ಮಣ್ಣಿಗೆ ಬಿದ್ದ ಬೀಜ, ಮನಸಿಗೆ ಬಿದ್ದ ವಿದ್ಯೆ ಎಂದಿಗೂ ವ್ಯರ್ಥವಾಗಲ್ಲ-ನ್ಯಾಯಧೀಶ ಜೆ. ರಂಗಸ್ವಾಮಿ

ಮಣ್ಣಿಗೆ ಬಿದ್ದ ಬೀಜ, ಮನಸಿಗೆ ಬಿದ್ದ ವಿದ್ಯೆ ಎಂದಿಗೂ ವ್ಯರ್ಥವಾಗಲ್ಲ-ನ್ಯಾಯಧೀಶ ಜೆ. ರಂಗಸ್ವಾಮಿ

ಮಣ್ಣಿಗೆ ಬಿದ್ದ ಬೀಜ, ಮನಸಿಗೆ ಬಿದ್ದ ವಿದ್ಯೆ ಎಂದಿಗೂ ವ್ಯರ್ಥವಾಗಲ್ಲ-ನ್ಯಾಯಧೀಶ ಜೆ. ರಂಗಸ್ವಾಮಿ

ಬಾಗೇಪಲ್ಲಿ: ವಿದ್ಯೆ ಎಂಬುದು ಜ್ಞಾನದ ರತ್ನ ಇದ್ದಂತೆ. ಯಾರೂ ಕೂಡ ಅದನ್ನು ಕದಿಯಲು ಸಾಧ್ಯವಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸದಾ ನಿಮ್ಮ ಮನಸ್ಸನ್ನು ಗುರಿಯೆಡೆಗೆ ಕೇಂದ್ರಿಕರಿಸಬೇಕು ಮಣ್ಣಿಗೆ ಬಿದ್ದ ಬೀಜ, ಮನಸಿಗೆ ಬಿದ್ದ ವಿದ್ಯೆ ಎಂದಿಗೂ ವ್ಯರ್ಥವಾಗಲ್ಲ ಎಂದು ಜೆ. ಎಂ. ಎಫ್. ಸಿ. ಸಿವಿಲ್ ನ್ಯಾಯಧೀಶ ಜೆ. ರಂಗಸ್ವಾಮಿ ತಿಳಿಸಿದ್ದಾರೆ. ಪಟ್ಟಣದ ಬಾಲಕರ ಪ್ರೌಢಶಾಲೆ ಅವರಣದಲ್ಲಿ ವಿಶ್ವ ಸಾಮಾಜಿಕ ನ್ಯಾಯದಿನಾಚರಣೆ ಅಂಗವಾಗಿ ತಾಲ್ಲೂಕು ಕಾನೂನು ಸೇವಗಳ ಸಮಿತಿ, ಮತ್ತು ವಕೀಲರ ಸಂಘ, ಸರ್ಕಾರಿ ಬಾಲಕರ ಪ್ರೌಢಶಾಲೆ ಶಿಕ್ಷಕರ ಸಂಯುಕ್ತಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ ಕೊಡುವಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮುಖ್ಯವಾಗಿದೆ. ಪೋಷಕರು ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಲ್ಪ ಸಮಯವನ್ನು ಮೀಸಲಿಡಬೇಕು ಆಗ ಉತ್ತವದ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ. ನ್ಯಾಯ ಎಂಬುದು ಕೇವಲ ನ್ಯಾಯಾಂಗದಲ್ಲಿ ಮಾತ್ರ ಇರುವುದಿಲ್ಲ. ಅದು ಸಮಾಜದಲ್ಲಿ ಕೂಡ ಇರುತ್ತದೆ. ನಾವು ಮಾಡುವ ಕೆಲಸದಲ್ಲಿ, ನಾವು ಯೋಜಿಸುವ ಯೋಚನೆಯಲ್ಲಿ ನಾವು ತೋರಿಸುವ ಪ್ರೀತಿ, ಕಾಳಜಿಯಲ್ಲಿ ಸಾಮಾಜಿಕ ನ್ಯಾಯ ಅಡಗಿರುತ್ತದೆ. ಸಾಮಾಜಿಕ ನ್ಯಾಯದಲ್ಲಿ ನಮ್ಮನ್ನು ನಾವು ಪರಾಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಮುಖ್ಯವಾಗಿ ಎರಡು ಹಕ್ಕುಗಳು ಪ್ರಮುಖವೆನಿಸುತ್ತವೆ. ಜೀವಿಸುವ ಹಕ್ಕು ನಮಗೆ ಸಮಾಜದಲ್ಲಿ ಘನತೆ, ಗೌರವ, ಸಹಬಾಳ್ವೆಯಿಂದ ಬಾಳಲು ಅವಕಾಶ ಕಲ್ಪಿಸಿದೆ. ಇದನ್ನು ಕಾನೂನಾತ್ಮಕವಾಗಿ ಕಾಪಾಡಲು ಸಂವಿಧಾನಿಕ ಪರಿಹಾರದ ಹಕ್ಕನ್ನು ಸಂವಿಧಾನ ರೂಪಿಸಿದೆ ಎಂದರು. ಈ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಸರ್ಕಾರಿ ಅಭಿಯೋಜಕ ಚಿನ್ನಸ್ವಾಮಿ, ಉಪಾಧ್ಯಕ್ಷ ರಾಮಾಂಜಿ, ವಕೀಲರಾದ ಮಂಜುನಾಥ್, ರಾಮಾಂಜಿ, ನಾಗಭೂಷಣ,ಮುಖ್ಯಶಿಕ್ಷಕ ವೆಂಕಟೇಶ್, ಬಾಲಚಂದ್ರ ಭಟ್,ಶಿಕ್ಷಕರಾದ,ಬಿ. ಎಸ್. ಕೃಷ್ಣಾ,ಕೆ. ವಿ.ಎಸ್, ಪ್ರಮೀಳಾ,ಇದ್ದರು.