ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಸರಳವಾಗಿ ಆಚರಣೆ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಸರಳವಾಗಿ ಆಚರಣೆ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಸರಳವಾಗಿ ಆಚರಣೆ

ಬಾಗೇಪಲ್ಲಿ: ಇಂದು ತಾಲೂಕು ಆಡಳಿತ  ತಹಶೀಲ್ದಾರರ ಕಾರ್ಯಾಲಯದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ, ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಉಪ ಹಸೀಲ್ದಾರ್ ಸುಭ್ರಮಣ್ಯ ಮಾತನಾಡಿ 12ನೇ ಶತಮಾನದ ಬಸವಣ್ಣನವರ ಅನುಯಾಯಿಗಳಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಕರಲ್ಲಿ ಒಬ್ಬರಾಗಿದ್ದರು ಅವರು ನೇರ, ನಿಷ್ಠೂರ, ತರ್ಕ ವಚನಗಳಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಶ್ರೇಷ್ಠರಾಗಿದ್ದರು. ಮುಂದಿನ ದಿನಗಳಲ್ಲಿ ಅಂಬಿಗರ ಚೌಡಯ್ಯ ಜಯಂತಿಯ ಪೂರ್ವಭಾವಿ ಸಭೆ ಕರೆದು ಎಲ್ಲರ ಮಾಹಿತಿಯನ್ನು ಪಡೆದು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಹೇಳಿದರು. ರೇಷ್ಮೆ ಕೃಷಿ ನಿರ್ದೇಶಕ ಚಿನ್ನ ಕೈವಾರಮಯ್ಯ ಮಾತನಾಡಿ ಅಂಬಿಗರ ಚೌಡಯ್ಯ 12 ಶತಮಾನದಲ್ಲಿ ದಾಸ ಸಾಹಿತ್ಯದ ಪ್ರಮುಖ ಕಾಲ. ಬಸವಣ್ಣನವರ ಅನುಯಾಯಿಯಾಗಿ, ದಾಸ ಸಾಹಿತ್ಯದ ಮೂಲಕ ಸಮಾಜದ ಡೊಂಕು ತಿದ್ದುವ ಕಾರ್ಯ ಮಾಡಿದ ಅಂಬಿಗರ ಚೌಡಯ್ಯನವರ ಕೆಲಸ ಶ್ಲಾಘನೀಯ ಎಂದರು. ದಾಸ ಸಾಹಿತ್ಯದ ಮೂಲಕ ಮಹಿಳಾ ಸಮಾನತೆ ಪ್ರತಿಪಾದಿಸಿದ ಅಂಬಿಗರ ಚೌಡಯ್ಯನವರು, ಅವರದೇ ಆದ ವೈಶಿಷ್ಟ್ಯ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜದಲ್ಲಿನ ಡೊಂಕುಗಳ ಬಗ್ಗೆ ನಿರ್ಭಯವಾಗಿ ಹೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಇದನ್ನು ಅಂದಿನ ಶತಮಾನದಲ್ಲಿಯೇ ನಿರ್ಭಯವಾಗಿ  ಮೂಲಕ ವಿಶೇಷತೆ ಮೆರೆದಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮನ್ವಯ ಅಧಿಕಾರಿಗಳಾದ ಆರ್.ವೆಂಕಟರಾವ್, ಆರ್.ಹನುಮಂತ ರೆಡ್ಡಿ, ಜಿ.ಆರ್.ರಮೇಶ್, ಆದಿನಾರಾಯಣ, ಶಿವಪ್ಪ ಇನ್ನೂ ಮುಂತಾದವರು ಪ್ರಮುಖರು ಇದ್ದರು.