"ಚಿಕ್ಕಸಿಂದಗಿಯಲ್ಲಿ ಮಕ್ಕಳ ಸಾಂಸ್ಕೃತಿಕ ಕಲರವ"

"ಚಿಕ್ಕಸಿಂದಗಿಯಲ್ಲಿ ಮಕ್ಕಳ ಸಾಂಸ್ಕೃತಿಕ ಕಲರವ"

"ಚಿಕ್ಕಸಿಂದಗಿಯಲ್ಲಿ ಮಕ್ಕಳ ಸಾಂಸ್ಕೃತಿಕ ಕಲರವ"

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಕಾಯಕ ಶಿಕ್ಷಣ ಸಂಸ್ಥೆ ಡಾ||ಕೆ.ಎಸ್.ಮಠ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಯುನಿಕ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 14 ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಮಕ್ಕಳ ಸಾಂಸ್ಕೃತಿಕ ಕಲರವ ಫೆ 14 ಶನಿವಾರ ಸಾಯಂಕಾಲ 4 ಗಂ ಮಕ್ಕಳಿಂದ ತಾಯಂದಿರ ಪಾದ ಪೂಜೆ ಹಾಗೂ ತಾಯಂದಿರಿಂದ ಮಕ್ಕಳಿಗೆ ಕೈ ತುತ್ತು ಮತ್ತು ಮಕ್ಕಳಿಂದ ಮನರಂಜನೆ ಕಾರ್ಯಕ್ರಮದಲ್ಲಿ  ಕೆರೂಟಗಿ ಹಿರೇಮಠದ ಶಿವಬಸವ ಶಿವಾಚಾರ್ಯರು .ಯಂಕಂಚಿ ಕುಂಟೋಜಿಮಠದ ರುದ್ರಮುನಿ ಶಿವಾಚಾರ್ಯರು ಸಾನಿಧ್ಯವಹಿಸುವರು. ತಾಲೂಕಾ ದಂಡಾಧಿಕಾರಿ ಪ್ರವೀಪಕುಮಾರ ಹಿರೇಮಠ ಕಾರ್ಯಕ್ರಮ ಉದ್ಘಾಟಿಸುವರು.ಕಾಯಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಮಾಂತಯ್ಯ ಶಿ ಹಿರೇಮಠ.ದಂತ ವೈದ್ಯ ಡಾ||ಸಿದ್ದರಾಮ ಚಿಂಚೋಳ್ಳಿ, ಕನ್ನೋಳ್ಳಿ ವಲಯದ ಸಿ.ಆರ್.ಪಿ. ಭೀಮನಗೌಡ ಜಿ ಬಿರಾದಾರ.ರವಿಸ್ವಾಮಿ ಹತ್ತರಕಿಹಾಳಮಠ ಭಾಗವಹಿಸುವರು ಎಂದು ಶಾಲೆ ಮುಖ್ಯಗುರುಮಾತ್ಯ ಶ್ರೀಮತಿ ವಿಜಯಲಕ್ಷ್ಮೀ ಶಿ ಹಿರೇಮಠ ತಿಳಿಸಿದರು.