ಹಿರೇಮುರಾಳದಲ್ಲಿ ಸಂಭ್ರಮದ ಶ್ರೀ ಸಂಗಮೇಶ್ವರ ಮಹಾರಥೋತ್ಸವ

Apr 8, 2026 - 20:50
 0  4
ಹಿರೇಮುರಾಳದಲ್ಲಿ ಸಂಭ್ರಮದ ಶ್ರೀ ಸಂಗಮೇಶ್ವರ ಮಹಾರಥೋತ್ಸವ
ರೇಮುರಾಳ ಗ್ರಾಮದಲ್ಲಿ ಜರುಗಿದ ಶ್ರೀ ಸಂಗಮೇಶ್ವರ ಮಹಾರಥೋತ್ಸವಕ್ಕೆ ಕುಂಟೋಜಿ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಗ್ರಾಮದ ಗಣ್ಯರು ಹಾಗೂ ಭಕ್ತಾದಿಗಳು ಚಿತ್ರದಲ್ಲಿದ್ದಾರೆ.

​ಮುದ್ದೇಬಿಹಾಳ: ತಾಲ್ಲೂಕಿನ ಹಿರೇಮುರಾಳ ಗ್ರಾಮದಲ್ಲಿ ಪಾರ್ವತಿ ಸಮೇತ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಶ್ರೀ ಸಂಗಮೇಶ್ವರ ಮಹಾರಥೋತ್ಸವವು ಅತ್ಯಂತ ಸಡಗರ ಮತ್ತು ವಿಜೃಂಭಣೆಯಿಂದ ಜರುಗಿತು.


​ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜರುಗಿದ ರಥೋತ್ಸವಕ್ಕೆ ಕುಂಟೋಜಿ ಭಾವೈಕ್ಯತೆ ಹಿರೇಮಠದ ಷಟ್ಸ್ಥಲ ಬ್ರಹ್ಮ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರು ಚಾಲನೆ ನೀಡಿದರು. ಸಾವಿರಾರು ಭಕ್ತಾದಿಗಳು ರಥಕ್ಕೆ ಉತ್ತತ್ತಿ, ಹಣ್ಣು-ಜವನ ಎಸೆದು ಭಕ್ತಿ ಸಮರ್ಪಿಸಿದರು.


​ಜಾತ್ರಾ ಮಹೋತ್ಸವದ ನೇತೃತ್ವವನ್ನು ಗ್ರಾಮದ ಗಣ್ಯರಾದ ಬಸನಗೌಡ ಪಾಟೀಲ, ಸಂಗಣ್ಣ ಹಿರೇಗೌಡರ, ಪೀರಸಾಬ ಮುಲ್ಲಾ, ರಮೇಶ ಜೋಶಿ, ವೀರೇಶ ಬಾಗೇವಾಡಿ, ಕಾಶಿನಾಥ ನಾಗರಬೆಟ್ಟ, ಬಸವಂತ್ರಾಯ ನಾಗರತ್ತಿ, ಸಚಿನ ಇಂಗಳೇಶ್ವರ, ಮಲ್ಲನಗೌಡ ಬಿ. ಪಾಟೀಲ, ಶಿವು ಮುಳವಾಡ ಹಾಗೂ ಆದೇಶ ನಾಗರತ್ತಿ, ಮುಖಂಡರಾದ ಮಲ್ಲಿಕಾರ್ಜುನ ವಗ್ಗರ, ಶೇಖರ ಗುಡುಗುಂಟೆ, ಅಶೋಕ ಭೀ. ಭೋವಿ, ನಾರಾಯಣ ಗೊಂಬಿ ಸೇರಿದಂತೆ ಗ್ರಾಮದ ನೂರಾರು ಯುವಕರು, ಮಹಿಳೆಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಪಾಲ್ಗೊಂಡು ಸಂಗಮೇಶ್ವರನ ಕೃಪೆಗೆ ಪಾತ್ರರಾದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456