ನಕಲಿ ಕಂಪನಿಯಲ್ಲಿ ಹಣ ಹೊಡಿಕೆ ಮೋಸ:ದೂರು ದಾಖಲು

ನಕಲಿ ಕಂಪನಿಯಲ್ಲಿ ಹಣ ಹೊಡಿಕೆ ಮೋಸ:ದೂರು ದಾಖಲು

 ಶ್ರೀ ಸತೀಶ್ ಬಿನ್ ತ್ಯಾಗರಾಜ್, ಕೋರಮಂಡಲ ಕೆಜಿಎಫ್ ವಾಸಿ ಮತ್ತು ಇತರೆ 41 ಜನ ನೊಂದ ವ್ಯಕ್ತಿಗಳು ಅವರ ಟ್ರೇಡಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ (ವರ್ಕ್ ಫಾರ್ಮ್ ಹೋಂ ) ಕೆಲಸದ ಜೊತೆ ಹಣ ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ದಿನ ಲಾಭಾಂಶ ಕೊಡುವುದಾಗಿ ನಂಬಿಸಿ. 20 23ನೇ ಸೆಪ್ಟೆಂಬರ್ ಮಾಹೇ 2024ನೇ ಜನವರಿ ಅಂತ್ಯದವರೆಗೆ ಸ ಸುಮಾರು 150ಕ್ಕೂ ಹೆಚ್ಚಿನ ಟ್ರೇಡಿಂಗ್ ಕಂಪನಿ ಅವರ ವಾಟ್ಸಪ್ ಮುಖಾಂತರ ವಿವಿಧ ಲಿಂಕ್ಗಳನ್ನು ಕಳುಹಿಸಿ ಅವರ ಮುಖಾಂತರ ಒಟ್ಟು 42 ನೊಂದ ವ್ಯಕ್ತಿಗಳಿಂದ 67,00,880 ರೂಗಳನ್ನು 150ಕ್ಕೂ ಹೆಚ್ಚು ನಕಲಿ ಟ್ರೇಡಿಂಗ್ ಕಂಪನಿಗಳ ಖಾತೆಗಳಿಗೆ ಹಾನಿ ವರ್ಗಾವಣೆ ಮಾಡಿಕೊಂಡು ನಂತರ ಆಪ್ ಬ್ಲಾಕ್ ಮಾಡಿದ್ದು, ಈ ಬಗ್ಗೆ ನೊಂದ  ವ್ಯಕ್ತಿಗಳು ಕೆಜಿಎಫ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ದೂರಿನ ಮೇರೆಗೆ ವಂಚನೆ ಪ್ರಕರಣ ದಾಖಲಿಸಿಕೊಂಡು, ತನಿಖೆಯನ್ನು ಕೆಜಿಎಫ್ ಜಿಲ್ಲಾ ಪೊಲೀಸ್ ಆದಿಕ್ಷಕರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾದ ಶ್ರೀ ಲಕ್ಷ್ಮಿ ನಾರಾಯಣ್. ಪೊಲೀಸ್ ಇನ್ಸ್ಪೆಕ್ಟರ್ ರವರು ಆರೋಪಿಗಳನ್ನು ಪತ್ತೆ ಮಾಡಿ ನೊಂದ ವ್ಯಕ್ತಿಗಳಿಗೆ ನ್ಯಾಯ ದೊರಕಿ ಕೊಡಲು ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತಾರೆ. ಸಾರ್ವಜನಿಕರು ಹಣದ ಅಮಿಷಕ್ಕೆ ಒಳಗಾಗಿ ಇಂತಹ ಯಾವುದೇ ನಕಲಿ ಅಬ್ಗಲ ಬಗ್ಗೆ ಹೆಚ್ಚಿನ ಎಚ್ಚರವಹಿಸಿ ನಕಲಿ ಅಕೌಂಟ್ಗಳಿಗೆ ಹಣ ಪಾವತಿ ಮಾಡಿ ಮೋಸ ಹೋಗದಂತೆ ಸಾರ್ವಜನಿಕರಲ್ಲಿ ಕೆಜಿಎಫ್ ಪೊಲೀಸ್ ವತಿಯಿಂದ ಕೋರಲಾಗಿದೆ