ಬಳ್ಳಾರಿಯ ಸಂಜೀವರಾಯ ದೇವಸ್ಥಾನದಲ್ಲಿ ವಿದುಷಿ ದಿವ್ಯಾ ಗಿರಿಧರ್ ಅದ್ಭುತ ಗಾಯನ 

May 1, 2026 - 15:48
 0  2
ಬಳ್ಳಾರಿಯ ಸಂಜೀವರಾಯ ದೇವಸ್ಥಾನದಲ್ಲಿ ವಿದುಷಿ ದಿವ್ಯಾ ಗಿರಿಧರ್ ಅದ್ಭುತ ಗಾಯನ 

     ಬಳ್ಳಾರಿ: ನಗರದ ರಾಯಲ್ ಕಾಲೋನಿಯ ಶ್ರೀ ಸಂಜೀವರಾಯ ಸ್ವಾಮಿ ದೇವಸ್ಥಾನದಲ್ಲಿ 50ನೇ ಶ್ರೀ ನರಸಿಂಹ ಜಯಂತ್ಯೋತ್ಸವದ ಪ್ರಯುಕ್ತ ಏ. 30ರಂದು ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರು ಸುಮಾರು ಎರಡು ಗಂಟೆಗಳ ಕಾಲ ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನೂ ಇನ್ನಿತರ ಕೃತಿಗಳನ್ನೂ ಸುಶ್ರಾವ್ಯವಾಗಿ ಹಾಡಿದ್ದು ಕಿಕ್ಕಿರಿದು ನೆರೆದಿದ್ದ ದಾಸಸಾಹಿತ್ಯಾಭಿಮಾನಿಗಳ ಮನಸೂರೆಗೊಂಡಿತು.

ಇವರ ಗಾಯನಕ್ಕೆ ಹಾರ್ಮೋನಿಯಂ ವಾದನದಲ್ಲಿ ಶ್ರೀ ಮಧುಸೂದನ್, ತಬಲಾ ವಾದನದಲ್ಲಿ ಶ್ರೀ ಪವಮಾನ ಅರಳಿಕಟ್ಟಿ ಮತ್ತು ತಾಳದಲ್ಲಿ ಶ್ರೀ ವಾದಿರಾಜ್ ಸ‌ಹಕರಿಸಿದರು.
ಇದೇ ಸಂದರ್ಭದಲ್ಲಿ ಬಳ್ಳಾರಿಯವರೇ ಆದ ಶ್ರೀಮತಿ ಅನುಕೃಪ ರೌಡೂರ್ ಪುರೋಹಿತ್ (ದಿವ್ಯಾ ಗಿರಿಧರ್ ಅವರ ಶಿಷ್ಯೆ) "ನಿಗಮ ನಿಗಮಾಂತ ವರ್ಣಿತ" ಎಂಬ ಶ್ರೀ ಅನ್ನಮಾಚಾರ್ಯರ ಕೀರ್ತನೆಯನ್ನು ಪ್ರಸ್ತುತ ಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456