ಸಂವಿಧಾನ ಜಾಗೃತಿ ಜಾಥಾಕ್ಕೆ ಅಭೂತ ಪೂರ್ವ ಸ್ವಾಗತ ಕೋರಿದ ತಾಲೂಕು ಆಡಳಿತ

ಸಂವಿಧಾನ ಜಾಗೃತಿ ಜಾಥಾಕ್ಕೆ ಅಭೂತ ಪೂರ್ವ ಸ್ವಾಗತ ಕೋರಿದ ತಾಲೂಕು ಆಡಳಿತ

ಸಂವಿಧಾನ ಜಾಗೃತಿ ಜಾಥಾಕ್ಕೆ ಅಭೂತ ಪೂರ್ವ ಸ್ವಾಗತ ಕೋರಿದ ತಾಲೂಕು ಆಡಳಿತ

ಚನ್ನರಾಯಪಟ್ಟಣ: ತಾಲೂಕಿನಾದ್ಯಂತ  ಸಂವಿಧಾನದ ಆಶಯಗಳನ್ನು ಹೊತ್ತು ಸಾಗುತ್ತಿರುವ ಸಂವಿಧಾನ ಜಾಗೃತಿ ಜಾಥಾಕ್ಕೆ ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದ ಹೇಮಾವತಿ ಇಲಾಖೆಯ ಮುಂಭಾಗದಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದವರೆಗೆ ಭವ್ಯ ಮೆರವಣಿಗೆ ನಡೆಯಿತು, ಶಾಸಕರಾದ ಸಿಎನ್ ಬಾಲಕೃಷ್ಣರವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡುವ ಮೂಲಕ ಅಭೂತ ಪೂರ್ವ ಸ್ವಾಗತ ಕೋರಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸಕ ಎಂ ಜೆ ರತ್ನಾಕರ್ ಮಾತನಾಡಿ ಸಂವಿಧಾನವೆಂಬುದು ಕೇವಲ ಕಾನೂನಿನ ಗ್ರಂಥವಲ್ಲ ಅದು ಆಧುನಿಕ ಭಾರತದಲ್ಲಿ ಜನರ ಜೀವನವನ್ನು ಪುನರುಜ್ಜೀವನಗೊಳಿಸಿದ ಒಂದು ಮಹಾನ್ ಗ್ರಂಥ ಇಂತಹ ಮಹಾನ್ ಗ್ರಂಥವನ್ನು ಕೊಡುಗೆಯಾಗಿ ನೀಡಿದ ಅಂಬೇಡ್ಕರ್ ರವರು ಭಾರತಮಾತೆಯ ಪಾದಗಳಿಗೆ ಚಿನ್ನದ ಪಾದಕ್ಕೆಗಳನ್ನು ತೊಡಿಸಿ ತನಗೆ ವಜ್ರ ಖಚಿತ ಕಿರೀಟವನ್ನು ತೋರಿಸಿದ ಭಾರತಮಾತೆಯ ಸುಪ್ರತ್ರ ಎಂದು ಕರೆಯಬೇಕು, ನಮ್ಮ ಸಂವಿಧಾನವು ಯಶಸ್ವಿ ಆಗಬೇಕಾದರೆ ಅದರ ಆಧಾರ ಸ್ತಂಭಗಳಾದ ನ್ಯಾಯ, ಸ್ವತಂತ್ರ , ಸಮಾನತೆ ಮತ್ತು ಭ್ರಾತೃತ್ವ ಭಾವನೆಗಳು ನೆಲಗೊಂಡಾಗ ಮಾತ್ರ ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದರು. ಸಂವಿಧಾನದ ಅಥವಾ ಪ್ರಜಾಪ್ರಭುತ್ವದ ಯಶಸ್ಸು ನಿಂತಿರುವುದು ಆ ದೇಶದಲ್ಲಿ ನೆಲೆಗೊಂಡಿರುವ ಸಾಮಾಜಿಕ ಪ್ರಜಾಪ್ರಭುತ್ವದ ಮೇಲೆ ಹಾಗಾದರೆ ನಮ್ಮ ಭಾರತ ದೇಶದಲ್ಲಿ ಸಂವಿಧಾನಕ್ಕೂ ಮುಂಚೆ ಇದ್ದಂತಹ ವ್ಯವಸ್ಥೆಯನ್ನು ನಾವು ಇತಿಹಾಸವನ್ನು ತಿರುವಿದಾಗ ಸಂವಿಧಾನಕ್ಕೂ ಮುಂಚೆ 1900ರಲ್ಲಿ ನಮ್ಮ ದೇಶದ ಸಾಕ್ಷರತೆ ಕೇವಲ ಐದು ಪರ್ಸೆಂಟ್ ಇತ್ತು. ಆಗಿನ ಕಾಲದಲ್ಲಿ ಶಿಕ್ಷಣವೆಂಬುದು ಸರ್ಕಾರದ ಭಾಗವಾಗಿರಲಿಲ್ಲ ಆದರೆ ಇಂದು ನಾವುಗಳೆಲ್ಲ ಶಿಕ್ಷಣವನ್ನು ಪಡೆಯುತ್ತಿದ್ದೇವೆ ಸಾಕ್ಷರತೆಯ ಪ್ರಮಾಣ 85% ಇದೆ ಸಾಧ್ಯವಾಗಿರುವುದು ಅಂಬೇಡ್ಕರ್ ಬರೆದಂತಹ ಸಂವಿಧಾನದಿಂದ ಮಾತ್ರ ಹಾಗಾಗಿ ನಾವು ಇವತ್ತು ಕಡ್ಡಾಯ ಶಿಕ್ಷಣ ಪಡೆಯುತ್ತಿರುವ ಪ್ರತಿಯೊಬ್ಬರು ಕೃತಜ್ಞರಾಗಿರಬೇಕಾಗಿದ್ದು ಸಂವಿಧಾನಕ್ಕೆ ಹಾಗೆ ಸ್ವತಂತ್ರ ಪೂರ್ವದಲ್ಲಿ 50% ಹೆಣ್ಣು ಮಕ್ಕಳನ್ನು ಶಿಕ್ಷಣ ಮತ್ತು ಅವಕಾಶಗಳಿಂದ ವಂಚನೆ ಮಾಡಿ ಕತ್ತಲಲ್ಲಿ ಇಡಲಾಗಿತ್ತು ಇದು ನಮ್ಮ ದೇಶದ ಅಭಿವೃದ್ಧಿಗೆ ಮಾರಕವಾಗಿತ್ತು. ಈ ದೋಷವನ್ನು ಮನಗಂಡಂತಹ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಆರ್ಟಿಕಲ್ 15ನ್ನು ಸೇರಿಸಿ ಮಹಿಳೆಯರಿಗೆ ಹಾಗೂ ಮಹಿಳೆಯರ ಏಳಿಗೆಗೆ ಶಿಕ್ಷಣವನ್ನು ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತಂದರು, ಇದು ಕೂಡ ದೊಡ್ಡ ಪವಾಡವೇ ಸರಿ ಸ್ವತಂತ್ರ ಪೂರ್ವದಲ್ಲಿ ಉದ್ಯೋಗವನ್ನು ಮಾಡಬೇಕಾದರೆ ಅದು ಕುಲಕುಸುಬು ಆಗಿರಬೇಕಿತ್ತು , ಅಂದರೆ ಚಮ್ಮಾರನ ಮಗ ಚಮ್ಮಾರ ,ಕುಂಬಾರನ ಮಗ ಕುಂಬಾರ ,ಬಡಗಿ ಆಗಬೇಕಿತ್ತು, ಆದರೆ ಸಂವಿಧಾನ ಇವತ್ತು ಒಬ್ಬ ಚಮ್ಮಾರನ ಮಗ ಐಎಎಸ್ ಆಫೀಸರ್ ಆಗಬಹುದು, ಒಬ್ಬ ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯುವಾಗಬಹುದು ಎಂಬುದನ್ನ ಸಾಬೀತುಪಡಿಸಿದೆ ಹಾಗಾಗಿ ಸಂವಿಧಾನದ ಈ ಒಂದು ಅಪೂರ್ವವಾದ ಕೊಡುಗೆ ಭಾರತದಲ್ಲಿ ಸಮಾನತೆ ನಡೆದುಕೊಳ್ಳಲು ಆಶಾ ಭಾವನೆಯನ್ನು ಹುಟ್ಟು ಹಾಕಿದೆ ಆದರೆ ಸಮಾಜದಲ್ಲಿ ಶತಮಾನಗಳ ಕಾಲ ತಳವೂರಿದ್ದಂತ ಅಸ್ಪೃಶ್ಯತೆಯನ್ನು ಜೀವಂತವಿದೆ ಈ ಅಸ್ಪೃಶ್ಯತೆ ಕಾರಣದಿಂದಾಗಿ ಇಂದಿಗೂ ಕೂಡ ನಮ್ಮ ದೇಶದಲ್ಲಿ ಸಹೋದರತ್ವದ ಭಾವನೆ, ಜನಮಾನಸದಲ್ಲಿ ಪೂರ್ಣ ನೆಲೆಗೊಂಡಿಲ್ಲ ಹಾಗಾಗಿ ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ, ಪ್ರಜಾಸತ್ತಾತ್ಮಕ ,ಶ್ರೇಷ್ಠ ಗಣರಾಜ್ಯೋಶವನ್ನಾಗಿ ಮಾಡಲು ನಮ್ಮ ನಡುವೆ ಭ್ರಾತೃತ್ವ ಭಾವನೆಯನ್ನು ನೆಲಗೊಳಿಸುವಂತಹ ಆಲೋಚನೆಗಳನ್ನು ಹಾಗೂ ಆಚರಣೆಗಳನ್ನು ಜಾರಿಗೆ ತರುವುದು ಅತ್ಯಂತ ಅಗತ್ಯ,ಅಂಬೇಡ್ಕರ್ ಅವರು ಒಂದು ಕಡೆ ಹೇಳುತ್ತಾರೆ ಒಂದು ದೇಶದ ಸಂವಿಧಾನ ಹೆಚ್ಚು ಅರ್ಥಪೂರ್ಣವಾಗುವುದು ಆ ಸಂವಿಧಾನ ಶ್ರೇಷ್ಠವಾಗಿರುವುದರಿಂದ ಅಲ್ಲ ಬದಲು ಸಂವಿಧಾನವನ್ನು ಆಳ್ವಿಕೆ ಮಾಡುವ ಜನರು ಶ್ರೇಷ್ಠವಾಗಿದ್ದಾಗ ಮಾತ್ರ ,ಸಂವಿಧಾನದ ಕಾನೂನುಗಳು ಶ್ರೇಷ್ಠವಾಗಿ ಕಾಣುತ್ತವೆ ಈ ಮಾತು ಅತ್ಯಂತ ಎಚ್ಚರಿಕೆ ಗಂಟೆಗಳು ಹಾಗಾಗಿ ನಾವುಗಳು ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಗಳು ಬಂದಾಗ ಪಕ್ಷ ,ಜಾತಿ,ಮತ, ಭೇದ,ಇವೆಲ್ಲವನ್ನು ಮೀರಿ ಶ್ರೇಷ್ಠ ನಾಯಕತ್ವವನ್ನು ಆರಿಸುವ ಮೂಲಕ ಭಾರತೀಯತೆಯನ್ನು ಮೆರೆಯುವ ಮೂಲಕ ಸಂವಿಧಾನವನ್ನು ಉಳಿಸಬೇಕಾಗಿದೆ, ಆ ಮೂಲಕ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರತಿಯೊಬ್ಬರು ಸಂವಿಧಾನವನ್ನು ಓದುವ ಮೂಲಕ ಅದನ್ನು ರಕ್ಷಿಸುವ ಮೂಲಕ ಈ ದೇಶವನ್ನು ಕೂಡ ರಚಿಸಬೇಕಾಗಿದೆ ಏಕೆಂದರೆ ಇವತ್ತಿಗೂ ಕೂಡ ಭಾರತವಾಗಿ ಉಳಿದಿರುವುದು ಅಂಬೇಡ್ಕರ್ ಅವರ ಸಂವಿಧಾನದಿಂದ ಮಾತ್ರ ಎಂದರು.ಸಂವಿಧಾನದ ಆಶಯಗಳನ್ನು ಹೊತ್ತು ಸಾಗುತ್ತಿರುವ ಸಂವಿಧಾನ ಜಾಗೃತಿ ಜಾಥಾಕ್ಕೆ ಚನ್ನರಾಯಪಟ್ಟಣ ತಾಲ್ಲೂಕು ಆಡಳಿತ ವತಿಯಿಂದ ಪಟ್ಟಣದ ಹೇಮಾವತಿ ಇಲಾಖೆಯ ಮುಂಭಾಗದಿಂದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನದವರೆಗೆ ಭವ್ಯ ಮೆರವಣಿಗೆ ನಡೆಯಿತು, ಶಾಸಕರಾದ ಸಿ ಎನ್ ಬಾಲಕೃಷ್ಣರವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡುವ ಮೂಲಕ ಅಭೂತ ಪೂರ್ವ ಸ್ವಾಗತ ಕೋರಿದರು. ಚನ್ನರಾಯಪಟ್ಟಣ ತಾಲೂಕಿನ ಪ್ರಗತಿಪರ ಸಂಘಟನೆಗಳು ಹಾಗೂ ದಲಿತ ಪರ ಸಂಘಟನೆಗಳ ಮುಖಂಡರುಗಳು ಭಾಗವಹಿ ಭವ್ಯ ಸ್ವಾಗತ ದೊಂದಿಗೆ ಸ್ತಬ್ಧ ಚಿತ್ರಗಳನ್ನು ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಶಾಸಕರಾದ ಸಿಎನ್ ಬಾಲಕೃಷ್ಣ, ತಾಲೂಕು ದಂಡಾಧಿಕಾರಿ ಬಿ ಎಂ ಗೋವಿಂದರಾಜು, ತಾಲೂಕು ಪಂಚಾಯಿತಿ ಇಓ ಜಿ ಆರ್ ಹರೀಶ್, ಡಿವೈಎಸ್ಪಿ ರವಿಪ್ರಸಾದ್,ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶಂಕರ್ ಮೂರ್ತಿ, ಪುರಸಭೆ ಮುಖ್ಯ ಅಧಿಕಾರಿ ಹೇಮಂತ್, ಬಿಇಒ ದೀಪ, ಕಾರ್ಮಿಕ ಅಧಿಕಾರಿ ಪುರುಷೋತ್ತಮ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ ಕೆ ಮಂಜೇಗೌಡ, ಉಪನ್ಯಾಸಕರಾದ ಎಂ ಜೆ ರತ್ನಾಕರ್, ಪರಿಸರ ಪ್ರೇಮಿ ಸಿಎನ್ ಅಶೋಕ್, ದಲಿತ ಮುಖಂಡರಾದ ಸಿ ಎನ್ ಮಂಜುನಾಥ್, ಮಹದೇವ್, ಅಹಿಂದ ಸಂಘಟನೆ ಅಧ್ಯಕ್ಷರಾದ ಯು ಎನ್ ಚಂದ್ರು, ಎಂ ಹೊನ್ನೇನಹಳ್ಳಿ ಜಗದೀಶ್, ಅಡಿಕೆಹೊಸೂರು ಪ್ರಸನ್ನ, ಗಾಯಕ ಮಂಜು,ಶಾಲಾ ಕಾಲೇಜು ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರು,  ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಇತರರು ಹಾಜರಿದ್ದರು.