ಬೀದಿ ದೀಪಗಳ ಸೂಕ್ತ ನಿರ್ವಹಣೆ ಅಗತ್ಯ

ವರದಿ ವರುಣ ಕೃಷ್ಣ. ಬಿ. ಕೆದಿಲ , ಪುತ್ತೂರು.

Nov 4, 2025 - 13:29
 0  14
ಬೀದಿ ದೀಪಗಳ ಸೂಕ್ತ ನಿರ್ವಹಣೆ ಅಗತ್ಯ

  ರಾತ್ರಿಯ ವೇಳೆಯಲ್ಲಿ ಪಾದಚಾರಿಗಳಿಗೆ / ವಾಹನಗಳಲ್ಲಿ ಸಂಚರಿಸುವವರಿಗೆ  ಸಹಾಯವಾಗಲಿ ಎಂಬ ಉದ್ದೇಶದಿಂದ ಪ್ರತಿ ಗ್ರಾಮ, ನಗರಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿರುತ್ತಾರೆ. ಆದರೆ ಕೆಲವು ಗ್ರಾಮೀಣ   ಭಾಗಗಳಲ್ಲಿ ಬೀದಿ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ಪಾದಚಾರಿ, ವಾಹನ ಚಾಲಕರಿಗೆ ಕಷ್ಟವಾಗುತ್ತಿದೆ.

ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಬೀದಿ ದೀಪಗಳನ್ನು ಆರಿಸದಿರುವುದು. ರಾತ್ರಿ ವೇಳೆ ಮಾತ್ರವಲ್ಲದೆ ಹಗಲು ಕೂಡ ಉರಿಯುತ್ತಿರುತ್ತವೆ. ಕೆಲವು  ಕಡೆ ಬೆಳಗ್ಗೆ ಶಾಲೆ, ಕಾಲೇಜು, ಉದ್ಯೋಗಗಳಿಗೆ ತೆರಳುವವರು ಆರಿಸುತ್ತಾರೆ.

ಆದರೆ ಕೆಲವು ಕಡೆ ಆರಿಸುವವರಿಲ್ಲದೆ ವಿದ್ಯುತ್ ನಷ್ಟವಾಗುತ್ತಿದೆ. ಆದ್ದರಿಂದ ದಾರಿ ಹೋಕರು ಅವುಗಳನ್ನು ಆರಿಸಬೇಕು. ಸ್ವಿಚ್ ನ ಸಮಸ್ಯೆ ಕೂಡ ಇದೆ. ಬೀದಿ ದೀಪಗಳ, ಸ್ವಿಚ್ ನ ಸೂಕ್ತ ನಿರ್ವಹಣೆ ಕುರಿತು ಸ್ಥಳೀಯ ಆಡಳಿತಗಾರರು ಗಮನ ಹರಿಸಬೇಕಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456