ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಿ:CRP ಕೃಷ್ಣಮೂರ್ತಿ

ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸಿ:CRP ಕೃಷ್ಣಮೂರ್ತಿ

ಗಡಿಭಾಗದಲ್ಲಿರುವ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಹೆಚ್ಚಿನ ಆದ್ಯತೆ ನೀಡಿರುವ ದರ ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಳಿಸುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಎಲ್ಲಾ ರಂಗಗಳನ್ನು  ಪ್ರಗತಿ ಹೊಂದಲು ಸಾಧ್ಯ ಎಂದು ಸಿಆರ್‌ಪಿ ಕೃಷ್ಣಮೂರ್ತಿ ಹೇಳಿದರು. ಕೆಜಿಎಫ್ ತಾಲೂಕಿನ ಪಾರಂಡ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಲಾ ಸಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣವು ವ್ಯಕ್ತಿಯನ್ನು ಪರಿಪೂರ್ಣವಾಗಿ ಮನುಷ್ಯನನ್ನಾಗಿ ಬದಲಾಯಿಸಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ನುರಿತ ಬೋಧಕ ವರ್ಗದವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಪರಿಣಾಮ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆ, ಸಂಸ್ಕೃತಿಕ ಕಾರ್ಯಕ್ರಮ, ಇನ್ನಿತರೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಹೊಂದುವ ಮೂಲಕ ವಿದ್ಯಾರ್ಥಿಗಳು ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳುತ್ತಾರೆ ಎಂದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಶಿಕ್ಷಕರ ಕೊರತೆ ಇಲ್ಲ. ಇನ್ನು ಹೆಚ್ಚುವರೆಗೆ ಶಿಕ್ಷಕರನ್ನು ನೀಡಲು ಶಿಕ್ಷಣ ಇಲಾಖೆ ಬದ್ಧವಾಗಿದೆ. ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಮಾಡಲು ನಾವೆಲ್ಲಾ ಸಹಕಾರ ನೀಡುತ್ತೇವೆ. ಅದೇ ರೀತಿ ಉನ್ನತಿ ಕರೆಸಿ ಶಾಲೆಯನ್ನು ಆರಂಭಿಸಲು ಮಕ್ಕಳ ದಾಖಲಾತಿ 30ಕ್ಕೂ ಹೆಚ್ಚಿರಬೇಕು ಆಗ ಹೈಸ್ಕೂಲ್ ಶಾಲೆಗೆ ಅನುಮತಿ ನೀಡಲಾಗುತ್ತದೆ. ಸರ್ಕಾರದಲ್ಲಿ ಕೆಲವೊಂದು ನಿಯಮಗಳು ಇರುವುದರಿಂದ ಅದರ ಪ್ರಕಾರ ನಾವು ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ 30ಕ್ಕೂ ಹೆಚ್ಚು ಇದ್ದಲ್ಲಿ ಹೈ ಸ್ಕೂಲ್ ತೆರೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ನಂತರ ಮಾತನಾಡಿ ಸರ್ಕಾರಿ ಶಾಲಾ ವಾರ್ಷಿಕೋತ್ಸವ ಖಾಸಗಿ ಶಾಲೆಗಿಂತ ಹೆಚ್ಚು ಸುಂದರವಾಗಿ ಆಯೋಜನೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಿಂತ ಯಾವುದರಲ್ಲಿ ಸರಿಸಾಟಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಈ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಹಾಗೂ ಸಹ ಶಿಕ್ಷಕಿ ಶಿಲ್ಪ ಸಿಬ್ಬಂದಿ ವರ್ಗ ಇವರಿಗೆ ಶಿಕ್ಷಣ ಇಲಾಖೆ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ತಿಳಿಸಿದರು.