ಮಕ್ಕಳಮನೆಯಲ್ಲಿ ಶಿವಶರಣ ಅಂಬಿಗರ ಚೌಡಯ್ಯನವರ ಜಯಂತಿ

ಮಕ್ಕಳಮನೆಯಲ್ಲಿ ಶಿವಶರಣ ಅಂಬಿಗರ ಚೌಡಯ್ಯನವರ ಜಯಂತಿ

ಮಕ್ಕಳಮನೆಯಲ್ಲಿ ಶಿವಶರಣ ಅಂಬಿಗರ ಚೌಡಯ್ಯನವರ ಜಯಂತಿ

ನಂಜನಗೂಡು ಅನುರಾಗ ಟ್ರಸ್ಟ್ ಮಕ್ಕಳಮನೆಯಲ್ಲಿ ಶಿವಶರಣ ಅಂಬಿಗರ ಚೌಡಯ್ಯನವರ ಜಯಂತಿ ನಡೆಯಿತು. ಸಾನಿಧ್ಯವಹಿಸಿದ್ದ ನರಸಿಂಹರಾಜಪುರ ಬಸವಕೇಂದ್ರದ ಪೂಜ್ಯಶ್ರೀ ಬಸವಯೋಗಿಪ್ರಭುಗಳು ವಚನಾನುಭಾವ ಮಾಡಿದರು. ಹನ್ನೇರಡನೇಯ ಶತಮಾನದಲ್ಲಿ ಕಲ್ಯಾಣದಲ್ಲಿ ವಿಶ್ವಗುರು ಬಸವಣ್ಣನವರ ಅನುಭವ ಮಂಟಪದಲ್ಲಿ ಪಳಗಿದವರು ನಿಜಶರಣ ಅಂಬಿಗರ ಚೌಡಯ್ಯ ಸುಮಾರು 280 ವಚನಗಳನ್ನು ತಮ್ಮ ಹೆಸರನ್ನೇ ಅಂಕಿತನಾಮದಲ್ಲಿ ಬರೆದಿದ್ದಾರೆ. ರಾಣಿಬೆನ್ನೂರು ಹತ್ತಿರ ಚೌಡದಾನಪುರದಲ್ಲಿ ಚೌಡಯ್ಯನವರ ಗದ್ದುಗೆ ಇದೆ.ಚೌಡಯ್ಯನವರು ದೋಣಿ ನಡೆಸುವ ಅಂಬಿಗ ಕಾಯಕವನ್ನು ಮಾಡುತ್ತಿದ್ದರು. ವೀರಗಣಾಚಾರಿಯಾಗಿದ್ದವರು  ತಪ್ಪು ಕಂಡುಬಂದಲ್ಲಿ ನೇರವಾಗಿ ದಿಟ್ಟವಾಗಿ ದಂಡಿಸುತ್ತಿದ್ದರು ಹೇಳುತ್ತಿದ್ದರು. ಗಣಾಚಾರದ ವಚನಗಳ ಮೂಲಕ ಪೋಲಿಸ್ ಭಾಷೆಯಲ್ಲಿ ಧಮ೯ವನ್ನು ಜಾಗೃತಿ ಮಾಡುತ್ತಿದ್ದರು. ಲಿಂಗವಂತರಾಗಿ ಸಿಡಿಯಾಡುವುದು ಬಾಯಬೀಗ ಹಾಕಿಸಿಕೊಳ್ಳುವುದು ದೇವರು ಮೈ ಮೇಲೆ ಬಂತು ಎಂದು ಮೌಢ್ಯತೆಯಲ್ಲಿರುವವರಿಗೆ ಶಿವದ್ರೋಹಿಗಳು ಎಂದು ಚಾಟಿ ಏಟು ನೀಡಿದ್ದಾರೆ.ಜೀವನದುದ್ದಕ್ಕೂ ಹಲವಾರು ಚಿಂತೆಯಲ್ಲಿ ವ್ಯಥ೯ ಜೀವನ ಮಾಡುತ್ತೇವೆ. ಇರುವಷ್ಟು ದಿವ ಶಿವಚಿಂತೆಯಲ್ಲಿರಬೇಕು ಎಂದು ಜಾಗೃತಿ ಮೂಡಿಸುತ್ತಾರೆ.ಸತ್ತಾಗ ಜೊತೆ ಹೂಳಿಸಿಕೊಂಬ ಇಷ್ಟ ಲಿಂಗವನ್ನು ಬಿಟ್ಟು ಅನ್ಯ ಲಿಂಗಕ್ಕೆ ಬಹುದೈವಕ್ಕೆ ಎರಗುವವರಿಗೆ ಭ್ರಷ್ಟರು ಎಂದು ತೀವಿದಿದ್ದಾರೆ. ದಾರಿತಪ್ಪುವ ಡಾಂಭಿಕ ಜಂಗಮರಿಗೆ ಅರಿವು ಆಚಾರವಿಲ್ಲದ ವೇಷದಾರಿಗಳಿಗೆ ಭಕ್ತರಿಗೆ ಮೋಸ ಮಾಡುವ  ದಾಮಿ೯ಕ ಮುಖಂಡರಿಗೂ ಎಚ್ಚರಿಕೆ ನೀಡಿದ್ದಾರೆ. ಲಿಂಗಾಯತ ಧಮ೯ದಲ್ಲಿ ಹುಟ್ಟಿ ಪರದೈವ ಪೂಜೆ ಪರದೈವದ ಭಜನೆ ಪರಹಿಂಸೆ ಮಾಡಬಾರದು ಎನ್ನುತ್ತಾರೆ ನಿಜಶರಣ ಅಂಬಿಗರ ಚೌಡಯ್ಯ ಎಂದು ಬಸವಯೋಗಿಪ್ರಭುಗಳು ಅನುಭಾವ ನೀಡಿದ್ದರು. ಈ ಸಂದಭ೯ದಲ್ಲಿ ಮಕ್ಕಳ ಮನೆ ಸಂಸ್ಥಾಪಕ ಡಿ.ಜಿ. ಸೋಮಶೇಖರ್ ಮೂತಿ೯ ವಿದ್ಯಾಥಿ೯ ಹರೀಶ್ ಜೊತೆಯಲ್ಲಿ ವಿದ್ಯಾಥಿ೯ಗಳು ಭಾಗವಹಿಸಿದ್ದರು.