ವೇಮಗಲ್ ಡೈರಿಗೆ ಅಧ್ಯಕ್ಷರಾಗಿ ವಿ.ಎಂ. ಶ್ರೀನಿವಾಸ್ ರವರು ಆಯ್ಕೆ

ವೇಮಗಲ್ ಡೈರಿಗೆ ಅಧ್ಯಕ್ಷರಾಗಿ ವಿ.ಎಂ. ಶ್ರೀನಿವಾಸ್ ರವರು ಆಯ್ಕೆ

ಕೋಲಾರ : ತಾಲೂಕಿನ ವೇಮಗಲ್ ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಯರ್ರಪ್ಪನವರ ವಿ.ಎಂ. ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ನಾರಾಯಣಸ್ವಾಮಿ ಅವಿರೋಧವಾಗಿ ಬುಧವಾರ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಸಿ. ಗಾಯಿತ್ರಿ ರವರು ಘೋಷಿಸಿದರು.

ನಂತರ ಮಾತನಾಡಿದ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯರ್ರಪ್ಪನವರ ವಿ.ಎಂ. ಶ್ರೀನಿವಾಸ್ ರವರು ಪಕ್ಷಾತೀತವಾಗಿ ನನ್ನನ್ನು ಊರಿನ ಎಲ್ಲಾ ಮುಖಂಡರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ಸದಸ್ಯರು ನನ್ನನ್ನು ಬೆಂಬಲಿಸಿದ ಕಾರಣ ಅತಿ ಚಿಕ್ಕ ವಯಸ್ಸಿನಲ್ಲೇ ಅಧ್ಯಕ್ಷನಾಗಿದ್ದೇನೆ ಹಿರಿಯರ ಮಾರ್ಗದರ್ಶನ ಪಡೆದು ಡೈರಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಹಾಗೂ ಒಕ್ಕೂಟದಿಂದ ಬರುವಂತಹ ಎಲ್ಲಾ ಸೌಲಭ್ಯಗಳನ್ನು ಪಕ್ಷಾತೀತವಾಗಿ ಫಲಾನುಭವಿಗಳಿಗೆ ಹಂಚುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುವೆ, ರೈತರು ಕಷ್ಟನಷ್ಟದ ನಡುವೆ ರಾಸುಗಳನ್ನು ತಮ್ಮ ಮನೆಯ ಮಕ್ಕಳಂತೆ ಸಾಕಿ ಸಲುಹಿ ಹಾಲು ಸರಬರಾಜು ಮಾಡುತ್ತಾರೆ ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಹಾಲು ಉತ್ಪಾದಕರ ಸಂಘದ ಹಣವನ್ನು ದುರುಪಯೋಗವಾಗದೆ ಸಂಘವನ್ನು ಪಾರದರ್ಶಕವಾಗಿ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

ನಂತರ ವೇಮಗಲ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಊರಿನ ಹಿರಿಯ ಮುಖಂಡರಾದ ಮಾಜಿ ಸಭಾಪತಿಗಳಾದ ವಿ ಆರ್ ಸುದರ್ಶನ್ ರವರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಸಲಹೆ ಸೂಚನೆಗಳನ್ನು ಪಡೆದು ಆಶೀರ್ವಾದ ಪಡೆದುಕೊಂಡರು. 

ಈ ಸಂದರ್ಭದಲ್ಲಿ ರಿಟರ್ನಿಂಗ್ ಅಧಿಕಾರಿ ಗಾಯತ್ರಿ.ಸಿ ,ಅಧ್ಯಕ್ಷರಾದ ಯರ್ರಪ್ಪನವರ ವಿ.ಎಂ ಶ್ರೀನಿವಾಸ್, ಉಪಾಧ್ಯಕ್ಷರಾದ ನಾರಾಯಣಸ್ವಾಮಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಸಂಜಯ್ ಕುಮಾರ್.ಎಸ್,ಹಾಲು  ಪರೀಕ್ಷಕರಾದ ಕಾಂತರಾಜು, ಸಹಾಯಕಿ ಲಕ್ಷ್ಮೀದೇವಿ, ಸಹಾಯಕ ನಾಗೇಶ್.ವಿ, ಹಾಗೂ ನೂತನ ಸಹಕಾರ ಸಂಘದ ಸದಸ್ಯರಾದ  ರಾಜಗೋಪಾಲಯ್ಯ, ಅಶ್ವತಪ್ಪ, ತವಕಲ್ ಸಾಬ್, ಹರೀಶ್ ವಿ.ಜಿ, ಶ್ರೀನಿವಾಸ್ ವಿ.ಡಿ, ಪ್ರಕಾಶ್. ವಿ,ಮುರುಳಿ.ಕೆ,ನಾಗಮಣಿ.ಎಂ, ಸಾವಿತ್ರಮ್ಮ. ಉಪಸ್ಥಿತರಿದ್ದರು.