ದೂರದರ್ಶನ ಕೇಂದ್ರದಲ್ಲಿ ಎಫ್ ಎಂ ಕೇಂದ್ರ ಉದ್ಘಾಟನೆ

ದೂರದರ್ಶನ ಕೇಂದ್ರದಲ್ಲಿ ಎಫ್ ಎಂ ಕೇಂದ್ರ ಉದ್ಘಾಟನೆ

ದೂರದರ್ಶನ ಕೇಂದ್ರದಲ್ಲಿ ಎಫ್ ಎಂ ಕೇಂದ್ರ ಉದ್ಘಾಟನೆ

ಕೆಜಿಎಫ್: ನಗರದಲ್ಲಿರುವ ದೂರದರ್ಶನ ಕೇಂದ್ರದಲ್ಲಿ ಇಂದು ನೂತನವಾಗಿ ಎಫ್ಎಂ ಕೇಂದ್ರವನ್ನು ಸುಮಾರು 28 ಲಕ್ಷ ವೆಚ್ಚದಲ್ಲಿ ಕೇಂದ್ರ ಸರ್ಕಾರ ನೀಡಿರುವ ಅನುದಾನದಲ್ಲಿ ಸಂಸದ ಎಸ್ ಮುನಿಸ್ವಾಮಿ ಉದ್ಘಾಟನೆ ಮಾಡಿದರು. ಎಫ್ಎಂ ಕೇಂದ್ರದ ಸಾಮರ್ಥ್ಯವು ಸುಮಾರು 12 ಕಿಲೋಮೀಟರ್ ವ್ಯಾಪ್ತಿಗೆ ಮತ್ತು 2 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸುವ ಸಾಮರ್ಥ್ಯವುಳ್ಳ ಕೇಂದ್ರ ಇದಾಗಿದೆ ಎಂದು ತಿಳಿಸಿದರು. ಈಗಾಗಲೇ ಕೆಜಿಎಫ್ ನಲ್ಲಿರುವ ಎಲ್ಲಾ ಕೇಂದ್ರ ಇಲಾಖೆಗಳು ವರ್ಗಾಯಿಸು  ಹಂತದಲ್ಲಿದ್ದು . ಸಾರ್ವಜನಿಕರ ಹಿತ ದೃಷ್ಟಿಯಿಂದ ದೂರದರ್ಶನ ಕಛೇರಿ ಇಲ್ಲೇ ಇರಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಎಫ್ಎಂ ಕೇಂದ್ರ ಬೇಕು ಎಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ  ಇಂದು ಈ ಕಾರ್ಯ ನೆರವೇರಿದೆ. ಎಂದರು. ಈಗಾಗಲೇ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಅಮೃತ ಯೋಜನೆಯಲ್ಲಿ ನಗರ ರಸ್ತೆಗಳ ಅಭಿವೃದ್ಧಿ ರೈಲ್ವೆ ನಿಲ್ದಾಣ ಅಭಿವೃದ್ಧಿ ಕೇಂದ್ರ ಸರ್ಕಾರದ ಯೋಜನೆಗಳನ್ನು ನಾವು ನೀಡಿದ್ದೇವೆ ಗಣಿ ಕಾರ್ಮಿಕರ ಹಕ್ಕು ಪತ್ರಗಳನ್ನು ನೀಡಿದ್ದೇವೆ. ಇನ್ನೂ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿದೆ ಇಲ್ಲಿರುವ ಸಮಸ್ಯೆಗಳನ್ನು  ಹಂತ ಹಂತವಾಗಿ ಎಲ್ಲವನ್ನು ಮಾಡುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ದೂರವಾಣಿ ಕೇಂದ್ರದ ಸಿಬ್ಬಂದಿ ಇದ್ದರು.