ಪ್ರೇಕ್ಷಕರನ್ನು ಚಿಂತೆಗೆ ಹಚ್ಚಬಲ್ಲ ಚಿತ್ರವಾಗಲಿದೆ-  "ಅವಧೂತ"

Mar 24, 2026 - 13:07
 0  5
ಪ್ರೇಕ್ಷಕರನ್ನು ಚಿಂತೆಗೆ ಹಚ್ಚಬಲ್ಲ ಚಿತ್ರವಾಗಲಿದೆ-  "ಅವಧೂತ"

      ಬೆಂಗಳೂರು, ಮಾರ್ಚ್ 23: ನಗರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಜೆ ಡಿ ಎನ್ ಮೂವೀಸ್ ಅರ್ಪಿಸಿ, ಸ್ಫೂರ್ತಿ ಕ್ರಿಯೇಷನ್ಸ್ ನಿರ್ಮಿಸುತ್ತಿರುವ " ಅವಧೂತ " ಚಲನಚಿತ್ರದ ಶೀರ್ಷಿಕೆಯನ್ನು ಅನಾವರಣ ಗೊಳಿಸಲಾಯಿತು. ಶ್ರೀಮತಿ. S. ಅಶ್ವಿನಿ ಯವರು ಶೀರ್ಷಿಕೆಯನ್ನು ಅನಾವರಣಗೊಳಿಸಿ ಚಿತ್ರ ತಂಡಕ್ಕೆ  ಶುಭ ಹಾರೈಸಿದರು.  ಅನುಭವಿ ನಿರ್ದೇಶಕ ಗಂಧರ್ವ ರಾಯರಾವುತ ನಿರ್ದೇಶಸುತ್ತಿರುವ ಈ ಚಿತ್ರಕ್ಕೆ ಡಾ. ಜೋಗಿಲ ಸಿದ್ದರಾಜು ಅವರ ಸಂಗೀತ ಸಂಯೋಜನೆಯಿದ್ದು, ಅವಿರತ ಹರೀಶ್ ಅವರು ಸಾಹಿತ್ಯ - ಸಂಭಾಷಣೆಯ ಹೊಣೆ ಹೊತ್ತಿದ್ದಾರೆ. ಶ್ರೀರಾಮ್ ಗಂಧರ್ವ ಹಾಗೂ ಶಶಿಕಲಾ ಅವರ ಹಿನ್ನಲೆ ಗಾಯನವಿದೆ. ತಾರಾಗಣದಲ್ಲಿ ಬಹುತೇಕ ನುರಿತ ರಂಗಭೂಮಿಯ ಕಲಾವಿದರಿದ್ದು, ಅನೇಕ ನವಪ್ರತಿಭೆಗಳು ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೆ ಡಿ ಎನ್ ಮೂವೀಸ್ ನ ಮಾಲೀಕರಾದ  ಶ್ರೀ ಜೆ. ಧನರಾಜ್ ನಾಯ್ಡು ರವರ ಸಾರಥ್ಯದಲ್ಲಿ ಇಡೀ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456