ತಂದೆ ತಾಯಿ ಗುರುಗಳೇ ನಮ್ಮ ಕಣ್ಣಿಗೆ ಕಾಣುವ ದೇವರು :ಜಗದೀಶ ತಾತರೆಡ್ಡಿ 

Mar 12, 2026 - 13:20
 0  4
ತಂದೆ ತಾಯಿ ಗುರುಗಳೇ ನಮ್ಮ ಕಣ್ಣಿಗೆ ಕಾಣುವ ದೇವರು :ಜಗದೀಶ ತಾತರೆಡ್ಡಿ 

      ಮುದ್ದೇಬಿಹಾಳ: ತಂದೆ ತಾಯಿ ಗುರುಗಳೇ ನಮ್ಮ ಕಣ್ಣಿಗೆ ಕಾಣುವ ದೇವರು ಎಂದು ಹೇಳಿದರು.

ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಶ್ರೀ ಅಮರೇಶ್ವರ ಪಬ್ಲಿಕ್ ಶಾಲೆಯಲ್ಲಿ ಮಾರ್ಚ್ 11 ರಂದು ಹಮ್ಮಿಕೊಂಡ ಮಕ್ಕಳಿಂದ ತಂದೆ-ತಾಯೆಂದೆರ ಪಾದ ಪೂಜೆ ಹಾಗೂ ತಂದೆ-ತಾಯಂದಿಯರಿಂದ ಮಕ್ಕಳಿಗೆ ಕೈತುತ್ತು ನೀಡುವ ಕಾರ್ಯಕ್ರಮದಲ್ಲಿ ಜಗದೀಶ ತಾತರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ನಮ್ಮ ನಾಡಿನ ನಮ್ಮ ದೇಶದ ಸಂಸ್ಕಾರ ಸಂಸ್ಕೃತಿ ಉಳಿಸುವುದರಲ್ಲಿ  ಶ್ರೀ ಅಮರೇಶ್ವರ ಪಬ್ಲಿಕ್ ಶಾಲೆ ಜ್ಞಾನ ಸಮೃದ್ಧಿ ಗುರುಕುಲ ಕಲಿಯುವ ಮನೆ ನಾಲತವಾಡ ಬಹು ಮುಖ್ಯ ಪಾತ್ರ ವಹಿಸುತ್ತಿದೆ ಎಂದರು. ಹಣಮಂತ ಕುರಿ ಮಾತನಾಡಿ ವಿದ್ಯೆಯೇ ಬಾಳಿನ ಬೆಳಕು ನಮ್ಮ ಶಾಲೆಯ ಶಿಕ್ಷಕರ ಹಾಗೂ ಮಕ್ಕಳ ಪ್ರಗತಿ ಕಂಡು ಸಂತೋಷವಾಯಿತು ಎಂದು ಹೇಳಿದರು.  ಮಕ್ಕಳಿಗೆಲ್ಲ ಸಿಹಿಯನ್ನು ವಿತರಿಸಿದರು. 
       ಅಧ್ಯಕ್ಷತೆಯನ್ನು  ಶಾಲೆಯ  ಅಧ್ಯಕ್ಷರಾದ ಜಗದೀಶ ತಾತರೆಡ್ಡಿ ಹಾಗೂ ಮುಖ್ಯ ಅತಿಥಿಗಳಾಗಿ ಮೇಲ್ವಿಚಾರಕ ಸದಸ್ಯರಾದ ಹಣಮಂತ ಕುರಿ,  ಮಾಂತೇಶ ಮನದಾಳಮಠ, ಪಾಲಕರಾದ ಬಿಸಿಎಂ ಹಾಸ್ಟೆಲ್ ವಾರ್ಡನ್ ಶರಣಮ್ಮ ಹುಗ್ಗಿ, ಗಂಗಪ್ಪ ದೊಡ್ಡಮನಿ, ಶಂಕ್ರಪ್ಪ ನವಲಿ, ರಸೂಲ ಖಾಜಿ,  ಮತ್ತು ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಭಾಗ್ಯಶ್ರೀ ಸಂಗಮೇಶ ನವಲಿ, ದೇಸಾಯಿಗೌಡ್ರ, ಸಹಶಿಕ್ಷಕಿಯರಾದ ಲಕ್ಷ್ಮೀ ಸಂಕೇಶ್ವರ, ಪರಶುರಾಮ ವಾಲೀಕಾರ,  ಜ್ಯೋತಿ ಬಸನಗೌಡ್ರ,  ಸಹಾಯಕಿ ಗುರುದೇವಿ ಬಿರಾದಾರ, ಪಾಲಕರು ಹಾಗೂ  ಶಾಲಾ ಮುದ್ದು ಮಕ್ಕಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456