ಭಜನ-ಪ್ರವಚನ-ಸಂಕೀರ್ತನ
ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಸಂಜಯನಗರದ ಶ್ರೀ ರಾಧಾಕೃಷ್ಣ ದೇವಸ್ಥಾನದಲ್ಲಿ ನವೆಂಬರ್ 25 ರಿಂದ 28ರ ವರೆಗೆ ಏರ್ಪಡಿಸಿರುವ ಕಾರ್ಯಕ್ರಮಗಳು :
ಭಜನಾ ಕಾರ್ಯಕ್ರಮ (ಪ್ರತಿದಿನ ಸಂಜೆ 6 ರಿಂದ 7) : ನವೆಂಬರ್ 25-ಮತ್ತಿಕೆರೆಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ನವೆಂಬರ್ 26- ಸಂಜಯನಗರದ ಶ್ರೀ ಲಕ್ಷ್ಮೀ ಸೋಬಾನೆ ಮಹಿಳಾ ಮಂಡಲಿ ಮತ್ತು ನವೆಂಬರ್ 27-ವಿದ್ಯಾರಣ್ಯಪುರದ ಶ್ರೀ ವಿಜಯ ವಿಠಲ ಭಜನಾ ಮಂಡಳಿ.
ಪ್ರವಚನ ಕಾರ್ಯಕ್ರಮ (ಪ್ರತಿದಿನ ಸಂಜೆ 7 ರಿಂದ 8) : ಶ್ರೀ ಆನಂದತೀರ್ಥಾಚಾರ್ಯ ಪೇಟೆಯವರಿಂದ "ಭಾಗವತ ದಶಮ ಸ್ಕಂದ" ವಿಷಯವಾಗಿ ಧಾರ್ಮಿಕ ಪ್ರವಚನ.
ಹರಿನಾಮ ಸಂಕೀರ್ತನೆ : ನವೆಂಬರ್ 28, ಶುಕ್ರವಾರ ಸಂಜೆ 6-30ಕ್ಕೆ. ಕು|| ಕೀರ್ತನ ನರಸಿಂಹನ್ (ಗಾಯನ), ಕು|| ದೀಪಿಕಾ ರಾಜಪ್ಪ (ಪಿಟೀಲು), ಶ್ರೀ ಲೋಕಪ್ರಿಯ ಗುರುಮೂರ್ತಿ (ಮೃದಂಗ), ಶ್ರೀ ಆರ್. ವಿಶ್ವನಾಥ್ (ಘಟ). ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
