ಪೋಷಕರ- ಶಿಕ್ಷಕರ ಮಹಾಸಭೆ ಹಾಗೂ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನವನ್ನು ಆಚರಿಸಲಾಯಿತು
ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮದ ಎಸ್ ಡಬ್ಲ್ಯೂ ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ- ಶಿಕ್ಷಕರ ಮಹಾಸಭೆ ಹಾಗೂ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನವನ್ನು ಆಚರಿಸಲಾಯಿತು. ಈ ವೇಳೆ ಮುಖ್ಯ ಶಿಕ್ಷಕ ಮಂಜಪ್ಪ ಹೂಗಾರ ಮಾತನಾಡಿ ಪೋಷಕರು ಶಿಕ್ಷಕರು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಬಡ ಮಕ್ಕಳ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಬೆಳೆಸಬೇಕು, ಪೋಷಕರು ತಮ್ಮ ಮಕ್ಕಳು ಕಲಿಯುವ ಶಾಲೆಯೊಂದಿಗೆ ಸಂಪರ್ಕದಲ್ಲಿದ್ದು ಮಕ್ಕಳ ಶ್ರೇಯೋಭಿವೃದ್ಧಿಗೆ ಗಮನಹರಿಸಬೇಕು, ಮಕ್ಕಳ ಚಲನವಲನ ಗಮನಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಜ್ಯೋತಿ, ಸಂಗಮ, ಲಕ್ಷ್ಮಿ, ಶಂಕ್ರಮ್ಮ, ವೀರೇಶ,ಮಲ್ಲೇಶ ಹಾಗೂ ಪೋಷಕರು ಹಾಜರಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
