆ ನೀಡಿದ ಅಧಿಕಾರಿ

ಎಸ್.ಡಿ.ಎಮ್.ಸಿ, ಅಧ್ಯಕ್ಷರ ಮತ್ತು ಗ್ರಾಮಸ್ಥರ ಕರೇಗೆ ಸ್ಫಂದನೆ ನೀಡಿದ ಅಧಿಕಾರಿ

ಇಂಡಿ: ಝಳಕಿ  ಸರ್ಕಾರಿ ಹೀರಿಯ ಪ್ರಾಥಮಿಕ ಶಾಲಾ ಕೋಠಡಿಗಳು ಸುಮಾರು ೩೮ ವರ್ಷಗಳಕಾಲ ಹಳೆಯದಾಗಿದ್ದು, ಸುಮಾರು ೬ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಇವುಗಳು ಸಂಪೂರ್ಣವಾಗಿ ತೆರವು ಗೋಳಿಸಿ ಹೊಸದಾಗಿ ಕಟ್ಟಡ ಮಾಡುವಂತೆ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ, ಕರವೆ ಝಳಕಿ ವಲಯ ಅಧ್ಯಕ್ಷ ರವಿ ಹೂಗಾರ, ರಾಘವೇಂದ್ರ ಕಾಗರ, ಶಿಕ್ಷಣ ಇಲಾಖೆಗೆ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದನ್ನು ಇಲ್ಲಿನ ಚಡಚಣ ತಾಲೂಕಾ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಎಸ್.ಜೆ.ನಾಯಕ ಗಮನಕ್ಕೆ ತೆಗೆದುಕೊಂಡು ಖುದ್ದಾಗಿ ಮಂಗಳವಾರ ಸ್ಥಾನಿಕ ಪರಿಶೀಲನೆ ನಡೆಸಿದರು. ಸ್ಥಾನಿಕ ಚೌಕಾಸಿ ನಡೆಸಿ ನಂತರ ಇಲ್ಲಿರುವಂತಹ ಕೊಠಡಿಗಳ ಅವಸ್ಥೆ ಸಂಫೂರ್ಣ ಶಿಥಿಲಾವಸ್ಥೆಯಲ್ಲಿವೆ, ಆದ್ದರಿಂದ ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಮತ್ತು ಕೊಠಡಿಗಳ ಹೊಸದಾಗಿ ನಿರ್ಮಾಣ ಮಾಡಲು ಮುಂದಿನ ಕಾರ್ಯದ ಬಗ್ಗೆ ಪತ್ರ ವ್ಯವಹಾರದ ಮೂಲಕ ಮುಂದಿನ ಕ್ರಮಕ್ಕೆ ಶಿಫಾರಸ್ಸು ಮಾಡುತ್ತೇನೆ, ಮತ್ತು ಶೀಥಿಲಾವಸ್ಥೆಯಲ್ಲಿ ಇರುವಂತಹ ಕೊಠಡಿಗಳನ್ನು ಯಾವುದೇ ಕಾರಣಕ್ಕೆ ಬಳಕೆ ಮಾಡಬಾರದೆಂದು ಶಾಲಾ ಮುಖ್ಯ ಗುರುಗಳಿಗೆ ಚಡಚಣ ವಲಯದ ಕ್ಷೇತ್ರ ಶಿಕ್ಷಣ್ರಧಿಕಾರಿಗಳು ಆದೇಶ ನೀಡಿದರು. ಈ ಸಂದರ್ಭದಲ್ಲಿ ಬಿ.ಆಯ್.ಎ.ಆರ್.ಟಿ ಬೋರಗಿ ಸರ್, ಎಸ್.ಡಿ.ಎಮ್.ಸಿ ಅಧ್ಯಕ್ಷ ನಿಂಬಣ್ಣ ತಳವಾರ, ಪವನ ಪಾಟೀಲ, ಎಸ್.ಕೆ.ಸೊನಕನಳ್ಳಿ, ಸುಭರಾಯ ಬಗಲಿ, ಸಹಶಿಕ್ಷರು ಎಸ್,ಎಮ.ಪಾಟೀಲ, ಜ್ಯೋತಿ ಬಗಲಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.