ಯಶ ಕಂಡ ಮಹಾನ್ ದಾರ್ಶನಿಕರ ಜಯಂತೋತ್ಸವ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಯನಗರ ಘಟಕದ ವತಿಯಿಂದ ದಿನಾಂಕ 20.04. 2026 ರಂದು ಶ್ರೀ ಬಸವೇಶ್ವರ ಜಯಂತಿ, ಅಕ್ಕಮಹಾದೇವಿ ಜಯಂತಿ ಮತ್ತು
ಡಾ.ಶ್ರೀ ಶ್ರೀ ಶ್ರೀ.ಶಿವಕುಮಾರ ಶ್ರೀಗಳ ಜಯಂತೋತ್ಸವ ಕಾರ್ಯಕ್ರಮವು ಜಯನಗರ 8ನೇ ಬ್ಲಾಕ್ ನಲ್ಲಿರುವ ಬಸವೇಶ್ವರ ಪುತ್ಥಳಿ ಬಳಿ ಯಶಸ್ವಿಯಾಗಿ ನೆರವೇರಿತು
ಸಿದ್ದಗಂಗಾ ಮಠದ ಪೂಜ್ಯ ಶ್ರೀಗಳಾದ ಶ್ರೀ ಶ್ರೀ ಶಿವಸಿದ್ದೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು
ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಸಿ. ಕೆ. ರಾಮಮೂರ್ತಿ ಯವರು ಸಮಾರಂಭವನ್ನು ಉದ್ಘಾಟಿಸಿದರು
ಬಿ.ಬಿ.ಎಂ.ಪಿಯ ಮಾಜಿ ಮಹಾಪೌರರಾದ ಶ್ರೀಮತಿ. ಗಂಗಾಂಬಿಕೆ ಮಲ್ಲಿಕಾರ್ಜುನ ರವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಶ್ರೀ ಹೆಚ್. ಚಂದ್ರಶೇಖರ್ ರವರು ವಹಿಸಿದ್ದರು. ಬಿ.ಬಿ.ಎಂ.ಪಿ ಘಟಕದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ನವೀನ್ ಕುಮಾರ್ ಬಿಡದಿ ರವರು ಎಲ್ಲರನ್ನು ಸಭೆಗೆ ಸ್ವಾಗತಿಸಿದರು.
ಘಟಕದ ಪ್ರಧಾನ ಕಾರ್ಯದರ್ಶಿ
ಶ್ರೀ ಸೋ.ಫಾಲನೇತ್ರ ರವರು ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆಯನ್ನು ಮಾಡಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
