ರವಿಕಿರಣ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕ ಕರ್ನಾಟಕ ಕೇಂದ್ರ ಘಟಕ ಕವಿಗೋಷ್ಠಿ
ಬಳ್ಳಾರಿ ಇವರು ಆಯೋಜಿಸಿರುವ ೨೩.೧೧.೨೦೨೫ ರಂದು ನಡೆದ ಶಿವಮೊಗ್ಗ ಜಿಲ್ಲೆಯ ಸಾಗರದ ಬೆಂಗಳೂರು ಹೊನ್ನಾವರ ಹೆದ್ದಾರಿಯಲ್ಲಿರುವ ಪವಿತ್ರ ರೆಸಿಡೆನ್ಸಿಯ ಸಭಾಂಗಣದಲ್ಲಿ ಪ್ರಥಮ ಕವಿಗೋಷ್ಠಿಯ ಕಾರ್ಯಕ್ರಮವನ್ನು ನಡೆಸಲಾಯಿತು ರವಿಕಿರಣ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ ಎಸ್ ವೀರೇಶ್ ಕುಮಾರ್ ಅವರು ಬಳಗದ ಪದಗ್ರಹಣ, ಗಜಲ್ ಕವಿಗೋಷ್ಠಿ, ಕವಿಗೋಷ್ಠಿ, ಬಳಗದ ಗ್ರಂಥಾಲಯ ಉದ್ಘಾಟನೆ, ಸಾಧಕರಿಗೆ ಸನ್ಮಾನ, ವಿಶೇಷ ಆಹ್ವಾನಿತರಿಗೆ ಸನ್ಮಾನ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು, ಇದರಲ್ಲಿ ವಿ ಗಣೇಶ್ ಅವರು ಸಮ್ಮೇಳನದ ಉದ್ಘಾಟಕರು ಮತ್ತು ಅಧ್ಯಕ್ಷತೆಯನ್ನು ವಹಿಸಿದ್ದರು, ಹಾ ಮಾ ಸತೀಶ್ ಇವರು ಗಜಲ್ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು, ಸ್ಟ್ಯಾನಿ ಲೋಪಿಸ್ ಕಾರ್ಗಲ್ ಇವರು ಮೊದಲನೆಯ ಭಾಗದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಗಂಗಾಧರ್ ಅತ್ರಯ್ ಅವರು ಎರಡನೆಯ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು
ಕುಮಾರಿ ಶಾಂತ ಹೆಚ್ ಹರಪನಹಳ್ಳಿ ಇವರು ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮವನ್ನು ಶುರು ಮಾಡಿದರು ತದನಂತರ ಶ್ರೀಮತಿ ಸಹನಾ ಭಟ್ ವಕೀಲರು ಪ್ರಾರ್ಥನೆಯನ್ನು ಮಾಡಿದರು ವಿ ಗಣೇಶ್ ಅವರು ದೀಪ ಹಚ್ಚುವುದರ ಮೂಲಕ ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ದೀಪದ ಜೊತೆಗೆ ಮಕ್ಕಳ ಚಂಡೆವಾದ್ಯವು ಉದ್ಘಾಟನೆಗೆ ಮೆರಗೂ ತಂದಿತು . ವಿ ಗಣೇಶ್ ಕಾರ್ಯಕ್ರಮಕ್ಕೆ ಶುಭ ಕೋರಿದರು ಅವರ ಜೊತೆ ಗಣ್ಯ ವ್ಯಕ್ತಿಗಳು ಸಹಕಾರ ನೀಡಿದರು. ಪದಗ್ರಹಣವನ್ನು ಸಂಸ್ಥಾಪಕರಾದ ಡಾ ಎಸ್ ವೀರೇಶ್ ಕುಮಾರ್ ಗಣ್ಯ ವ್ಯಕ್ತಿಗಳು ಸಮ್ಮುಖದಲ್ಲಿ ಮುಖನೆರವೇರಿಸಿ ಕೊಟ್ಟರು. ಗ್ರಂಥಾಲಯದ ಉದ್ಘಾಟನೆಯನ್ನು ಕವಿಗೋಷ್ಠಿಯ ಅಧ್ಯಕ್ಷರಾದ ಡಾ ಸ್ಕ್ಯಾನಿ ಲೋಪೀಸ್ ಕಾರ್ಗಲ್ ಮಾಡಿದರು ತದನಂತರ ಸುಮಾರು ೨೦ ಜನಕ್ಕೆ ಎಲ್ಲಾ ಗಣ್ಯರು ಸೇರಿ ಗೌರವ ಸಮರ್ಪಣೆಯನ್ನು ಸಮರ್ಪಿಸಿದರು.
ಬಳಗದ ರಾಜ್ಯ ಕಾರ್ಯದರ್ಶಿಯಾಗಿ ಶ್ರೀಮತಿ ರಮಾ ಕೆ ಕಲಘಟಗಿ, ಕುಮಾರಿ ಶಾಂತ ಹೆಚ್ ವಿಜಯನಗರದ ಜಿಲ್ಲಾಧ್ಯಕ್ಷರಾಗಿ, ಶ್ರೀಮತಿ ನಾಗರತ್ನ ಚೇಗೂರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರಾಗಿ, ಶ್ರೀಮತಿ ರೇಖಾ ನಾಲ್ವಡ್ ಗದಗ್ ಜಿಲ್ಲೆಯ ಅಧ್ಯಕ್ಷರಾಗಿ ಪದಗ್ರಹಣವನ್ನು ಸ್ವೀಕರಿಸಿದರು
ಎಲ್ಲಾ ಜಿಲ್ಲೆಗಳಿಂದಲೂ ಕವಿಗಳೆಲ್ಲ ಆಗಮಿಸಿ ಕವಿಗೋಷ್ಠಿಯ ಸುಂದರ ಕಾರ್ಯಕ್ರಮವನ್ನು ನಡೆಸಲಾಯಿತು ಮತ್ತು ಅವರಿಗೆ ಗೌರವ ಸನ್ಮಾನವನ್ನು ಮಾಡಲಾಯಿತು. ಊಟದ ವ್ಯವಸ್ಥೆಯು ಅಚ್ಚುಕಟ್ಟಾಗಿ ಮಾಡಲಾಗಿತ್ತು ಎಲ್ಲರ ಮುಖದಲ್ಲಿ ಮಂದಹಾಸವು ಮೂಡಿತ್ತು ಇದರ ಜೊತೆಯಲ್ಲಿ ಐದು ಪುಸ್ತಕಗಳ ಲೋಕಾರ್ಪಣೆ ನಡೆಯಿತು ಭಾವನೆಗಳ ಬೆಸುಗೆ ಮತ್ತು ಭಕ್ತಿ ಲಹರಿಯನ್ನು ಶ್ರೀಮತಿ ರಮಾ ಕೆ ಕಲಘಟಗಿ, ಒಂಟಿತನ ಕಾಡುತ್ತಿದೆ ಡಾ ವೀರೇಶ್ ಕುಮಾರ್ , ಹೃದಯದ ಮಾತು ಅಶೋಕ್ ಬೇಳಂಜೆ, ರವಿಕಿರಣಗಳ ಸಂಗಮ ಎಲ್ಲಾ ಕವಿಗಳಂದ. ಈ ೫ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು
ಅಂಬಿಕಾ, ಆಶಾ, ಲೋಕೇಶ್, ಡಾ ವೀರೇಶ್ ಕುಮಾರ್ ಮತ್ತು ರಕ್ಷಾ ಅವರು ಈ ಪುಸ್ತಕಗಳ ಪರಿಚಯಿಸಿದರು.
ಈ ಸುಂದರ ಕಾರ್ಯಕ್ರಮವನ್ನು ಸೆರೆಹಿಡಿದ ಚಂದನ ವಾಹಿನಿಯಲ್ಲಿ ಬಿತ್ತರಿಸಿದರು ಪತ್ರಕರ್ತರು ಮತ್ತು ವರದಿಗಾರರಾದ ದೀಪಕ್ ಅವರು. ಮತ್ತು ಈ ಕಾರ್ಯಕ್ರಮಕ್ಕೆ ಶ್ರೀ ಕೃಷ್ಣಮೂರ್ತಿ ಕಲಘಟಗಿಯವರು ತುಂಬಾ ಸಹಕರಿಸಿದರು.
ರವಿಕಿರಣ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಬಳಗವನ್ನು ಎಲ್ಲೆಡೆಯೂ ಹರಡುತ್ತಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿ ಎಲ್ಲಾ ರಾಜ್ಯಗಳಿಗೂ ವಿಸ್ತರಿಸುತ್ತಾ ತನ್ನ ಮೊದಲ ಕವಿಗೋಷ್ಠಿಯನ್ನು ಅತ್ಯಂತ ವಿಜ್ರಂಭಣೆಯಿಂದ ನೆರವೇರಿಸಿತು ಮತ್ತು ಡಿಸೆಂಬರ್ ತಿಂಗಳಲ್ಲಿ ಎರಡನೇ ಕವಿಗೋಷ್ಠಿಯನ್ನು ನಡೆಸಲು ನಿರ್ಧರಿಸಿದೆ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
