ನಗರದ ಹಲವಾರು ಬಡಾವಣೆಗಳ ದೇವಸ್ಥಾನಗಳಲ್ಲಿ ಹೋಮ, ಅಭಿಷೇಕ, ಮಹಾ ಮಂಗಳಾರತಿಗಳು ನೆರವೇರಿದವು

ನಗರದ ಹಲವಾರು ಬಡಾವಣೆಗಳ ದೇವಸ್ಥಾನಗಳಲ್ಲಿ ಹೋಮ, ಅಭಿಷೇಕ, ಮಹಾ ಮಂಗಳಾರತಿಗಳು ನೆರವೇರಿದವು

ನಗರದ ಹಲವಾರು ಬಡಾವಣೆಗಳ ದೇವಸ್ಥಾನಗಳಲ್ಲಿ ಹೋಮ, ಅಭಿಷೇಕ, ಮಹಾ ಮಂಗಳಾರತಿಗಳು ನೆರವೇರಿದವು

ಜಗಳೂರು : ನಗರದ ಹಲವಾರು ಕಡೆ ರಾಮನ ಭಕ್ತರು ಅವರ ಮನೆಯ ಮುಂದೆ  ರಂಗೋಲಿಯನ್ನು ಬಿಡಿಸಿ ಬಣ್ಣದಿಂದ ಅಲಂಕಾರ ಗೊಳಿಸಿದ್ದರು. ಅಯೋಧ್ಯೆಯ ಪ್ರತಿಷ್ಠಾನ ಕಾರ್ಯಕ್ರಮ ವೀಕ್ಷಿಸಲು ಕೋದಂಡರಾಮ ಸಮುದಾಯ ಭವನದಲ್ಲಿ ಅಯೋಧ್ಯೆಯ ಪ್ರತಿಷ್ಠಾನ ಕಾರ್ಯಕ್ರಮವನ್ನು ಎಲ್ ಇ ಡಿ ಯಲ್ಲಿ ಭಕ್ತರು ಕಣ್ತುಂಬಿ ಕೊಂಡರು. ಪಟ್ಟಣದ ಕೋದಂಡರಾಮ ದೇವಸ್ಥಾನದಲ್ಲಿ ರಾಮನಿಗೆ ಹೂವಿನ ಅಲಂಕಾರ ಮಾಡಿ ಅಭಿಷೇಕ ಮಾಡಿ ಹೋಮ ಅವನಗಳಲ್ಲಿ ನೂರಾರು ಭಕ್ತರ ಸೇರಿದ್ದರು ಮುಗಿದ ನಂತರ ಎಲ್ಲಾ ಭಕ್ತರು ಪ್ರಸಾದ ಸೇವೆಯನ್ನು ಮಾಡಿದರು. ಅಯೋಧ್ಯೆಯ ಶ್ರೀರಾಮನ ಪ್ರತಿಷ್ಠಾಪನೆ ಪ್ರಯುಕ್ತ ಜಗಳೂರು ನಗರದ ಕೋದಂಡರಾಮನ ದೇವಸ್ಥಾನದಲ್ಲಿ ಶ್ರೀರಾಮನಿಗೆ ಹೂವಿನ ಅಲಂಕಾರ ಮಾಡಿ ಬೆಳಗ್ಗೆ 6 ಗಂಟೆಗೆ ವಸ್ತು ವಿಸ್ತಾರ, ಪಂಚಾಮೃತ ಅಭಿಷೇಕ, ವಿಶ್ವ ದರ್ಶನ ಪ್ರತಿಷ್ಠಾನ ದೇವಸ್ಥಾನದಲ್ಲಿ ಮಾಡಲಾಗಿತ್ತು. ನಂತರ ನವಗ್ರಹ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಶ್ರೀರಾಮ ತಾರಕ ಹೋಮ, ದೃಷ್ಟಿ ನಿವಾರಣ ಹೋಮವನ್ನು ಮಾಡಿ ಪಂಚಾಮೃತ ಪ್ರಸಾದವನ್ನು ಭಕ್ತರಿಗೆ ನೀಡಲಾಗಿತ್ತು. ನಗರದಲ್ಲಿ ಕೋದಂಡರಾಮನ ದೇವಸ್ಥಾನದಲ್ಲಿ ಹೋಮ ಅವನ ಪೂಜೆ ಇರುವ ಪ್ರಯುಕ್ತ ಮಾಜಿ ಶಾಸಕ ಎಸ್ ವಿ  ರಾಮಚಂದ್ರ ಅವರು ಭೇಟಿ ನೀಡಿ ಪೂಜೆಯನ್ನು ಸಲ್ಲಿಸಿ ದೇವರಿಗೆ ನಮಸ್ಕರಿಸಿದರು. ನಂತರ ಮಾತನಾಡಿ ಶ್ರೀರಾಮನು ಈ ವರ್ಷ ಮಳೆ ಬೆಳೆ ಚೆನ್ನಾಗಿ ಹಾಗೆ ರೈತರ ಮುಖದಲ್ಲಿ ಸಂತೋಷ ಬರಿಸುವ ಹಾಗೆ ಆಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದು ಹೇಳಿದರು. 12 ಗಂಟೆಗೆ ತಹಶೀಲ್ದಾರ್ ಸಮ್ಮುಖದಲ್ಲಿ ಮಹಾಪೂಜೆ ಮಾಡಿ. ಸಂಜೆ 6:00ಗೆ ದೀಪೋತ್ಸವ ಮತ್ತು ಮಾತೆಯರಿಂದ ಭಜನೆ. ಪಲ್ಲಕ್ಕಿ ಉತ್ಸವ ಶ್ರೀ ರಾಮನ ಪಾದುಕೆಗೆ ಕ್ಷೀರ ಅಭಿಷೇಕ ಪಲ್ಲಕ್ಕಿ ಸೇವೆ ಸಲ್ಲಿಸಿ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಮಾಡಿ ಶ್ರೇಯಸೇವೆ ಮಾಡಿದ ನಂತರ ಮುಕ್ತಾಯವಾಗುತ್ತದೆ ಎಂದು ರಾಧಾಕೃಷ್ಣ ಜೋಶಿ ಅವರು ಹೇಳಿದ್ದಾರೆ. ಹೊರಕೆರೆ ಆಂಜನೇಯ ಸ್ವಾಮಿ ಈಶ್ವರ ದೇವಸ್ಥಾನ,ಬಯಲು ಆಂಜನೇಯ ಸ್ವಾಮಿ ದೇವಸ್ಥಾನ, ತೋರಣಗಟ್ಟೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ, ಜೆ ಸಿ ಆರ್ ಬಡಾವಣೆಯಲ್ಲಿರುವ  ಗಣಪತಿ ಆಂಜನೇಯ ಸ್ವಾಮಿ ದೇವಸ್ಥಾನ, ಜೆ ಸಿ ಆರ್ ಬಡಾವಣೆಯ ಕಾಳಿಕಾಂಬ ದೇವಸ್ಥಾನ, ಜೆ ಸಿ ಆರ್ ಬಡಾವಣೆಯ ಆಂಜನೇಯ ಗಣೇಶ ದೇವಸ್ಥಾನಗಳಲ್ಲಿ ಬಾಳೆಕಂಬಗಳನ್ನು ಕಟ್ಟಿ. ವಿಶೇಷ ಪೂಜೆ ಮತ್ತು ಅಭಿಷೇಕಗಳು ನೆರವೇರಿದ ಬಳಕ ಭಕ್ತರಿಗೆ ಪ್ರಸಾದ ಹಾಗೂ ಪಾನಕ ವ್ಯವಸ್ಥೆಯನ್ನು ಮಾಡಲಾಗಿತ್ತು. ನಗರದಲ್ಲಿ ಅಂಗಡಿ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಶ್ರೀರಾಮ ಮಂದಿರಗಳಲ್ಲಿ ತಮ್ಮ ಭಕ್ತಿ ಸೇವೆಯನ್ನು ಮಾಡಿದರು. ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಹಳ್ಳಿಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆ ಅವನ ಹೋಮ ನಡೆದವು ಎಂದು ತಿಳಿದುಬಂದಿದೆ. ಕೆಲವೊಂದು ಗ್ರಾಮಗಳಲ್ಲಿ, ರಾಮಮಂದಿರನ ಮೆರವಣಿಗೆ ಮಾಡಿದ್ದಾರೆ ಭಕ್ತರು. ಎಲ್ಲ ದೇವಸ್ಥಾನಗಳಲ್ಲಿ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಯುವಕರು ಸುಮಾರು 30 ಬೈಕ್ ಗಳಲ್ಲಿ ಕೋದಂಡರಾಮನ ದೇವಸ್ಥಾನದಿಂದ ಹೊರಟು ನಗರದಲ್ಲಿ ಪ್ರದಕ್ಷಣೆಯನ್ನು ಮಾಡಿ ನಂತರ ಕೋದಂಡರಾಮ ದೇವಸ್ಥಾನಕ್ಕೆ ಬಂದರು ಈ ಸಂದರ್ಭದಲ್ಲಿ ಯುವಕರು ಜೈ ರಾಮ್ ಜೈ ಜೈ ರಾಮ್  ಘೋಷವಾಕ್ಯಗಳನ್ನು ಕೂಗಿದ್ದು ಜನರ ಗಮನ ಸೆಳೆದರು. ನಗರದಲ್ಲಿ ಹಾಗೂ ಹಳ್ಳಿಗಳಲ್ಲಿ ಮಕ್ಕಳು ಶ್ರೀರಾಮ ಹಾಗೂ ಸೀತಾಮಾತೆಯ ವೇಷ ಭೂಷಣವನ್ನು ಹಾಕಿಕೊಂಡಿರುವ  ದೃಶ್ಯಗಳು ಕಂಡು ಬಂದವು.