ಮಿಟ್ಟೇಮರಿ ಗ್ರಾಮದ ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆ

ಮಿಟ್ಟೇಮರಿ ಗ್ರಾಮದ ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆ

ಮಿಟ್ಟೇಮರಿ ಗ್ರಾಮದ ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆ

ಬಾಗೇಪಲ್ಲಿ: ತಾಲೂಕಿನ ಮಿಟ್ಟೇಮರಿ ಬಳಿಯ ಕೆರೆಯೊಂದರಲ್ಲಿ ತಾಯಿ ಹಾಗೂ ತನ್ನ ಇಬ್ಬರ ಮಕ್ಕಳ ಶವ ಪತ್ತೆಯಾಗಿದ್ದು, ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೆರೆಯಲ್ಲಿ ಶವಗಳು ತೇಲಾಡುತ್ತಿದ್ದನ್ನ ಕಂಡ ಸ್ಥಳೀಯರು ಪೊಲೀಸರು ಹಾಗೂ ಆಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಇಬ್ಬರ ಮಕ್ಕಳ ಮೃತದೇಹ ಮೇಲೆತ್ತಲಾಗಿದ್ದು, ಮೃತ ತಾಯಿ ಚಿಂತಾಮಣಿ ತಾಲೂಕು ಯಗವಕೋಟೆ ನಿವಾಸಿ ರಾಧ ಅಂತ ತಿಳಿದುಬಂದಿದೆ.ಇನ್ನೂ ಈಕೆಯ 4 ವರ್ಷದ ಮಗಳು ಪೂರ್ವಿತಾ ಹಾಗೂ ಇನ್ನೂ ಹೆಸರಿಡದ ಒಂದೂವರೆ ವರ್ಷದ ಮಗಳು ಮೃತರು. ಇನ್ನೂ ಗಂಡ ಮಲ್ಲಿಕಾರ್ಜುನ್ ಅಂತ ತಿಳಿದುಬಂದಿದ್ದು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ, ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.