ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಭಕ್ತಿ ಅಗತ್ಯ: ಡಾ.ಹಂಡಿಗಿ
ನವಲಗುಂದ: "ವಿದ್ಯಾರ್ಥಿ ಜೀವನ ಸ್ಪರ್ಧಾತ್ಮಕತೆಯಿಂದ ಕೂಡಿದ್ದು, ಹೊಸತನದ ಶಿಕ್ಷಣದ ಜೊತೆಗೆ ಮೌಲ್ಯಯುತ ನೈತಿಕ ಶಿಕ್ಷಣ ನೀಡಿ ಅವರಲ್ಲಿ ರಾಷ್ಟ್ರ ಭಕ್ತಿ ತುಂಬಿ ಸಿದ್ಧಗೊಳಿಸಬೇಕಾಗಿದೆ" ಎಂದು ಶಿಕ್ಷಕ ಸಾಹಿತಿ ಡಾ. ಸಿದ್ಧಲಿಂಗೇಶ ಹಂಡಿಗಿ ನುಡಿದರು.
ಸ್ಥಳೀಯ ವಿಶ್ವವಿಜೇತ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶಾಲೆಯಲ್ಲಿ ಜರುಗಿದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಹಿರಿಯ ವ್ಯಾಪಾರಸ್ಥರಾದ ಸುಹಾಸ ಆನೇಗುಂದಿ,"ಮಕ್ಕಳಲ್ಲಿ ದೇಶಪ್ರೇಮ ಬೆಳೆಸಿ , ಗುರು ಹಿರಿಯರನ್ನು ಗೌರವಿಸುವ ಪರಂಪರೆ ಬೆಳೆಸುವಲ್ಲಿ ಈ ಶಾಲೆಯ ಕೊಡುಗೆ ಗಮನಾರ್ಹವಾಗಿದೆ" ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಸಿನಟ್ ಸದಸ್ಯ ಜಯಪ್ರಕಾಶ ಬಾದಾಮಿ ಮಾತನಾಡಿ, "ವಿದ್ಯಾರ್ಥಿಗಳಲ್ಲಿ ನಾವಿನ್ಯಯುತ ಕೌಶಲ್ಯಗಳ ಮೂಲಕ ಶಿಕ್ಷಣ ಕೊಡಬೇಕಾಗಿದ್ದು,ಆ ನಿಟ್ಟಿನಲ್ಲಿ ಸೇವಾ ಭಾರತಿ ವತಿಯಿಂದ ಇಲ್ಲಿ ಕ್ರಮ ಕೈಗೊಳ್ಳಲಾಗಿದೆ" ಎಂದರು.
ಯುವ ವೈದ್ಯ ಡಾ. ಬಿ.ಎಲ್.ಪಾಟೀಲ ಮಾತನಾಡಿ, "ವಿದ್ಯಾರ್ಥಿಗಳಲ್ಲಿ ಭಾರತೀಯ ಪರಂಪರೆಯ ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಬರುವಂತಹ ವಾತಾವರಣ ಈ ಶಾಲೆಯಲ್ಲಿದೆ" ಎಂದರು.
ಪುರಸಭೆಯ ಮಾಜಿ ಸದಸ್ಯ ನಿಂಗಪ್ಪ ಸುಳ್ಳದ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ನಾಗಪ್ಪ ತೋಟಪ್ಪನವರ, ಶ್ರೀಮತಿ ಸ್ವಪ್ನಾ ಸರ್ವದೆ, ಮಂಜುಳಾ ಕೊಟಗಿ, ನಿಂಗಪ್ಪ ಕುಂಬಾರ, ಶ್ರೀಮತಿ ಶಿವಲೀಲಾ ತೋಟಪ್ಪನವರ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.ನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
What's Your Reaction?
Like
3
Dislike
0
Love
0
Funny
0
Angry
0
Sad
0
Wow
0
