ದೇವಾಲಯಕ್ಕೆ ದರ್ಶನದ ಜೊತೆಗೆ ಹಿನ್ನೆಲೆಯನ್ನು ತಿಳಿದುಕೊಂಡಾಗ ಅಲ್ಲಿ ಭಕ್ತಿ ಇನ್ನೂ ಹೆಚ್ಚಾಗುತ್ತದೆ

Dec 3, 2025 - 09:37
 0  16
ದೇವಾಲಯಕ್ಕೆ ದರ್ಶನದ ಜೊತೆಗೆ ಹಿನ್ನೆಲೆಯನ್ನು ತಿಳಿದುಕೊಂಡಾಗ ಅಲ್ಲಿ ಭಕ್ತಿ ಇನ್ನೂ ಹೆಚ್ಚಾಗುತ್ತದೆ

ಕವಯಿತ್ರಿ ಶ್ರೀಮತಿ *ರಮಾ ಕೃಷ್ಣಮೂರ್ತಿ ಕಲಘಟಗಿ* ಇವರ ಎರಡನೇ ಕೃತಿ *ಭಕ್ತಿ ಲಹರಿ.* ಹೆಸರೇ ಸೂಚಿಸುವಂತೆ ದೇವಾನು ದೇವತೆಗಳ ಮೇಲಿನ ಭಕ್ತಿಯನ್ನು ಈ ಕೃತಿಯಲ್ಲಿ ಅವರು ಮೂಡಿಸಿದ್ದಾರೆ ಭಕ್ತಿ ಲಹರಿಯು ಇವರ ಮನದಲ್ಲಿ ಅಷ್ಟೇ ಅಲ್ಲದೆ ಭಾವದಲ್ಲಿ ಅಷ್ಟೇ ಅಲ್ಲದೆ ಇವರ ಕರದಲ್ಲಿಯೂ ಸಹ ಅಷ್ಟೇ ಅದ್ಭುತವಾಗಿ ಮೂಡಿ ಬರುತ್ತದೆ. ರಂಗೋಲಿಯಲ್ಲಿ ದೇವರ ಆಕೃತಿಗಳನ್ನು ಮೂಡಿಸುತ್ತಾರೆ ನಾವು ದಿನನಿತ್ಯ ಮನೆ ಮುಂದೆ ರಂಗೋಲಿ ಹಾಕುವಾಗ ಚುಕ್ಕೆಗಳ ಸಾಲು ವಾರೆಯಾಗಬಹುದು ಗೆರೆಗಳು ಏರುಪೇರಾಗಬಹುದು ಆದರೆ ಇವರ ರೇಖೆಗಳು ಕರಾರುವಕ್ಕಾಗಿ ಇರುತ್ತದೆ. ಎಲ್ಲವೂ ಕ‌ಣ್ಮನ ಸೆಳೆಯುವಂತಿರುತ್ತವೆ. ಎಂದು. *ಶ್ರೀಶಾ ಕಲಾ ವೇದಿಕೆ ಶಿವಮೊಗ್ಗದ ಅಧ್ಯಕ್ಷರಾದಂತಹ ಶ್ರೀಮತಿ ಆಶಾ ಶ್ರೀಧರ್* ಇವರು ಹೇಳಿದರು.

ರವಿಕಿರಣ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ವೇದಿಕೆ ವತಿಯಿಂದ ಇತ್ತೀಚೆಗೆ ಸಾಗರದ ಪವಿತ್ರ ರೆಸಿಡೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಸಾಧಕರಿಗೆ ಸನ್ಮಾನ ಕೃತಕ ಲೋಕಾರ್ಪಣೆ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಒಟ್ಟು 5 ಕೃತಿಗಳು ಬಿಡುಗಡೆಗೊಂಡಿದ್ದು ಅದರಲ್ಲಿ ವೇದಿಕೆಯ ರಾಜ್ಯ ಕಾರ್ಯದರ್ಶಿಗಳಾದಂತಹ ಶ್ರೀಮತಿ ರಮ ಕೆ ಕಲಘಟಗಿ ಇವರ ಎರಡು ಕೃತಿಗಳಲ್ಲಿ ಒಂದಾದ ಭಕ್ತಿ ಲಹರಿ ಕೃತಿ ಪರಿಚಯವನ್ನು ಮಾಡಿದ ಅವರು, ಈ ಕೃತಿಯಲ್ಲಿ ಒಟ್ಟು 91 ಕವನಗಳಿದ್ದು ಎಲ್ಲಾ ದೇವರನ್ನು ಸ್ತುತಿಸಿದ್ದಾರೆ. ಮುಖ್ಯವಾಗಿ ಗಮನಿಸುವುದಾದರೆ ಪ್ರತಿಯೊಂದು ದೇವರು ಆ ಸ್ಥಳಗಳಲ್ಲಿ ನೆಲೆ ನಿಂತ ಕಾರಣದ ಕುರಿತಾಗಿ ರಚಿಸಿ ಆ ಸ್ಥಳಗಳ ಕ್ಷೇತ್ರಗಳ ಮಹತ್ವವನ್ನು, ಇತಿಹಾಸವನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಕೆಲವು ದೇವರ ರಚನೆಗಳು ಪುನಃ ರಚನಾಗಿದ್ದರೂ ಎಲ್ಲೂ ಸಹ ಪದಗಳು ಪುನರಾವರ್ತನೆ ಆಗದಿರುವುದು ಇವರ ಕವಿತ್ವದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಪ್ರತಿಯೊಂದು ಸ್ಥಳಗಳಿಗೂ ಕ್ಷೇತ್ರಗಳಿಗೂ ಅದರದ್ದೇ ಆದ ಮಹತ್ವ ಇರುತ್ತದೆ. ಒಂದು ದೇವಾಲಯಕ್ಕೆ ದರ್ಶನಕ್ಕೆ ಮಾತ್ರ ಹೋಗದೆ ಅದರ ಹಿನ್ನೆಲೆಯನ್ನು ತಿಳಿದುಕೊಂಡಾಗ ಅಲ್ಲಿ ಭಕ್ತಿ ಇನ್ನೂ ಹೆಚ್ಚಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ‌.ಹಾಗಾಗಿ ಇದು ಪ್ರತಿಯೊಬ್ಫರೂ ತೆಗೆದುಕೊಳ್ಳಬೇಕಾದ ಪುಸ್ತಕ ಅಂತ ನಾನು ಹೇಳ್ಲಿಕ್ಕೆ ಇಷ್ಟಪಡ್ತೀನಿ. ಇಂದು ಕೃತಿಯ ಪರಿಚಯ ಮಾಡಿಕೊಟ್ಟ *ಶ್ರೀಮತಿ ಆಶಾ ಶ್ರೀಧರ್* ಇವರು ತಿಳಿಸಿದರು

        ವೇದಿಕೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರದ ಹಿರಿಯ ಸಾಹಿತಿಗಳಾದಂತಹ ಶ್ರೀ ವಂದಗದ್ದೆ ಗಣೇಶ್ ಅವರು ವಹಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಗಜಲ್ ಕವಿಗಳಾದಂತಹ ಶ್ರೀ ನಾಗರಾಜ್ ಮೂಡಿಗೆರೆ ಹಾಮಾ ಸತೀಶ್ ಬೆಂಗಳೂರು ಪ್ರಜಾ ಕವಿ ಶ್ರೀ ನಾಗರಾಜ್ ಇವರು ಇವರು ಆಗಮಿಸಿದ್ದರು 

       

ಹಲವಾರು ಸಾಧಕರನ್ನು, ವಿಶೇಷ ಆಹ್ವಾನಿತರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು ಹಾಗೂ ರಾಜ್ಯದ ವಿವಿಧತೆಗಳಿಂದ ಆಗಮಿಸಿದಂತಹ ಕವಿ ಮಿತ್ರರು ಕವನ ವಾಚನ ಗಜಲ್ ಗಳನ್ನು ವಾಚನ ಮಾಡಿದರು. ಈ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದಂತಹ *ಶ್ರೀ ವೀರೇಶ್ ಕುಮಾರ್* ಅವರು ಶ್ರೀಮತಿ ರಮಾ ಕೆ. ಕಲಘಟಗಿ, ಶ್ರೀಮತಿ ಶಾಂತ ಕೆ ಇವರಿಗೆ ಪದಗ್ರಹಣವನ್ನು ಮಾಡಿದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456