ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿರುವ ಕೇಂದ್ರ ಸರ್ಕಾರ-ಕೂಲಿ ಕಾರ್ಮಿಕರ ಸಂಘದಉಪಾಧ್ಯಕ್ಷ ಮುನಿವೆಂಕಟಪ್ಪ

ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿರುವ ಕೇಂದ್ರ ಸರ್ಕಾರ-ಕೂಲಿ ಕಾರ್ಮಿಕರ ಸಂಘದಉಪಾಧ್ಯಕ್ಷ ಮುನಿವೆಂಕಟಪ್ಪ

ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿರುವ ಕೇಂದ್ರ ಸರ್ಕಾರ-ಕೂಲಿ ಕಾರ್ಮಿಕರ ಸಂಘದಉಪಾಧ್ಯಕ್ಷ ಮುನಿವೆಂಕಟಪ್ಪ

ಬಾಗೇಪಲ್ಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಡಿಯುವ ಜನರ ಶೋಷಣೆ, ನಿರುದ್ಯೋಗ ಸಮಸ್ಯೆ, ರೈತ ವಿರೋಧಿ ಕೃಷಿ ನೀತಿ, ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಹತ್ತಿಕ್ಕುವುದನ್ನು ಖಂಡಿಸಿ, ಸಂಯುಕ್ತ ಹೋರಾಟ-ಕರ್ನಾಟಕ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ಸಿಪಿಐಎಂ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್ ಪುತಳಿ ಮುಂದೆ ಕಪ್ಪು ಪಟ್ಟಿ ಧರಸಿ ಕಪ್ಪು ದಿನಾಚರಣೆ ಮಾಡಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಕೂಲಿ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮುನಿವೆಂಕಟಪ್ಪ ಮಾತನಾಡಿ ಕೇಂದ್ರ ಸರಕಾರ ರೈತರನ್ನು ಭಯೋತ್ಪಾದಕರು ದೇಶದ್ರೋಹಿಗಳಂತೆ ನಡೆಸಿಕೊಳುತ್ತಿದೆ. ರೈತ ಹೋರಾಟಗಾರರ ಮೇಲೆ ಅಶ್ರುವಾಯು ಸಿಡಿಸುವ ದಮನಕಾರಿ ನೀತಿಯನ್ನು ಅನುಸರಿಸಲಾಗುತ್ತಿದೆ. ಆದುದರಿಂದ ದೇಶದ ಎಲ್ಲ ರೈತರು ಎಚ್ಚೆತ್ತುಕೊಂಡು ಹೋರಾಟ ಮಾಡಬೇಕು ಎಂದು ಕರೆ ನೀಡಿದರು. ದೆಹಲಿ ಚಲೋ ನಡೆಸುವ ರೈತರ ಹಕ್ಕನ್ನು ರಕ್ಷಿಸಬೇಕು, ಕೂಡಲೇ ರೈತರ ಪ್ರತಿಭಟನೆ ಹತ್ತಿಕ್ಕಲು ನಿಯೋಜಿಸಿರುವ ಎಲ್ಲ ಪಡೆಗಳನ್ನು ವಾಪಸ್ ಕರೆಸಿಕೊಳ್ಳಬೇಕು, ರೈತರ ಹಾಗೂ ಕಾರ್ಮಿಕರ ಹೋರಾಟವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಬೇಕು ಎಂದು  ಆಗ್ರಹಿಸಿದರು. ಈ ಸಂದರ್ಭದಲ್ಲಿ ಚನ್ನರಾಯಪ್ಪ, ಅಶ್ವಥಪ್ಪ ,ಕೃಷ್ಣಪ್ಪ, ಓಬಳ ರಾಜು,ಸಾವಿತ್ರಮ್ಮ, ಕೃಷ್ಣಪ್ಪ ಇನ್ನೂ ಮುಂತಾದವರು ಪ್ರಮುಖರು ಹಾಜರಿದ್ದರು.