ಮಹಿಳಾ ಶಕ್ತಿಯನ್ನು ದುರ್ಬಲಗೊಳಿಸುವುದು ಕೇಂದ್ರ ಬಿಜೆಪಿಯ ಕುತಂತ್ರ, ಪರಶುರಾಮ್ ಕೆರೆಹಳ್ಳಿ
ಕೊಪ್ಪಳ: ದೇಶದ ಮಹಿಳೆಯರಿಗೆ ರಕ್ಷಣೆ ಇಲ್ಲ, ನಾಮಫಲಕವಾಗಿ ಮಹಿಳೆಯರಿಗೆ 33% ಹೇಳುವುದುಂಟೆ ? ಕೇಂದ್ರದ ಬಿಜೆಪಿ ಸರ್ಕಾರ ದೇಶದ ಮಹಿಳೆಯರಿಗೆ 33% ಮೀಸಲಾತಿ ಜಾರಿ ಮಾಡೋದಕ್ಕೆ ತರಾತುರಿ ಮಾಡಿ ವಿಫಲಗೊಂಡಿದೆ. ಮಹಿಳಾ ಮೀಸಲಾತಿಯನ್ನು 2011ರ ಜನಗಣತಿ ಆಧಾರದ ಮೇಲೆ ಅಥವಾ ದೇಶದ ಮಹಿಳೆಯರ ಜನಸಂಖ್ಯೆಯ ಆಧಾರದ ಮೇಲೆ ಪೂರ್ವಗ್ರಹಿತವಾದ ಸ್ಪಷ್ಟವಾದ ಮಾಹಿತಿ ದೇಶದ ಮಹಿಳೆಯರಿಗೆ ನೀಡಿಲ್ಲ, ಹಾಗೂ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಗಳ ಕ್ಷೇತ್ರಗಳ ವಿಂಗಡೆ ಮಾಡುವ ಉನ್ನಾರದಲ್ಲಿ ಮಹಿಳೆಯರ ಮೀಸಲಾತಿಯ ಮಸೂದೆಯನ್ನು ಲಿಂಕ್ ಮಾಡಿಕೊಂಡಿದ್ದಾರೆ. ಎಂದು ಎಸ್ ಸಿ ಘಟಕದ ಮಾಧ್ಯಮ ವಕ್ತಾರ ಪರಶುರಾಮ ಕೆರೆಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಪಕ್ಷ ಮಹಿಳೆಯರನ್ನು ಗೊಂದಲಕ್ಕೆ ಈಡು ಮಾಡುವುದು, ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವುದು ನಂತರ ದೇಶದ ಧರ್ಮಗಳನ್ನು ಟೀಕಿಸುವುದು ಮಾತ್ರ ಹಲವು ರೀತಿಯ ಷಡ್ಯಂತರಗಳನ್ನು ಬಿಜೆಪಿ ಪಕ್ಷ ಮಾಡುತ್ತಲೇ ಬಂದಿದೆ, ಬಿಜೆಪಿ ಪಕ್ಷಕ್ಕೆ ಮಹಿಳಾ ಮೀಸಲಾತಿಯನ್ನು ಜಾರಿ ಮಾಡಬೇಕು ಅಂತ ಹಲವಾರು ವರ್ಷಗಳಿಂದ ತಮ್ಮ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ವೈಫಲ್ಯಗಳನ್ನು ಕಂಡಿದ್ದರು ಸಹ ಬಿಜೆಪಿ ಪಕ್ಷ ವಿರೋಧ ಪಕ್ಷದ ನಾಯಕರನ್ನ ಸಹಮತವನ್ನು ತೆಗೆದುಕೊಳ್ಳಬೇಕು ಮತ್ತು ದೇಶದ ಜನಸಂಖ್ಯೆ ಆಧಾರದ ಮೇಲೆ ಹಾಗೂ ಜಾತಿ ಆಧಾರದ ಮೇಲೆ ಮಹಿಳಾ ಮೀಸಲಾತಿಯನ್ನು ಹೇಗೆ ಜಾರಿಗೊಳಿಸಬೇಕು ಎಂಬ ತಿಳುವಳಿಕೆ ಬಿಜೆಪಿ ಪಕ್ಷಕ್ಕೆ ಇಲ್ಲದಂತಾಗಿದೆ. ವಿಪಕ್ಷಗಳ ಮೇಲೆ ಆರೋಪ ಮಾಡುವುದಕ್ಕೋಸ್ಕರ ವಿಪಕ್ಷಗಳು ಮಹಿಳಾ ವಿರೋಧಿ ಎಂದು ಬಿಂಬುಸುವುದಕೋಸ್ಕರ ಈ ಮಸೂದೆಯನ್ನು ಮುಂದೆ ತಂದಿದ್ದಾರೆ.
ಆದ್ದರಿಂದ ಕಾಂಗ್ರೆಸ್ ಪಕ್ಷದಿಂದ ನಾವು ಒತ್ತಾಯ ಮಾಡುತ್ತೇವೆ ದೇಶದ ಮಹಿಳೆಯರ ರಕ್ಷಣೆ ಮಾಡುವುದಕ್ಕೆ ಬಿಜೆಪಿ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ, ಮಣಿಪುರದಲ್ಲಾಗುತ್ತಿರುವ ಮಹಿಳೆಯರ ದೌರ್ಜನ್ಯವನ್ನು ಬಿಜೆಪಿ ಸರ್ಕಾರ ಖಂಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ, ಮಹಿಳೆಯರ ಮೇಲೆ ಆಗುತ್ತಿರುವ ಶೋಷಣೆ ಮತ್ತು ದೌರ್ಜನ್ಯಗಳನ್ನು, ಅತ್ಯಾಚಾರಗಳನ್ನು ನಿಯಂತ್ರಿಸಬಹುದಕ್ಕೆ ಕೇಂದ್ರದ ಬಿಜೆಪಿ ದುರ್ಬಲ ಸರ್ಕಾರವಾಗಿದೆ.
ಇಂತಹ ನಿಸ್ಕೃಷ್ಟ, ಬೇಜವಾಬ್ದಾರಿತನವಾದ ಬಿಜೆಪಿ ಸರ್ಕಾರ ಮಹಿಳೆಯ ಮೀಸಲಾತಿಯನ್ನು ಜಾರಿ ಮಾಡುವುದಕ್ಕೆ ಸಿದ್ಧವಿದೆಯೇ ಎಂಬುದು ಅನುಮಾನ ಮೂಡಿಸುತ್ತಿದೆ. ಬಿಜೆಪಿ ಎಂದಿಗೂ ಮಹಿಳೆಯರ ಪರ ಅಲ್ಲ ಅನ್ನೋದನ್ನ ನಾವು ಹೇಳಬೇಕಾಗಿದೆ. ಆದ್ದರಿಂದ ಇವತ್ತಿನ ದೇಶದ ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಯಾವತ್ತೂ ದೇಶದ ಮಹಿಳೆಯರನ್ನು ಸುರಕ್ಷತೆಯನ್ನು ಕಾಪಾಡುವುದರಲ್ಲಿ ಬಿಜೆಪಿಯ ಕೈಯಲ್ಲಿ ಆಗುವುದಿಲ್ಲ ಎಂದು ಎಸ್ ಸಿ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀ ಗಾಳೆಪ್ಪ ಎಚ್ ಪೂಜಾರ್ ರವರು, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರರಾದ ಪರಶುರಾಮ್ ಕೆರೆಹಳ್ಳಿ ಹಾಗೂ ಎಸ್ ಸಿ ಘಟಕದ ಎಲ್ಲಾ ಪದಾಧಿಕಾರಿಗಳ ವತಿಯಿಂದ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
