ಅದ್ದೂರಿಯಾಗಿ ನಡೆದ ರಾಮಹೋತ್ಸವ

ಅದ್ದೂರಿಯಾಗಿ ನಡೆದ ರಾಮಹೋತ್ಸವ

ಅದ್ದೂರಿಯಾಗಿ ನಡೆದ ರಾಮಹೋತ್ಸವ

ಕೆಜಿಎಫ್: ಅಯೋಧ್ಯೆಯಲ್ಲಿ

ನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದ ಅಂಗವಾಗಿ ಕೆಜಿಎಫ್ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಜೋರಾಗಿತ್ತು. ಪ್ರತಿಯೊಂದು ಹಳ್ಳಿ  ಹಳ್ಳಿಯಲ್ಲೂ ಶ್ರೀರಾಮಚಂದ್ರನ ಭಾವಚಿತ್ರಗಳು, ಪ್ಲೆಕ್ಸ್.ಭಗವಾ ದ್ವಜಗಳನ್ನು ಇಟ್ಟು ವಿಶೇಷ ಪೂಜೆಗಳನ್ನು ಸಲ್ಲಿಸಿ ಸಂಭ್ರಮಿಸಿದರು. ನಗರದ ಆಂಡ್ರಸನ್ ಪೇಟೆ ಯ ಶ್ರೀರಾಮ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿದ್ದು. ಕಾರ್ಯಕ್ರಮದಲ್ಲಿ ಸಂಸದರು ಎಸ್ ಮುನಿಸ್ವಾಮಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.1200 ಕೆಜಿ  ಬೂಂದಿ ತಯಾರು ಮಾಡಿ ಲಡ್ಡುವನ್ನು ವಿತರಣೆ ಮಾಡಲಾಯಿತು. ನಗರದ ಗಾಂಧಿ ವೃತ್ತದಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು. ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ರಸ್ತೆಯಲ್ಲಿ ದೊಡ್ಡ ಗಾತ್ರದ ಸ್ಕ್ರೀನ್ ರಚನೆ ಮಾಡಿ ಶ್ರೀರಾಮ  ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮವನ್ನು ವೀಕ್ಷಿಸಿ ಜಯ ಘೋಷ ಮೊಳಗಿಸಿದರು . ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ  ದೇವಾಲಯದ ಇದೊಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ 6 ಗಂಟೆಗೆ. ಕೆಜಿಎಫ್ ನ ಕೋದಂಡ ರಾಮಸ್ವಾಮಿ ದೇವಾಲಯದ ರಥೋತ್ಸವ. ಉತ್ಸವ ಮೂರ್ತಿಗಳನ್ನು ವಿವೇಕ ನಗರದ ಹೆಬ್ಬಾಗಿಲಲ್ಲಿ ಇಟ್ಟು ಭಕ್ತರು ದರ್ಶನ ಭಾಗ್ಯವನ್ನು ಕಲ್ಪಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆದಂತೆ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದರು. ಉತ್ಸವ ಮೆರವಣಿಗೆ ಸಂದರ್ಭದಲ್ಲಿ  ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಿಂದ ಮೆರವಣಿಗೆ ಹೊರಟ ಉತ್ಸವ  ಮೂರ್ತಿ ನಾಲ್ಕನೇ ಕ್ರಾಸ್ . ವರೆಗೂ ಪೊಲೀಸರು ಅನುಮತಿ ನೀಡಿದ್ದರು. ನಂತರ 4ನೇ ಕ್ರಾಸ್‌ಗೆ ಆಗಮಿಸಿದ ಉತ್ಸವ ಮೂರ್ತಿಯನ್ನು ಭಕ್ತಾದಿಗಳು ಸ್ವರಾಜ್ ಮಲ್ ಸರ್ಕಲ್ ವರೆಗೂ ಅನುಮತಿ ನೀಡುವಂತೆ ಪೊಲೀಸರನ್ನು ಒತ್ತಾಯಿಸಿದರು. ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ.ಪೊಲೀಸರ ಮಧ್ಯಸ್ಥಿಕೆಯಲ್ಲಿ ಉತ್ಸವ ಮೂರ್ತಿಯನ್ನು  ಕೋದಂಡ ಸ್ವಾಮಿ ದೇವಾಲಯಕ್ಕೆ. ಸಾಗಿಸುವುದರಲ್ಲಿ ಯಶಸ್ವಿಯಾದರು. ಸರ್ಕಲ್ ಇನ್ಸ್ಪೆಕ್ಟರ್. ಸುನಿಲ್ ಮಾತನಾಡಿ ಪೊಲೀಸರ ಮಾತಿಗೆ ಬೆಲೆ ನೀಡಿ ಸಹಕರಿಸಿದ ಎಲ್ಲರಿಗೂ  ಧನ್ಯವಾದಗಳು. ಕಾರ್ಯಕ್ರಮವನ್ನು ಯಾವುದೇ ರೀತಿಯಲ್ಲಿ  ಅಹಿತಕರ   ಘಟನೆ ನಡೆದಂತೆ ನಡೆಸಿಕೊಟ್ಟ ಎಲ್ಲ ಮುಖಂಡರಿಗೂ ಧನ್ಯವಾದ ತಿಳಿಸಿದರು.