ಮೆಕ್ಕೆಜೋಳ ಬಣವೆಗೆ ಆಕಸ್ಮಿಕ ಬೆಂಕಿ-70 ಕ್ವೀoಟಲ್ ಜೋಳ ಭಸ್ಮ
ಭಾಗ್ಯನಗರ: ಪರಗೋಡು ಗ್ರಾಮದ ರೈತ ಹಗಲು ರಾತ್ರಿ ಎನ್ನದೆ ಸುಮಾರು ನಾಲ್ಕು ತಿಂಗಳು ಕಾಲ ಪುಟ್ಟ ಮಗುವಿನಂತೆ ಹಾರೈಕೆ ಮಾಡಿ ಬೆಳೆದ ಮೆಕ್ಕೆಜೋಳ ಅಸನು ಮಾಡಲು ಬಂಡೆ ಮೇಲೆ ಬಣವೆ ಮಾಡಿದ್ದು ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 70 ಕ್ವೀoಟಲ್ ಮೆಕ್ಕೆಜೋಳ ಸುಟ್ಟು ಭಸ್ಮಮವಾಗಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾಮದ ಜಮೀನಿನಲ್ಲಿ ನಡೆದಿದೆ.
ಮೆಕ್ಕೆಜೋಳ ಬಣವೆಗೆ ಆಕಸ್ಮಿಕ ಬೆಂಕಿ ಅವಘಡ ನಡೆದಿದ್ದು, ಸುಮಾರು ನಾಲ್ಕು ತಿಂಗಳು ಕಾಲ ಮಗುವಂತೆ ಆರೈಕೆ ಮಾಡಿದ ಬೇಳೆ ಈಗ ಬೆಂಕಿ ಪಲಾಗಿದ್ದು, ದಿಕ್ಕು ತೋಚದ ಪರಸ್ಥಿತಿಯಲ್ಲಿ ರೈತ ಕಂಗಾಲು, ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಮೆಕ್ಕೆಜೋದ ರಾಶಿ ಬೆಂಕಿಗೆ ಅಹುತಿಯಾಗಿದ್ದು ಅಕ್ಕ ಪಕ್ಕದವರು ಬೆಂಕಿ ನಂದಿಸಲು ಅರಸಾಹಸ ಪಟ್ಟರು ಸಹ ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ.
ರೈತ ಗಂಗಾಧರ್ ಮಾತನಾಡಿ ನಾನು ಸಾಲ ಸುಲಾ ಮಾಡಿ ಮೆಕ್ಕೆಜೋಳ ಬೆಳೆ ಹಾಕಿದ್ದೆ ಈಗ ಎಲ್ಲಾ ಸುಟ್ಟು ಕಾರಕಲಗಿದೆ ಇನ್ನೇನು ಮೂರು ನಾಲ್ಕು ದಿನಗಳಲ್ಲಿ ಅಸನುಮಾಡಿ ಮಾರ್ಕೆಟ್ ಹೋಗಿ ಮಾರಾಟ ಮಾಡಬೇಕು ಅನ್ಕೊಂಡೆ ಆದರೆ ಈ ದುರಂತದಿಂತ ದಿಕ್ಕುತೋಚದಂತೆ ಆಗಿದೆ ಸುಮಾರು 2 ಲಕ್ಷ ರೂಪಾಯಿ ನಷ್ಟವಾಗಿದೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಹಾಗಾಗಿ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಅನ್ನದಾತ ತನ್ನ ಅಲಳನ್ನು ತೋಡಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಆಕಸ್ಮಿಕ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ವರದಿ ಸಿದ್ದಪಡಿಸಿ ಶೀಘ್ರ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಕಂದಾಯ ನಿರೀಕ್ಷಕ ಪ್ರಶಾಂತ್,ಕಾರ್ಯದರ್ಶಿ ಮಂಜುನಾಥ್, ಪರಗೋಡು ಪಂಚಾಯಿತಿ ಗೆಂಗಿರೆಡ್ಡಿ, ಗೋವಿಂದರೆಡ್ಡಿ, ರೈತ ಗಂಗಾಧರ, ಸ್ವೆತಾ, ಸಿ.ಪರಗೋಡು ವೆಂಕಟೇಶ್,ವಿ ಎಸ್ ಎಸ್ ಎನ್ ನಿರ್ದೇಶಕ ನರೇಶ್ ರಾಯಲ್, ಪಿ.ಎನ್.ವೆಂಕಟೇಶ್, ಅಶೋಕ್, ಇದ್ದರು..
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
