ನನ್ನ ಶಾಲೆ ನನ್ನ ಜವಾಬ್ದಾರಿ ಸಮಿತಿ ಉದ್ಘಾಟನೆ ಹಾಗೂ ಪಿಎಂಶ್ರೀ ಚಿಣ್ಣರ ಕಲರವ-2024 ಕಾರ್ಯಕ್ರಮ

ನನ್ನ ಶಾಲೆ ನನ್ನ ಜವಾಬ್ದಾರಿ ಸಮಿತಿ ಉದ್ಘಾಟನೆ ಹಾಗೂ ಪಿಎಂಶ್ರೀ ಚಿಣ್ಣರ ಕಲರವ-2024 ಕಾರ್ಯಕ್ರಮ

ನನ್ನ ಶಾಲೆ ನನ್ನ ಜವಾಬ್ದಾರಿ ಸಮಿತಿ ಉದ್ಘಾಟನೆ ಹಾಗೂ ಪಿಎಂಶ್ರೀ ಚಿಣ್ಣರ ಕಲರವ-2024 ಕಾರ್ಯಕ್ರಮ

ಬಾಗೇಪಲ್ಲಿ: ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕವಾದ ಶಿಕ್ಷಣ ಕಲಿಕೆಯ ಜತೆಗೆ ನಾಡಿನ ಸಂಪ್ರದಾಯ, ಕಲೆ ಹಾಗೂ ಸಂಸ್ಕೃತಿಯ ಪಾಠವನ್ನು ಕಲಿಸಿಕೊಡುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿ ನಾಗರಿಕರು ಕೈಜೋಡಿಸಿದರೆ ಮಕ್ಕಳ ಗುರಿ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತನುಜಾ ತಿಳಿಸಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಡಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪಿ ಎಂ ಶ್ರೀ ಶಾಲಾ ಅಡಳಿತ ಮಂಡಳಿಯಿಂದ ಆಯೋಜಿಸಿದ್ದ ನನ್ನ ಶಾಲೆ ನನ್ನ ಜವಾಬ್ದಾರಿ ಸಮಿತಿ ಉದ್ಘಾಟನೆ ಹಾಗೂ ಪಿಎಂಶ್ರೀ ಚಿಣ್ಣರ ಕಲರವ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಲಿ-ಕಲಿ ಯೋಜನೆ, ಚಿಣ್ಣರ ಕಲರವ, ಕ್ರೀಡಾ ಚಟುವಟಿಕೆ, ಪ್ರಬಂಧ ಸ್ಪರ್ಧೆಗಳು ಸೇರಿದಂತೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ವಿವಿಧ ಮಹನೀಯರ ಪರಿಚಯವನ್ನು ಪಠ್ಯದ ಮೂಲಕ ಮಕ್ಕಳಿಗೆ ತಿಳಿಸಲಾಗುತ್ತದೆ. ಪಠ್ಯದ ಜತೆಗೆ ಗುರು ಹಿರಿಯರು, ಪಾಲಕರನ್ನು ಗೌರವಿಸುವ ವಿಧಾನ ಹಾಗೂ ಸಂಪ್ರದಾಯಗಳನ್ನು ಕಲಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಸೆಡ್ಡು ಹೊಡೆದು ವಿಭಿನ್ನವಾಗಿ ರೂಪಗೊಳ್ಳುತ್ತಿವೆ. ಸರ್ಕಾರದ ಪಿಎಂಶ್ರೀ ಶಾಲೆಯಲ್ಲಿ ಆಧುನಿಕ ತಂತ್ರಜ್ಞಾನದ ಶಿಕ್ಷಣದ ಜತೆಗೆ ಕಂಪ್ಯೂಟರ್ ತರಗತಿ, ಇಂಗ್ಲಿಷ್ ಪಠ್ಯ, ಗ್ರಂಥಾಲಯ ಸೇರಿದಂತೆ ಅನೇಕ ಸೌಲಭ್ಯಗಳು ಸರ್ಕಾರಿ ಶಾಲೆಗಳಿಗೆ ಅನುಕೂಲ ವಾಗಿವೆ ಎಂದರು. ಈ ಸಂಧರ್ಭದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಸಿದ್ದಪ್ಪ, ಬಿಆರ್‌ಸಿ ವೆಂಕಟರಾಂ, ಸಮಾಜ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕ ನಾಗರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನರಸಿಂಹಾರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರವಣಪ್ಪ,ಪಿಎಂಶ್ರೀ ಶಾಲೆ ಮುಖ್ಯ ಶಿಕ್ಷಕ ಆರ್. ಹನುಮಂತರೆಡ್ಡಿ, ಕಾರ್ಯದರ್ಶಿ ಸಿ.ವೆಂಕಟರಾಯಪ್ಪ, ಫಿಎಂಶ್ರೀ ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ಉಷಾ, ಸದಸ್ಯರಾದ ನಾಗೇಂದ್ರ, ನಾಗೇಶ್‌ರೆಡ್ಡಿ, ಕೆ.ಎನ್. ಎಸ್ ಕೃಷ್ಣಪ್ಪ, ಶಿಕ್ಷಕರಾದ ಮಂಜುನಾಥ, ಮಹಮ್ಮದ್ ಜಬೀವುಲ್ಲಾ, ಬಾಲರಾಜು, ವೆಂಕಟರಮಣಪ್ಪ ಇತರರು ಇದ್ದರು.