ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನಾ ಸಭೆ

ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನಾ ಸಭೆ

ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನಾ ಸಭೆ

ಜಗಳೂರು ಸುದ್ದಿ: ಪಕ್ಷೇತರ ಪರಾಜಿತ ಅಭ್ಯರ್ಥಿ ಮಾಜಿ ಶಾಸಕ ಎಚ್.ಪಿ ರಾಜೇಶ್ ಬಿಜೆಪಿ-ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ವಿಚಾರ ಇನ್ನೂ ನಿಗೂಢವಾಗಿಯೇ ಉಳಿಯಿತು. ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸ್ವಾಭಿಮಾನಿ ಕಾರ್ಯಕರ್ತರ ಸಮಾಲೋಚನೆ ಸಭೆಯಲ್ಲಿ ಎಚ್.ಪಿ ರಾಜೇಶ್ ರಾಷ್ಟ್ರೀಯ ಪಕ್ಷಯೊಂದರಲ್ಲಿ ಸೇರುವ ನಿಲವು ಪ್ರಕಟಿಸುವ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಸ್ಪಷ್ಟ ನಿರ್ಧಾರ ಸಿಗಲಿಲ್ಲ.ಆದರೂ, ಸಭೆಯಲ್ಲಿ  ಮಹತ್ತರ ಬೆಳವಣಿಗೆಗಳು ನಡೆದವು. ಬಿಜೆಪಿ ಪಕ್ಷ ಸೇರ್ಪಡೆಗೆ ವ್ಯಾಪಕ ಕೂಗು:ಸಭೆಯಲ್ಲಿ ಹಲವು ಮುಖಂಡರುಗಳು ಟಿಕೇಟ್ ತಪ್ಪಿಸಿದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಬಿಜೆಪಿ ಪಕ್ಷ ಸೇರ್ಪಡೆಯಾಗಬೇಕಿದೆ ಎಂದು ವ್ಯಾಪಕವಾಗಿ ಅಭಿಪ್ರಾಯ ವ್ಯಕ್ತವಾದವು.ಉಳಿದಂತೆ ಕೆಲ ಮುಖಂಡರುಗಳು ಯಾವುದೇ ಪಕ್ಷಕ್ಕೆ ಸೇರ್ಪಡೆಯಾದರೂ ತಮ್ಮ ನಿರ್ಧಾರಕ್ಕೆ ನಾವು ಬದ್ದರಾಗಿರುತ್ತೇವೆ.ಆದರೆ ತಮ್ಮ ಸ್ಥಾನ ಭದ್ರಪಡಿಸಿಕೊಂಡು ಸೇರ್ಪಡೆಗೊಳ್ಳಬೇಕು ಎಂದು ಸಲಹೆ ನೀಡಿದರು. ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,10 ವರ್ಷ ಪಕ್ಷ ನಿಷ್ಠೆಯಿಂದ ಶ್ರಮಿಸಿದೆ. ಅಲ್ಲದೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಅತಿಹೆಚ್ಚು ಅಧ್ಯಕ್ಷ ಸ್ಥಾನಗಳಿಸಿದ ಇತಿಹಾಸವಿದೆ.ಆದರೂ 
ನನಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೇಟ್ ಕೈತಪ್ಪಿತು. ಆ ವೇಳೆ ನನಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ  ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ನಡೆಸಿ ಕ್ಷೇತ್ರದ ಪ್ರತಿ ಬೂತ್ ಮಟ್ಟದಿಂದಲೂ ಸ್ವಾಭಿಮಾನಿ ಕಾರ್ಯಕರ್ತರ ವ್ಯಾಪಕ ಬೆಂಬಲದಿಂದ ಕೇವಲ 1250 ಮತಗಳ ಅಂತರದ ಸೋಲು ನನಗೆ ಸೋಲು ಎನಿಸದೆ ತೃಪ್ತಿತಂದಿದೆ.ಆದರೆ ಶಾಸಕನಾಗಿ ಆಯ್ಕೆಯಾಗುವ ಅದೃಷ್ಟ ಸಿಗಲಿಲ್ಲ.ಕಷ್ಟಕಾಲದಲ್ಲಿ ಕೈಹಿಡಿದ ಮತದಾರರಿಗೆ ಸದಾ ಚಿರ ಋಣಿ ಎಂದು ಭಾವುಕರಾದರು. ನನಗೆ ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರು ಸಂಪರ್ಕದಲ್ಲಿದ್ದಾರೆ:ಕಳೆದ ವಾರದಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷದ ವರಿಷ್ಠರು ಸಂಪರ್ಕಿಸಿ ಆಹ್ವಾನಿಸಿದ್ದಾರೆ.ಆದರೆ ನಾನು ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ.ಯಾವುದೇ ಆಮಿಷೆಗೊಳಗಾಗದೆ ನನ್ನ ಅಭಿಮಾನಿ ದೇವರುಗಳು ಸ್ವಾಭಿಮಾನಿ ಕಾರ್ಯಕರ್ತರು ಯಾವುದೇ ಆಮಿಷೆಗಳಿಗೆ ಬಲಿಯಾಗಿ ಸ್ಥಾನಪಲ್ಲಟವಾಗದೆ,ವಿಚಲಿತರಾಗದೆ ನನ್ನನ್ನೇ ನಂಬಿರುವ ತಮ್ಮ ಮಾರ್ಗದರ್ಶನ,ಅಭಿಪ್ರಾಯ,ಪಡೆದು ಮುನ್ನಡೆಯುವೆ.ಇಂದಿನ ಸಭೆಯ ಅಭಿಪ್ರಾಯ ಕ್ರೂಢೀಕರಿಸಿ ನಂತರ ಮತ್ತೊಂದು ಮಹತ್ವದ ನಿರ್ಣಯ ಸಭೆ ನಡೆಸಿ ನಮಗೆ ಗೌರವಿಸುವ,ಸ್ವಾಭಿಮಾನಕ್ಕೆ ದಕ್ಕೆ ತರದ ಪಕ್ಷಕ್ಕೆ ಲೋಕಸಭಾ ಚುನಾವಣೆ ವೇಳೆಗೆ ಸೇರ್ಪಡೆಯಾಗುವ   ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
ಕಾಂಗ್ರೆಸ್ ಪಕ್ಷಕ್ಕೆ ಹಾಲಿ ಶಾಸಕರ ಶ್ರಮವಿಲ್ಲ: ನಾವು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳನ್ನು ಹಳ್ಳಿಗಳಲ್ಲಿ ಮನೆಮನೆಗೆ ಪ್ರಚಾರಪಡಿಸುವಾಗ.ಹಾಲಿ ಶಾಸಕ ಬಿ.ದೇವೇಂದ್ರಪ್ಪ ಅವರು ಟಿಕೇಟ್ ಲಾಭಿಗಾಗಿ ಬೆಂಗಳೂರಿಗೆ ಪದೇ ಪದೇ ತೆರಳುತ್ತಿದ್ದರು.ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಏನಿದೆ? ಎಂದು ಪ್ರಶ್ನಿಸಿದರು.

ನನ್ನ ಸ್ಪರ್ಧೆಯೇ  ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಎಲ್ಲಾ ನಿರೀಕ್ಷೆಯಿತ್ತು.ಆಗ ಸ್ವಾಭಿಮಾನಿ ಪಕ್ಷದಿಂದ ನಾನು ಸ್ಪರ್ಧಿಸಿದ್ದರ ಪರಿಣಾಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಕಾರಣವಾಯಿತು.ಅದನ್ನು ಮರೆತು ಶಾಸಕ.ಬಿ.ದೇವೇಂದ್ರಪ್ಪ ಅವರು ತೆಂಗಿನ‌ಮರ ಗುರುತಿಗೆ ಮತಚಲಾಯಿಸಿದವರನ್ನು ತಾತ್ಸಾರ ಮಾಡುವುದು ಸರಿಯಲ್ಲ ಎಂದರು.