ಕೃಷಿ ಸಾಲದ ಅಸಲನ್ನು ಕಟ್ಟಿದರೆ ಬಡ್ಡಿಯನ್ನು ಮನ್ನ ಮಾಡುವುದು ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ

ಕೃಷಿ ಸಾಲದ ಅಸಲನ್ನು ಕಟ್ಟಿದರೆ ಬಡ್ಡಿಯನ್ನು ಮನ್ನ ಮಾಡುವುದು ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ

ಕೃಷಿ ಸಾಲದ ಅಸಲನ್ನು ಕಟ್ಟಿದರೆ ಬಡ್ಡಿಯನ್ನು ಮನ್ನ ಮಾಡುವುದು ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ

ಚನ್ನರಾಯಪಟ್ಟಣ: ಸಹಕಾರಿ ಸಂಘದಲ್ಲಿ ಪಡೆದಿರುವ ರೈತರ ಕೃಷಿ ಸಾಲದ ಅಸಲು ಕಟ್ಟಿದವರಿಗೆ ಬಡ್ಡಿ ಮನ್ನ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ರೈತರಿಗೆ ನೀಡಿದೆ, ಕೂಡಲೇ ಸಾಲವನ್ನು ಫೆಬ್ರವರಿ 29ರ ಒಳಗೆ ಎಲ್ಲಾ ರೈತ ಬಾಂಧವರು ಇದರ ಸದುಪಯೋಗವನ್ನು ಪಡಿಸಿಕೊಳ್ಳಿ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ. ಶಂಕರ್ ತಿಳಿಸಿದ್ದಾರೆ. ಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ನಿರ್ದೇಶಕರ ಸಭೆಯಲ್ಲಿ ಗುರುವಾರ ಮಾತನಾಡಿ ಈಗಾಗಲೇ ರಾಜ್ಯ ಸರ್ಕಾರ ರೈತರ ನೆರವಿಗಾಗಿ ರೈತರು ಸಹಕಾರಿ ಸಂಘದಲ್ಲಿ ಪಡೆದಿರುವ ಕೃಷಿ ಸಾಲದ ಅಸಲನ್ನು ಕಟ್ಟಿದರೆ ಬಡ್ಡಿಯನ್ನು ಮನ್ನ ಮಾಡುವುದು ಯೋಜನೆಯನ್ನು ಜಾರಿಗೆ ತಂದಿದೆ ಎಲ್ಲಾ ಸಹಕಾರಿ ಸಂಘಗಳಿಗೆ ಆದೇಶವನ್ನು ಸಹ ಹೊರಡಿಸಿದೆ ಅದರ ಅನ್ವಯ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಸಹಕಾರಿ ಸಚಿವರು ಅದರಲ್ಲೂ ಸಚಿವರೂ ನಮ್ಮ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ರಾಜಣ್ಣನವರ ನೇತೃತ್ವದಲ್ಲಿ ರಾಜ್ಯಮಟ್ಟದ ಕರೆದು ರೈತರು ಈಗಾಗಲೇ ಮಳೆ ಮತ್ತು ಬೆಳೆ ಇಲ್ಲದೆ ಬಾರಿ ಕಂಗಾಲಾಗಿದ್ದಾನೆ.ಆದ್ದರಿಂದ ಸಹಕಾರಿ ಸಂಘದಲ್ಲಿ ಪಡೆದಿರುವಂತಹ ಸಾಲಗಳನ್ನು ಮರುಪಾವತಿ ಮಾಡಿ ಬಡ್ಡಿಯನ್ನು ರಾಜ್ಯ ಸರ್ಕಾರದಿಂದ ಪಾವತಿಸುತ್ತೇವೆ ಪ್ರತಿಯನ್ನು ಹೊರಡಿಸಿದ್ದಾರೆ ಅದರಂತೆ ಅಸಲನ್ನು ಯಾರು ಪಾವತಿ ಮಾಡಿದ್ದಾರೋ ಅಂತವರಿಗೆ ಮರು ಸಾಲವನ್ನು ನೀಡಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅನ್ವಯ ರೈತ ಬಾಂಧವರು ಸಹಕಾರಿ ಸಂಘದಲ್ಲಿ ಪಡೆದಿರುವ ಸಾಲವನ್ನು ಕೂಡಲೇ ಅಸಲು ಪಾವತಿಸಲು ಮುಂದಾಗಬೇಕು ಲೋಕಸಭೆ ಚುನಾವಣೆಯು ಸಮೀಪಿಸುತ್ತಿದ್ದು ಇದರಿಂದ ಸರ್ಕಾರದ ವತಿಯಿಂದ ಹೆಚ್ಚು ದಿನಗಳ ಕಾಲಾವಕಾಶವನ್ನು ನೀಡಿಲ್ಲ ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರೈತ ಬಾಂಧವರು ಸಹಕರಿಸಿ ಎಂದರು. ಇದೇ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಜಯಲಕ್ಷ್ಮಿ, ನಿರ್ದೇಶಕರಾದ ಬಿಎಂಆರ್ ಮಂಜಣ್ಣ, ಮಧುಸಾಣೇನಹಳ್ಳಿ, ಎಂ. ಎ. ರಂಗಸ್ವಾಮಿ, ಕೆ. ಜೆ. ಬಾಬು, ಮಂಜುನಾಥ್ ಮತ್ತಿತರಿದ್ದರು.