ಪಾರಂಡಹಳ್ಳಿಯಲ್ಲಿ ಯೂರೋ ಕಿಡ್ಸ್ ಉತ್ತಮ ಗುಣಮಟ್ಟದ ಪ್ರಿ-ಸ್ಕೂಲ್ ಉದ್ಘಾಟನೆ
ಬೇತಮಂಗಲ: ಇಲ್ಲಿಗೆ ಸಮೀಪದ ಪಾರಂಡಹಳ್ಳಿಯಲ್ಲಿ ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರತರಲು ಮತ್ತು ಅವರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪಾರಂಡಹಳ್ಳಿಯಲ್ಲಿ ನೂತನವಾಗಿ ಯೂರೋ ಕಿಡ್ಸ್ ಶಾಲೆಯನ್ನು ಪ್ರಾರಂಭಿಸಲಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯ ಅತಿಥಿಗಳು ಹಾಗೂ ಗಣ್ಯರು ಜ್ಯೋತಿ ಬೆಳಗುವ ಮೂಲಕ ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಈ ವೇಳೆ ತಹಸೀಲ್ದಾರ್ ಭರತ್ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ತಳಹದಿ ಅವಶ್ಯಕ. ಯುರೋ ಕಿಡ್ಸ್ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಸ್ಥಳೀಯ ಮಟ್ಟದಲ್ಲಿ ನೀಡುತ್ತಿರುವುದು ಶ್ಲಾಘನೀಯ ಎಂದು ಆಶಯ ವ್ಯಕ್ತಪಡಿಸಿದರು.
ಈ ವೇಳೆ ಶಾಲೆಯ ಮುಖ್ಯಸ್ಥ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಯುರೋ ಕಿಡ್ಸ್ ಈ ಶಾಲೆಯನ್ನು ಸತತ 5 ವರ್ಷಗಳಿಂದ ಪ್ರಾರಂಭ ಮಾಡಲು ಪ್ರಯತ್ನ ಪಟ್ಟು ಈ ದಿನ ಅಮೇರಿಕಾ ಹಾರ್ವಾರ್ಡ್ ವಿಶ್ವ ವಿದ್ಯಾಲಯದ ಆಧಾರದ ಮೇಲೆ ಯುರೋ ಕಿಡ್ಸ್ ಶಾಲೆಯೂ ಭಾರತದಲ್ಲಿ 1200 ಶಾಲೆಗಳನ್ನು ಹೊಂದಿದ್ದು ಈ ಶಾಲೆಯಲ್ಲಿ ಬರಿ ಶಿಕ್ಷಣ ಬಗ್ಗೆ ಅಲ್ಲದೆ ಚಟುವಟಿಕೆಗಳ ಮೂಲಕ ಕೂಡ ಮಕ್ಕಳಿಗೆ ಉತ್ತಮ ಜ್ಞಾನ ನೀಡಬಹುದು ಎಂಬ ನಿಟ್ಟಿನಲ್ಲಿ ಯುರೋ ಕಿಡ್ಸ್ ಶಾಲೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಪಾರಂಡಹಳ್ಳಿ ಮತ್ತು ಸುತ್ತಮುತ್ತಲಿನ ಪೋಷಕರಿಗೆ ತಮ್ಮ ಮಕ್ಕಳನ್ನು ಸುಸಜ್ಜಿತ ಶಿಕ್ಷಣ ಸಂಸ್ಥೆಗೆ ಸೇರಿಸಲು ಈಗ ಸುಲಭ ಅವಕಾಶ ದೊರೆತಿದೆ. ಮಕ್ಕಳ ಸುರಕ್ಷತೆ ಮತ್ತು ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಮತ್ತು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿ. ಪೋಷಕರ ವಿಶ್ವಾಸಕ್ಕೆ ತಕ್ಕಂತೆ ನಾವು ಶ್ರಮಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಭರತ್, ಶಾಲೆಯ ಮುಖ್ಯಸ್ಥ ಶ್ರೀನಿವಾಸ್ ರೆಡ್ಡಿ, ಜಿಪಂ ಮಾಜಿ ಸದಸ್ಯ ಅಮು ಲಕ್ಷ್ಮೀ ನಾರಾಯಣ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹ ಮೂರ್ತಿ, ಮುಖಂಡರಾದ ಭಟ್ರಕುಪ್ಪ ಸತೀಶ್ ರೆಡ್ಡಿ, ದಶರತ್ ರೆಡ್ಡಿ, ವಿರಾಟ್ ಗೋಪಿ, ಉಮೇಶ್, ಶ್ರೀನಿವಾಸ್ ರೆಡ್ಡಿ ಸುಬ್ಬರೆಡ್ಡಿ, ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
