ಗ್ಯಾರಂಟಿ ಯೋಜನೆಗಳ ಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳ ಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳ ಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

ಬರಗಾಲ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಒತ್ತಾಯಿಸಿ, ರೈತ ಚಳುವಳಿ ಮಾಡುತ್ತಿದ್ದ ರೈತರ ಮೇಲೆ ಹಾಕಿದ್ದ ಮೊಕದ್ದಮೆ ವಾಪಸ್ಸು ಪಡೆಯುವಂತೆ ಒತ್ತಾಯಿಸಿ, 7 ನೇ ವೇತನ  ಜಾರಿಗೆ ತರುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಗೆ  ಮನವಿ ಪತ್ರ ಸಲ್ಲಿಸಲಾಯಿತು. ಮಳವಳ್ಳಿ ಪಟ್ಟಣಕ್ಕೆ  ಹೆಲಿಕ್ಯಾಪ್ಟರ್  ಆಗಮಿಸಿದ ಮುಖ್ಯಮಂತ್ರಿ ಗಳಿಗೆ  ಜನವಾದಿ ಮಹಿಳಾ ಸಂಘಟನೆ , ಪ್ರಾಂತರೈತ ಸಂಘ,ಹಾಸ್ಟೆಲ್ ನೌಕರರ ಸಂಘ, ಸರ್ಕಾರಿನೌಕರರ ಸಂಘ  ಗಳಿಂದ ಮನವಿ ಸಲ್ಲಿಸಿದರು. ಈ ವೇಳೆ ದೇವಿ,  ಸುಶೀಲ,ಭರತ್ ರಾಜ್, ಹನುಮಗೌಡ, ಮಂಗಳಮ್ಮ, ನಾಗೇಶ  ಸೇರಿದಂತೆ ಹಲವರು ಇದ್ದರು.‌ ಬಿಜೆಪಿ ಅನ್ವರ್ಥನಾಮ ಸುಳ್ಳಿನ ಪಾರ್ಟಿ ಬಿಜೆಪಿ ಯಲ್ಲಿವರು ಸುಳ್ಳು ಹೇಳುವವರೇ ಹೆಚ್ಚು ಎಂದು ಸಿ.ಎಂ ಸಿದ್ದರಾಮಯ್ಯ ವ್ಯಂಗ್ಯ ವಾಡಿದರು. ಪಟ್ಟಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿ, ನಮ್ಮದೇಶದಲ್ಲಿ ನರೇಂದ್ರಮೋದಿ ಅಂತಹ ಸುಳ್ಳು ಹೇಳುವ ಪ್ರಧಾನಿ ಇದುವರೆಗೂ ಬಂದಿರಲಿಲ್ಲ, ಇಂತಹ ಪಕ್ಷಕ್ಕೆ ನೀವು ಓಟು ಹಾಕುತ್ತೀರಾ ಎಂದು ಸಾರ್ವಜನಿಕರನ್ನು ಸಭೆಯಲ್ಲಿ ಪ್ರಶ್ನಿಸಿದರು. ಈ ಬಾರೀ ಲೋಕಸಭಾ  ಚುನಾವಣೆಯಲ್ಲಿ  ಕನಿಷ್ಠ 20 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸ ವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪಟ್ಟಣದಲ್ಲಿ ನಡೆದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ಜನ್ಮದಲ್ಲಿ ಮುಸ್ಲಿಂ ರಾಗಿ ಹುಟ್ಟುತ್ತೇನೆ ಎಂದು ಹೇಳಿದ ದೇವೇಗೌಡ  ಕೋಮವಾದಿ ಪಕ್ಷದ ಜೊತೆ ಕೈ ಜೋಡಿಸಿದ್ದಾರೆ.  ಜಾತ್ಯತೀತ ಜನತಾದಳ  ಎಂದು ಹೆಸರಿನಲ್ಲಿ  ಜಾತ್ಯತೀತ ಎಂಬ ಪದವನ್ನು ತೆಗೆಯಿರಿ ಎಂದು ವ್ಯಂಗ್ಯ ವಾಡಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಸಚಿವರು ಎಂ. ಪಿ. ಚೆಲುವರಾಯಸ್ವಾಮಿ,ಮಳವಳ್ಳಿ ಕ್ಷೇತ್ರದ ಜನಪ್ರಿಯ ಶಾಸಕರು ಪಿ. ಎಂ. ನರೇಂದ್ರಸ್ವಾಮಿ,ಗಣಿಗ ರವಿಕುಮಾರ್, ವಿಧಾನಪರಿಷತ್ ಸದಸ್ಯರು ಮರಿತಿಬ್ಬೆಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಚಂದ್ರಕುಮಾರ್, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಹಾಜರಿದ್ದರು.