ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮವಹಿಸಲು ಸೂಚನೆ-ತಾ.ಪಂ.ಇಓ ಚಂದ್ರಶೇಖರ್.ಬಿ.ಕಂದಕೂರ್

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮವಹಿಸಲು ಸೂಚನೆ-ತಾ.ಪಂ.ಇಓ ಚಂದ್ರಶೇಖರ್.ಬಿ.ಕಂದಕೂರ್

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮವಹಿಸಲು ಸೂಚನೆ-ತಾ.ಪಂ.ಇಓ ಚಂದ್ರಶೇಖರ್.ಬಿ.ಕಂದಕೂರ್

ಕನಕಗಿರಿ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಗ್ರಾ.ಪಂ ಅಧಿಕಾರಿಗಳು ಕ್ರಮವಹಿಸುವಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಬಿ ಕಂದಕೂರ್ ತಿಳಿಸಿದರು. ಅವರು ಪಟ್ಟಣದ ತಾ.ಪಂ ಕಚೇರಿಯಲ್ಲಿ ಮಂಗಳವಾರ ಪಿಡಿಓ, ವಾಟರ್ ಮೆನ್ ಗಳಿಗೆ ಕುಡಿಯುವ ನೀರಿನ ಕುರಿತು ಸಭೆಯನ್ನು ನಡೆಸಿ ಮಾತನಾಡಿದರು. ಈ ಬಾರಿ ಮಳೆಯಾಗದ ಹಿನ್ನೆಲೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲು ಗ್ರಾಮೀಣ ಭಾಗದಲ್ಲಿ ಸಮಯ ನಿಗದಿಪಡಿಸಬೇಕು. ಯಾವುದೇ ಪೈಪ್ ಲೈನ್ ಲೀಕೇಜ್ ಮತ್ತು ದುರಸ್ತಿಗೊಂಡಲ್ಲಿ ಕೂಡಲೇ ಪಿಡಿಓರವರ ಗಮನಕ್ಕೆ ತಂದು ಸರಿಪಡಿಸಬೇಕು. ಪ್ರತಿ ವಾರ್ಡ್ ಗೆ ಪ್ರತ್ಯೇಕ ವಾಲ್ ಮಾಡಿ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಮಾಡಲು ಸೂಚಿಸಿದರು. ನಂತರ ನೀರನ್ನು ಬೋರ್ ವೆಲ್ ನಿಂದ ನೇರವಾಗಿ ಸರಬರಾಜು ಮಾಡದೇ ಟ್ಯಾಂಕ್ ನಲ್ಲಿ ಸಂಗ್ರಹಿಸಿ ಸರಬರಾಜು ಮಾಡಲು ಸೂಚಿಸಿದರು. ಜೊತೆಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಮಸ್ಯೆ ಬರುವ ಗ್ರಾಮಗಳನ್ನು ಗುರುತಿಸಿ ಖಾಸಗಿ ಬೋರ್ವೆಲ್ ಮಾಲೀಕರಿಂದ ಒಪ್ಪಂದದ ಮೂಲಕ ಕರಾರು ಮಾಡಿಕೊಂಡು ಸಿದ್ಧತೆಯಲ್ಲಿ ಇಟ್ಟುಕೊಳ್ಳಲು ಸೂಚಿಸಿದರು. ವಾಟರ್ ಮೆನ್ ಸಿಬ್ಬಂದಿಗಳು ಕುಡಿಯುವ ನೀರಿನ ಕುರಿತು ಹೆಚ್ಚಿನ ಮುತುವರ್ಜಿವಹಿಸಿ ಕರ್ತವ್ಯ ನಿರ್ವಹಿಸಲು ತಿಳಿಸಿದರು. ಈ ವೇಳೆ ಸಹಾಯಕ ನಿರ್ದೇಶಕ (ಪಂ.ರಾ) ವೀರಣ್ಣ ನಕ್ರಳ್ಳಿ, ಯೋಜನಾಧಿಕಾರಿ ರಾಜಶೇಖರ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ವಾಟರ್ ಮ್ಯಾನ್ (ನೀರು ಘಂಟೆ)ಗಳು ಭಾಗವಸಿದ್ದರು.