ಕೆಜಿಎಫ್ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕ ಉದ್ಘಾಟನೆ

ಕೆಜಿಎಫ್ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕ ಉದ್ಘಾಟನೆ

ಕೆಜಿಎಫ್ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕ ಉದ್ಘಾಟನೆ

ಕೆಜಿಎಫ್: ನಾಲ್ಕು ಸಾಲುಗಳಲ್ಲಿ ಮುಖ್ಯ ವಿಷಯವನ್ನು ವರ್ಣಿಸುವ ಚುಟುಕು ಸಾಹಿತ್ಯ ಕೋಲಾರ ಜಿಲ್ಲೆಯಲ್ಲಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲಿ ಬೆಳ್ಳಿ ಹಬ್ಬವನ್ನು ಆಚರಣೆ ಮಾಡುವದಾಗಿ ಕೋಲಾರ ಜಿಲ್ಲಾ ಚಿಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ .ನಾರಾಯಣಪ್ಪ ಹೇಳಿದರು. ರಾಬರ್ಟ್ ಸನ್ ಪೇಟೆ ಕನ್ನಡ ಸಂಘದಲ್ಲಿ ಭಾನುವಾರ ನಡೆದ ತಾಲೂಕು ಚುಟುಕು ಸಾಹಿತ್ಯ ಪರಿಷತ್ ನೂತನ ಘಟಕಕ್ಕೆ ಚಾಲನೆ ನೀಡಿ  ಮಾತನಾಡಿದರು. ನಾಡಿನ ಸಾಹಿತ್ಯ.ಸಂಸ್ಕೃತಿ. ಇತಿಹಾಸ ಎಲ್ಲವನ್ನು ನಾಲ್ಕು ಸಾಲಿನಲ್ಲಿ ವರ್ಣನೆ ಮಾಡಲು ಚುಟುಕು ಸಾಹಿತ್ಯದಲ್ಲಿ ಸಾಧ್ಯ. ಕುಟುಕು ಸಾಹಿತ್ಯ ಘಟಕವನ್ನು ಕೋಲಾರ ಜಿಲ್ಲೆಯಲ್ಲಿ  ಜೀವಂತವಾಗಿಡಲು ಬಹುತೇಕ ಹಿರಿಯರು ಕಟ್ಟಿ ಬದ್ಧವಾಗಿ ನಿಂತಿದ್ದಾರೆ. ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಚುಟುಕು ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರಿಗೆ ವೇದಿಕೆ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು. ಸಾಹಿತಿ ಪರಮೇಶ್ ಮಾತನಾಡಿ. ಯಾವುದೇ ಸಂಸ್ಥೆಯನ್ನು ಬೆಳೆಸುವುದು ಮತ್ತು ಉಳಿಸುವ ಕೆಲಸ ಆಗಬೇಕು ಬೆಳೆಸಿದ್ದನ್ನು ಉಳಿಸಿದಾಗಲೇ ಸಂಘಟನೆ ಗಟ್ಟಿಯಾಗಿ ಬೆಳೆಯುತ್ತದೆ. ಚುಟುಕು ಸಾಹಿತ್ಯದಲ್ಲಿ ಪಂಚ್ ಇರಬೇಕು. ಚುಟುಕು ಸಾಹಿತ್ಯ ಆಸಕ್ತರನ್ನು ಗುರುತಿಸಲು ಗಡಿ ಗಡಿ ಭಾಗದಲ್ಲಿ ಘಟಕ ಪ್ರಾರಂಭಿಸಿರುವುದು ಸಂತಸದ ಸಂಗತಿ ಎಂದರು. ಈ ಸಂದರ್ಭದಲ್ಲಿ ಸಾಹಿತಿ ಶರಣಪ್ಪ ಗಬ್ಬೂರು. ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನ ರೆಡ್ಡಿ. ಹಿರಿಯ ಕವಿ ಕೋಗಿಲ ಹಳ್ಳಿ ಕೃಷ್ಣಪ್ಪ. ಕಲಾವತಿ ಫ್ರೂಟ್ಸ್ ಮಂಜು. ವಿ ಬಿ ದೇಶಪಾಂಡೆ. ವೀರ ವೆಂಕಟಪ್ಪ .ಗೀತಾ. ಅಸಿಫಾ ಬೇಗಮ್. ಗಾಯತ್ರಿ ಇದ್ದರು. ನೂತನ ಘಟಕದ ಅಧ್ಯಕ್ಷರಾಗಿ ರಾಧಾ ಪ್ರಕಾಶ್. ಗೌರವಾಧ್ಯಕ್ಷರಾಗಿ ಡಿ.ಕೆ .ಸುರೇಶ್. ಉಪಾಧ್ಯಕ್ಷರಾಗಿ ತಿಪ್ಪೆ ರಂಗಪ್ಪ. ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಥ್. ಪತ್ರಿಕಾ ಕಾರ್ಯದರ್ಶಿಯಾಗಿ.ತ್ಯಾಗರಾಜ್. ಖಜಾಂಚಿಯಾಗಿ ಯೋಗೇಂದ್ರ ಆಯ್ಕೆಯಾದರು.