ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ 50 ವರ್ಷಗಳ ಸಂಭ್ರಮಾಚರಣೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ 50 ವರ್ಷಗಳ ಸಂಭ್ರಮಾಚರಣೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ 50 ವರ್ಷಗಳ ಸಂಭ್ರಮಾಚರಣೆ

ಬಾಗೇಪಲ್ಲಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಪ್ರೊ ಬಿ.ಕೃಷ್ಣಪ್ಪ ರವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಕಾಗದ ಕಾರ್ಖಾನೆಯ 4ನೇ ದರ್ಜೆ ನೌಕರರನ್ನು ಸಂಘಟಿಸಿ,1974-75ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕ‌ರ್ ರವರ ಆಶಯಗಳನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಚಳುವಳಿಯನ್ನು ಕಟ್ಟಿದ ಮಹಾನ್ ಹೋರಾಟಗಾರರು ಪ್ರೊ ಬಿ.ಕೃಷ್ಣಪ್ಪ ನವರು ಎಂದು ತಾಲ್ಲೂಕು ಸಂಚಾಲಕ ಕಿರಣ್ ಕುಮಾರ್ ತಿಳಿಸಿದ್ದಾರೆ. ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿ ಬಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ 50 ವರ್ಷಗಳ  ಸಂಭ್ರಮಚರಣೆ ಕಾರ್ಯಕ್ರಮದ ಅಂಗವಾಗಿ ಬಾಬ ಸಾಹೇಬ್ ಅಂಬೇಡ್ಕರ್ ಪುತ್ತಲಿಗೆ ಹೂ ಮಾಲೆ ಸಮರ್ಪಿಸುವ ಮೂಲಕ 50 ವರ್ಷಗಳ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಾವು ಹೆಣ್ಣೂರು ಶ್ರೀನಿವಾಸ್ ಅವರ ಅನುನಾಯಿಗಳಾಗಿ ಇಂದು ರಾಜ್ಯದ್ಯಂತ 50 ವರ್ಷಗಳ  ಸಂಭ್ರಮ ಸಂಭ್ರಮಿಸಲಾಗುತ್ತಿದೆ ಅದರಂತೆ ಇಂದು ಬಾಗೇಪಲ್ಲಿ ಶಾಖೆ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಸಂಭ್ರಮಚರಣೆ ಮಾಡಿದ್ದೇವೆ. ಅಂದು ಭದ್ರಾವತಿಯಲ್ಲಿ ಚಳುವಳಿ ಆರಂಭವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ತನ್ನ ಬೇರುಗಳನ್ನು ರಾಜ್ಯ ಉದ್ದಗಲಕ್ಕೂ ವ್ಯಾಪಿಸಿ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿ ಸಾವಿರಾರು ಗ್ರಾಮಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಿ,ಬಿ.ಕೆ.ಯವರು ಹಚ್ಚಿದ ಅಂಬೇಡ್ಕರ್ ಜ್ಞಾನದ ಹಣತೆಯನ್ನು ಎಂದೂ ಆರದಂತೆ ನಿರಂತರವಾಗಿ 50 ವರ್ಷಗಳು ಸಂರಕ್ಷಿಸಿಕೊಂಡು ಅಕ್ಷರ ಜ್ಞಾನವೇ ಇಲ್ಲದಿರುವ ಸಮಾಜದ ಶೋಷಿತರ ಗುಡಿಸಲುಗಳಲ್ಲಿ ಅರಿವಿನ ಜ್ಯೋತಿಯನ್ನು ಬೆಳಗಿಸಿಕೊಂಡು ಅಂಬೇಡ್ಕರ್ ವಿಚಾರಗಳನ್ನು ನಿರಂತರವಾಗಿ ಸಮಾಜದ ಚಲನ ಶೀಲತೆಯಲ್ಲಿ ಕಾಪಾಡುತ್ತಾ ಇಂದು ವಿಶ್ವಕ್ಕೆ ಅಂಬೇಡ್ಕರ್ ವಿಚಾರಗಳು ಅನಿವಾರ್ಯವಾಗಿ, ವಿಶ್ವದ ಎಲ್ಲಾ ಮೂಲ ನಿವಾಸಿಗಳಿಗೆ ಅಂಬೇಡ್ಕರ್ ವಿಚಾರಗಳೇ ಮೂಲಾದಾರವಾಗುವಂತೆ ಆಗಲು ಪ್ರಮುಖ ಜವಾಬ್ದಾರಿ ನಿರ್ವಹಿಸಿದ ಕೀರ್ತಿ ಮಹಾತ್ಮ ಪ್ರೊ. ಬಿ.ಕೃಷ್ಣಪ್ಪನವರಿಗೆ ಸಲ್ಲಬೇಕಾಗಿದೆ ಎಂದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ್, ಸದಸ್ಯ ಕುಂಟ್ಲಪಲ್ಲಿ ಮೂರ್ತಿ, ದಲಿತ ಮುಖಂಡರಾದ ಚಿನ್ನ ಪೂಜಪ್ಪ,ಗೂಳೂರು ಲಕ್ಷ್ಮಿ ನಾರಾಯಣ,ಈಶ್ವರಪ್ಪ,ಜಯಂತ್, ನವೀನ್,ನರಸಿಂಹ ಮೂರ್ತಿ, ಶ್ರೀನಿವಾಸ್, ವೆಂಕಟೇಶ್,ಸೇರಿದಂತೆ ಇತರೆ ದಲಿತ ಮುಖಂಡರು ಇದ್ದರು.