ಲಗ್ಗೆರೆಯಲ್ಲಿ ಹುತಾತ್ಮ ಯೋಧರ ದಿನಾಚರಣೆ

ಲಗ್ಗೆರೆಯಲ್ಲಿ ಹುತಾತ್ಮ ಯೋಧರ ದಿನಾಚರಣೆ

ಲಗ್ಗೆರೆಯಲ್ಲಿ ಹುತಾತ್ಮ ಯೋಧರ ದಿನಾಚರಣೆ

ಬೆಂಗಳೂರು: ಲಗ್ಗೆರೆಯ ಶ್ರೀ ವಿದ್ಯಾವಿನಾಯಕ ಯುವಕರ ಬಳಗ  ಫೆಭ್ರವರಿ 14 ನ್ನು ಪ್ರೇಮಿಗಳ ದಿನಾಚರಣೆ ಬದಲು ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಸ್ಮರಣಾ ದಿನವಾಗಿ ಆಚರಿಸಿದರು. ಜಗತ್ತಿನಾದ್ಯಂತ ಫೆಬ್ರವರಿ 14ರಂದು ಅಚರಿಸಲಾಗುತ್ತಿರುವ  ಪ್ರೇಮಿಗಳ ದಿನಾಚರಣೆ ಹಾಸ್ಯಾಸ್ಪದವಾಗಿದ್ದು, ಪ್ರೀತಿಯನ್ನು ಒಂದು ದಿನಕ್ಕೆ ಮೀಸಲಿಡುವುದು ಮೂರ್ಖತನವಾಗಿದೆ. ಪ್ರೀತಿ ಎಂಬುದು ಕೆಲವೇ ಸಂಬಂಧಗಳಿಗೆ ಸೀಮಿತವಾದುದಲ್ಲ. ರೋಮ್ ದೇಶದಲ್ಲಿ "ದ ಡೇ ಆಪ್ ರೋಮ್ಯಾನ್ಸ್" ಹೆಸರಿನ ಆಚರಣೆಯನ್ನು ವ್ಯಾಲೆಂಟೆನ್ಸ್ ಡೇ ಅಥವಾ ಪ್ರೇಮಿಗಳ ದಿಚಾರಣೆಯಾಗಿ ಭಾರತದಲ್ಲಿ ಕೂಡ ಆಚರಿಸುತ್ತಿರುವವರು ಪಾಶ್ಚಾತ್ಯ ಸಂಸ್ಕ್ರತಿಯ ಪ್ರಭಾವಕ್ಕೆ ಒಳಗಾಗಿದ್ದಾರೆ. ನಮ್ಮ  ಭಾರತ ದೇಶದ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾದದ್ದು. ನಮಗೆ ನಮದೇ ಅಸ್ಮಿತೆ ಇದೆ. ಪಾಶ್ಚಾತ್ಯರನ್ನು ಅನುಕರಿಸುವಷ್ಟು ಸಂಸ್ಕೃತಿ ಹೀನರಲ್ಲ.  ಫೆಭ್ರವರಿ 14 ಜಮ್ಮು ಕಾಶ್ಮೀರದ ಪುಲ್ವಾಮಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾದ 42 ಯೋಧರ ಸಾವುಗಳನ್ನು ದೇಶಭಕ್ತರು ಮರೆತಿಲ್ಲ. ಇಂತಹ ದಿನದಂದು  ಪ್ರೇಮಿಗಳ ದಿನಾಚರಣೆ ಹೆಸರಲ್ಲಿ ಸಂಭ್ರಮ ಸರಿಯಲ್ಲ. ಈ ದಿನ ನಮ್ಮ ದೇಶದ ಪಾಲಿಗೆ ಕರಾಳದಿನವಾಗಿದ್ದು ನಾವುಗಳು ಪುಲ್ವಾಮ ದಾಳಿಗೆ ಬಲಿಯಾದ ಹುತಾತ್ಮರನ್ನ ಸ್ಮರಿಸಬೇಕಾಗಿದೆ ಎಂದು ಗೆಳೆಯರ ಬಳಗದ ಡಿ ದೀಪು ಹೇಳಿದರು. ಬಳಗದ ರಾಮಕೃಷ್ಣ ಬಿ, ಸಂತೋಷ್, ಅಪ್ಪು,ಸಾಗರ್ ಕೆ,ಅಂಬರೀಶ್ ಆರ್ ,ಪಾಂಡುರಂಗ, ಬಸವರಾಜು ಮುಂತಾದ ಗೆಳೆಯರು ಜೊತೆಗೂಡಿ ಹುತಾತ್ಮ ಯೋದರ ಭಾವಚಿತ್ರದ ಮುಂದೆ ಮೊಂಬತ್ತಿ ಹಚ್ಚುವ ಮೂಲಕ ಹುತಾತ್ಮ ಯೋದರನ್ನು ಸ್ಮರಿಸಿದರು.