ಸಮಯಕ್ಕೆ ಸರಿಯಾಗಿ ಬಾರದ ಸರಕಾರಿ ವೈದ್ಯರು:ರೋಗಿಗಳ ಪರದಾಟ

ಹೆಸರಿಗಷ್ಟೇ ಇವರು ಸರಕಾರಿ ವೈದ್ಯರು:ಕೆಲಸ ಮಾತ್ರ ಸ್ವಂತ ಆಸ್ಪತ್ರೆಯಲ್ಲಿ

ಸಮಯಕ್ಕೆ ಸರಿಯಾಗಿ ಬಾರದ ಸರಕಾರಿ ವೈದ್ಯರು:ರೋಗಿಗಳ ಪರದಾಟ




ಇಂಡಿ:ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷತನ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ರೋಗಿಗಳು ಸರಕಾರಿ ಆಸ್ಪತ್ರೆಗೆ ಬಂದು ಬೆಳಿಗ್ಗೆಯಿಂದ ಕಾಯುತ್ತಿದ್ದರು ವೈದ್ಯರ ಬರುವುದಿಲ್ಲ. ಇಂಡಿ ಸರಕಾರಿ ಆಸ್ಪತ್ರೆಯಲ್ಲಿನ ಎಲಬು  ಮತ್ತು ಕೀಲು ವೈದ್ಯರಾದ. ಮನೋಜ ಗಿಡಗಂಟಿ, ಯಾವಾಗಲು  ಸಮಯಕ್ಕೆ ಸರಿಯಾಗಿ ಬರೋದಿಲ, ಹಾಗೂ ಸಾರ್ವಜನಿಕರು ಕರೆ ಮಾಡಿದರೆ ಗದರಿಸುತ್ತಾರೆ  ಸಾರ್ವಜನಿಕರು ಆರೋಪಿಸಿದ್ದಾರೆ. ಈ ವಿಷಯವಾಗಿ ಸಂಘಟನಾ ಕಾರರು ಹಾಗೂ ಪತ್ರಿಕಕರಾರು ಸಾಕಷ್ಟು ಬಾರಿ  ಕರೆ ಮಾಡಿದರೆ  ಕರೆಗೆ ಕ್ಯಾರೇ ಅನ್ನುತ್ತಿಲ್ಲ. ಬೆಳಗೆಯಿಂದ ಅಂಗವಿಕಲರು  ಯು. ಡಿ. ಐ. ಡಿ. ಕಾರ್ಡಿಗಾಗಿ  ಆಸ್ಪತ್ರೆಯ ಮುಂದೆ ಕಾಯುತ್ತ ಕುಳಿತು ಸಾಕಾಗಿದೆ ಅಂತಾ ಹೇಳಿದ್ದಾರೆ.ರೋಗಿಗಳಿಗೆ  ಸಿಬ್ಬಂದಿಗಳು ಹೇಳುತ್ತಾರೆ ಮನೋಜ ಡಾಕ್ಟರ್ ಬೆಳಗ್ಗೆ ಅಷ್ಟೇ ಬರುತ್ತಾರೆ ಮದ್ಯಾಹ್ನ,ಸಾಯಂಕಾಲ ಬರುವದಿಲ್ಲ ಅಂತಾ ಇವತ್ತು ಬಿಟ್ಟರೆ ಶನಿವಾರ ಬರುತ್ತಾರೆ ಅಂತ ಹೇಳಿ ಅಂಗವಿಕಲರಿಗೆ ಅಲೆಸುತ್ತಿದ್ದಾರೆ. ಸರಕಾರಿ ಆಸ್ಪತ್ರೆ ಇರುವದು ಬಡವರ ಸೇವೆಗಾಗಿ ಆದರೆ ಇಲ್ಲಿ. ಬೆಳಗ್ಗೆ 9 ಗಂಟೆ ಇಂದ 10 ಗಂಟೆಒಳಗಾಗಿ ಸಾರ್ವಜನಿಕರು ಬಂದು ಆಸ್ಪತ್ರೆ ಬಳಿ ಕಾಯುತಾರೆ. ವೈದ್ಯರು 11 ಗಂಟೆ ಇಂದ 11:30 ವರಗೆ ಆಸ್ಪತ್ರೆಗೆ ಬರುವದಿಲ್ಲ ಅದೆರೀತಿಯಾಗಿ ಹೆರಿಗೆಗೆ ಬಂದ ಮಹಿಳೆಯರನ್ನು ಹೆರಿಗೆ ಇಲ್ಲೆ ಆಗುತ್ತೆ ಅಂತ ಗೊತ್ತಿದು  ಏನಾದರೂ ಹೇಳಿ ಜಿಲ್ಲಾ ಆಸ್ಪತ್ರೆಗೆ ಕಳಿಸುವ ಚಾಳಿ ಇವರದಾಗಿದೆ. ಇಂಡಿ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ  ವೈದ್ಯರು ತಮ್ಮ ಸರ್ಕಾರಿ ಕೆಲಸ ಬದಿಗೆವತ್ತಿ  ತಮ್ಮ ತಮ್ಮ ಪ್ರೈವೇಟ್ ಆಸ್ಪತ್ರೆಯಲೇ ಇರುತ್ತಾರೆ. ಹೆಸರಿಗಷ್ಟೇ ಇವರು ಸರಕಾರಿ ವೈದ್ಯರು ಅಸಲಿಗೆ ಅವರು ಇರುವುದು ಪ್ರೈವೇಟ್ ಆಸ್ಪತ್ರೆಯಲ್ಲಿ ಇರುತ್ತಾರೆ. ಇಂತಹ ವೈದ್ಯರ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಂಘಟನಾಕಾರರು ಆಸ್ಪತ್ರೆ ಬಂದ ಮಾಡಿ ಧರಣಿ ಸತ್ಯಾಗ್ರಹ ಮಾಡುತ್ತೆವೆಂದು ಇಂಡಿ ತಾಲೂಕ ಆರ್ ಪಿ ಆಯ್ ಅಧ್ಯಕ್ಷ ಚಂದ್ರಶೇಖರ ಮೇಲಿನಮನಿ   ಪತ್ರಿಕಾ ಪ್ರಕಟಣೆ ಯಲ್ಲಿ ಹೇಳಿದ್ದಾರೆ.