ತೆಲುಗು ಮಾತನಾಡುತ್ತಲೇ ಕನ್ನಡ ಸಾಮ್ರಾಜ್ಯ ಕಟ್ಟುವಂತಹ ಮನಸ್ಥಿತಿಯುಳ್ಳ ಜನ ಈ ಭಾಗದವರು-ಉದಯಕುಮಾರ್.ಎಸ್

ತೆಲುಗು ಮಾತನಾಡುತ್ತಲೇ ಕನ್ನಡ ಸಾಮ್ರಾಜ್ಯ ಕಟ್ಟುವಂತಹ ಮನಸ್ಥಿತಿಯುಳ್ಳ ಜನ ಈ ಭಾಗದವರು-ಉದಯಕುಮಾರ್.ಎಸ್

ತೆಲುಗು ಮಾತನಾಡುತ್ತಲೇ ಕನ್ನಡ ಸಾಮ್ರಾಜ್ಯ ಕಟ್ಟುವಂತಹ ಮನಸ್ಥಿತಿಯುಳ್ಳ ಜನ ಈ ಭಾಗದವರು-ಉದಯಕುಮಾರ್.ಎಸ್

ಬಾಗೇಪಲ್ಲಿ:ಆಂದ್ರ ಪ್ರದೇಶದ ಗಡಿಗೆ ಹೊಂದಿಕೊoಡಿರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಜನರ ಆಡು ಭಾಷೆ ತೆಲುಗಾದರೂ ಹೃದಯದ ಭಾಷೆ ಕನ್ನಡವಾಗಿದೆ. ಕನ್ನಡ ಭಾಷೆಯನ್ನು ಗೌರವಿಸಿ ಪ್ರೀತಿಸುವವರು. ತೆಲುಗು ಮಾತನಾಡುತ್ತಲೇ ಕನ್ನಡ ಸಾಮ್ರಾಜ್ಯ ಕಟ್ಟುವಂತಹ ಮನಸ್ಥಿತಿಯುಳ್ಳವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಉದಯಕುಮಾರ್ ಎಸ್. ಅಭಿಪ್ರಾಯಪಟ್ಟರು. ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿಯವರ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ನೀಡಿದ ಆಹ್ವಾನವನ್ನು ಸ್ವೀಕರಿಸಿ ಮಾತನಾಡಿದರು. ಕೆಲ ದಶಕಗಳ ಹಿಂದಿನ ಮಾತು ತೆಲುಗು ಭಾಷೆಯ ಪ್ರಭಾವ ಸ್ವಲ್ಪ ಹೆಚ್ಚೇ ಇದ್ದ ಕಾಲಘಟ್ಟವದು. ಅವರಿಗೇ ಅರಿಯದ ಹಾಗೆ ತೆಲುಗು ಭಾಷೆ ಮಾತನಾಡುತ್ತಲೇ ಕನ್ನಡ ಬಾವುಟಗಳನ್ನು ಕಟ್ಟುತ್ತಿದ್ದರು. ತೆಲುಗು ಮಾತನಾಡುವ ಜನರು ಬಹುಸಂಖ್ಯೆಯಲ್ಲಿದ್ದರೂ ಎಲ್ಲಿಯೂ ತೆಲುಗು ಶಾಲೆಯಾಗಲಿ, ತೆಲುಗು ನಾಮಫಲಕಗಳಾಗಲಿ ಅಳವಡಿಸಲಿಲ್ಲ. ಕನ್ನಡ-ತೆಲುಗು ಭಾಷೆ ಮಾತನಾಡುವವರು ಭಾಷಾಸಾಮರಸ್ಯವನ್ನು ರೂಢಿಸಿಕೊಂಡು ಬರುತ್ತಿದ್ದರು. ಕನ್ನಡತನಕ್ಕೆ ಧಕ್ಕೆ ಭಾರದ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಪ್ರತಿ ವಾರದ ಕನ್ನಡ ಕಾರ್ಯಕ್ರಮಗಳನ್ನು ತೆಲುಗು ಭಾಷೆಯಲ್ಲಿ ಮಾತನಾಡುತ್ತಲೇ ಬೆಂಬಲಿಸುತ್ತಿದ್ದರು. ಈಗ ವಾತಾವರಣ ಬದಲಾಗಿದೆ. ಬಾಗೇಪಲ್ಲಿಯಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಪ್ಪಟ ಕನ್ನಡದ ಪ್ರದೇಶದ ರೀತಿಯಲ್ಲಿ ಕನ್ನಡ ಬಾಷೆಯನ್ನು ಬಾಗೇಪಲ್ಲಿ ಜನ ಅಪ್ಪಿಕೊಂಡಿದ್ದಾರೆ. ಕನ್ನಡ ಸಾಹಿತ್ಯ, ಕಲೆ,ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿರುವುದು ಕನ್ನಡ ಭಾಷೆ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ. ದಶಕಗಳ ಹಿಂದಿನ ನನ್ನ ಕನ್ನಡ ಸೇವೆಯನ್ನು ಗುರುತಿಸಿ ನನ್ನನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯ್ಕೆಮಾಡಿದ್ದಕ್ಕೆ ಕಸಾಪ ಪದಾಧಿಕಾರಿಗಳು ಹಾಗು ಬಾಗೇಪಲ್ಲಿ ಜನತೆಗೆ ಅಭಾರಿಯಾಗಿದ್ದೇನೆ ಎಂದರು.

ಎರಡು ದಶಕಗಳ ಹಿಂದೆಯೇ ಬಾಗೇಪಲ್ಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗು ಕನ್ನಡ ಕಲಾ ಸಂಘವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿ ನಿರಂತ್ರರ ಕನ್ನಡ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿದ್ದುದು ಹೆಮ್ಮೆಯ ವಿಚಾರ. ಕನ್ನಡ ಭಾಷೆ, ಸಾಹಿತ್ಯ ಹಾಗು ಕಲೆಗೆ ತಾವು ನೀಡಿದ್ದ ಹಾಗು ನೀಡುತ್ತಿರುವ ಪ್ರಾಧಾನ್ಯತೆ ಶ್ಲಾಘನೀಯವಾದುದು. ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿಕೊಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಉದಯಕುಮಾರ್ ಎಸ್ ರವರಿಗೆ ಮೈಸೂರು ಪೇಟ ತೊಡಿಸಿ,ಶಾಲು ಹಾಕಿ ಆಹ್ವಾನವನ್ನು ನೀಡಲಾಯಿತು. ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಜಿ.ಸುಧಾಕರ್, ಜಿಲ್ಲಾ ಗೌ ಕಾರ್ಯದರ್ಶಿ ಬಿ.ಆರ್.ಕೃಷ್ಣ, ತಾ ಗೌ ಕಾರ್ಯದರ್ಶಿಗಳಾದ ಎನ್.ಶಿವಪ್ಪ, ಶ್ರೀನಿವಾಸ್ ಬಾಣಾಲಪಲ್ಲಿ, ಕೋಶಾಧ್ಯಕ್ಷ ಡಾ.ಚಿನ್ನಕೈವಾರಮಯ್ಯ, ಮಣಿಕಂಠ, ಬಿ.ಎಸ್.ಸುರೇಶ್ ಉಪಸ್ಥಿತರಿದ್ದರು.