ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು
ಭಾಗ್ಯನಗರ: ತಾಲ್ಲೂಕಿನ ರಾಚ್ಚೆರುವು ಗ್ರಾಮ ಪಂಚಾಯಿತಿ
ಉಗ್ರಾಣoಪಲ್ಲಿಯಿಂದ ರಾಚ್ಚೇರುವು ಹಾಗೂ ಚಾಕವೇಲು ಗ್ರಾಮದವರೆಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ₹5 ಕಾಮಗಾರಿಗೆಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಬಿಳ್ಳೂರಿನಿಂದ ಚಾಕವೇಲು ವರೆಗಿನ ರಸ್ತೆ ಅಭಿವೃದ್ಧಿಗೆ ₹18 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದರು.
ಚಾಕವೇಲು ಗ್ರಾಮದ ವ್ಯಾಪ್ತಿಗೆ ₹5 ಕೋಟಿ, ಬಿಲ್ಲೂರಿನಿಂದ ಉಗ್ರಾಣಪಲ್ಲಿ ವರೆಗೆ ₹3.5 ಕೋಟಿ, ರಾಶ್ಚರವು ಮಾರ್ಗಕ್ಕೆ ₹4.5 ಕೋಟಿ ಹಾಗೂ ಇತರೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ ₹4.75 ಕೋಟಿ ಅನುದಾನ ಮೀಸಲಿಡಲಾಗಿದೆ,ರಸ್ತೆಗಳ ಅಭಿವೃದ್ಧಿಗೆ ಸರಿಯಾದ ಅನುದಾನ ಸಿಗದೆ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು. ಈಗ ನಮ್ಮ ಸರ್ಕಾರ ಬಂದ ಮೇಲೆ ಗರಿಷ್ಠ ಅನುದಾನ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಶೇ.75 ರಿಂದ 80 ರಷ್ಟು ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಮುಖ್ಯ-ಮಂತ್ರಿಗಳ ವಿಶೇಷ ಅನುದಾನದಡಿ ₹50 ಕೋಟಿ ಹಣ ಬರಲಿದ್ದು, ಅದನ್ನು ಬಳಸಿಕೊಂಡು ಕ್ಷೇತ್ರದ ಉಳಿದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ವೃತ್ತ ನಿರೀಕ್ಷಕ ಶ್ರೀನಿವಾಸ್, ವಕೀಲರಾದ ಚಂದ್ರಶೇಖರ್, ಸಹದೇವ ರೆಡ್ಡಿ, ಜೆ.ಎನ್.ಜಾಲರಿ, ಜಿ.ವಿ.ಸುರೇಂದ್ರ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು...
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
