ಆಧುನಿಕ ತಂತ್ರಜ್ಞಾನ ಭರಾಟೆಯಲ್ಲಿ ಅನೇಕ ಜಾನಪದ ಕಲೆಗಳು ಅವಸಾನದ ಹಾದಿ ಹಿಡಿದಿದೆ

ಆಧುನಿಕ ತಂತ್ರಜ್ಞಾನ ಭರಾಟೆಯಲ್ಲಿ ಅನೇಕ ಜಾನಪದ ಕಲೆಗಳು ಅವಸಾನದ ಹಾದಿ ಹಿಡಿದಿದೆ

ಆಧುನಿಕ ತಂತ್ರಜ್ಞಾನ ಭರಾಟೆಯಲ್ಲಿ ಅನೇಕ ಜಾನಪದ ಕಲೆಗಳು ಅವಸಾನದ ಹಾದಿ ಹಿಡಿದಿದೆ

ಅರಸೀಕೆರೆ: ಆಧುನಿಕ ತಂತ್ರಜ್ಞಾನ, ಮೊಬೈಲ್‌, ಟಿ.ವಿ., ಕಂಪ್ಯೂಟರ್‌, ಇಂಟರ್‌ನೆಟ್‌ ಭರಾಟೆಯಲ್ಲಿ ಅನೇಕ ಜಾನಪದ ಕಲೆಗಳು  ಅವಸಾನದ ಹಾದಿ ಹಿಡಿದಿದೆ ಎಂದು ಕೋಲಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು. ಅರಸೀಕೆರೆ ಸಮೀಪದ ಕೆರೆ ಗುಡಿಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಕೊನ್ನಪುರ ಚೌಡೇಶ್ವರಿ ಪ್ರಥಮ ವರ್ಷದ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತರಾತ್ರಿ ಅರ್ಥಾತ್ ವೀರ ಅಶ್ವತ್ಥಾಮ ನಾಟಕ ಗಣ್ಯರು ಉದ್ಘಾಟಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕಲೆಯನ್ನೇ ನಂಬಿಕೊಂಡು ಜೀವನದ ಬಂಡಿ ಸಾಗಿಸುವ ಕಲೆಗಾರರ ಬದುಕು ಈಚೆಗೆ ಮುಳುಗುತ್ತಿರುವ ದೋಣಿಯಾಗಿದೆ. ಸಂಕಷ್ಟದಲ್ಲಿರುವ ಕಲೆಗಾರರನ್ನು ಗುರುತಿಸಿ ಅಕಾಡೆಮಿ ಪ್ರೋತ್ಸಾಹಿಸಿಬೇಕು. ಇಂದಿನ ಯುವ ಪೀಳಿಗೆ ಕಲೆಯೊಂದಿಗೆ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಿದರೆ ಸಮ ಸಮಾಜದ ನಿರ್ಮಾಣ ಸಾಧ್ಯ. ಶಿಕ್ಷಣದೊಂದಿಗೆ ನಾಡಿನ ಸಂಸ್ಕೃತಿ ಬಿಂಬಿಸುವ ಜಾನಪದ ಸಾಹಿತ್ಯವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು. ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಗ್ರಾಮೀಣ ಪ್ರದೇಶದ ಕಲೆಗಾರರನ್ನು ಗುರುತಿಸಿ ಗೌರವ, ಪ್ರಶಸ್ತಿ ನೀಡಿ ಕಲೆಯನ್ನು ಉತ್ತೇಜಿಸಬೇಕು ಎಂದರು. ಪ್ರಥಮ ವರ್ಷದ ಜಾತ್ರೆಯ ಅಂಗವಾಗಿ ಸೋಮವಾರ ಚೌಡೇಶ್ವರಿ ದೇವಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ನಾಗದೀಪ, ಪಂಚದೀಪ, ಸಹಸ್ರದೀಪ, ಮಂತ್ರಪುಷ್ಪ ಹಾಗೂ ಮಹಾಮಂಗಳಾರ್ತಿ ನಡೆದವು.  ಜಾತ್ರೆಯ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂಗ ಅಲಂಕಾರ ಮಾಡಲಾಗಿತ್ತು. ದೇವಿಯನ್ನು ಫಲ, ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಈ ಸಂದರ್ಭದಲ್ಲಿ ಮುಖಂಡರಾದ ವಿ.ತಿಮ್ಮೇಶ್, ವೆಂಕಟೇಶ್, ಶಿವಪ್ಪ, ಶೇಖರಪ್ಪ, ತಿಮ್ಮೇಶ್, ದುರ್ಗಪ್ಪ, ಕೆ.ನಾಗರಾಜ್, ಶಿವನಗಾಗಪ್ಪ, ಅಜ್ಜಪ್ಪ, ಬಿ.ಮೂಗಪ್ಪ, ಬಿ. ಸುರೇಶ್, ಬಿ.ವೀರೇಶ್, ಬಸವರಾಜಪ್ಪ, ಹನುಮಂತಪ್ಪ ಭಾಗಿಯಾಗಿದ್ದರು.