ಲೇಖಕ–ರಂಗಕರ್ಮಿ–ಸಿನಿಮಾ ನಿರ್ದೇಶಕ ಮಂಜು ಪಾಂಡವಪುರರೊಂದಿಗೆ ಆಕಾಶವಾಣಿ ಧಾರವಾಡ ಸಂದರ್ಶನ 

Jan 23, 2026 - 13:11
 0  3
ಲೇಖಕ–ರಂಗಕರ್ಮಿ–ಸಿನಿಮಾ ನಿರ್ದೇಶಕ ಮಂಜು ಪಾಂಡವಪುರರೊಂದಿಗೆ ಆಕಾಶವಾಣಿ ಧಾರವಾಡ ಸಂದರ್ಶನ 

   ಧಾರವಾಡ: ಬೆಂಗಳೂರು ಮೂಲದ ಲೇಖಕ, ರಂಗಕರ್ಮಿ ಹಾಗೂ ಸಿನಿಮಾ ನಿರ್ದೇಶಕರಾದ ಮಂಜು ಪಾಂಡವಪುರ ಅವರೊಂದಿಗೆ ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ವಿಶೇಷ ಸಂದರ್ಶನ ನಡೆಯಿತು.

ಈ ಸಂದರ್ಶನವನ್ನು ಆಕಾಶವಾಣಿ ಧಾರವಾಡದ ನಿರ್ದೇಶಕರಾದ ಶರಣಬಸವ ಚೋಳಿನ ನಡೆಸಿಕೊಟ್ಟರು. ಸಂದರ್ಶನದ ವೇಳೆ ಮಂಜು ಪಾಂಡವಪುರರು ತಮ್ಮ ಸಾಹಿತ್ಯಯಾನ, ರಂಗಭೂಮಿ ಅನುಭವಗಳು, ಸಿನಿಮಾ ನಿರ್ದೇಶನದ ಸವಾಲುಗಳು ಹಾಗೂ ಸಾಮಾಜಿಕ ಬದ್ಧತೆಯ ಕಲೆಯ ಮಹತ್ವದ ಕುರಿತು ಮನಮುಟ್ಟುವಂತೆ ಮಾತನಾಡಿದರು.

ಗ್ರಾಮೀಣ ಬದುಕು, ಮಾನವೀಯ ಮೌಲ್ಯಗಳು ಮತ್ತು ಸಮಾಜಮುಖಿ ಚಿಂತನೆಗಳು ತಮ್ಮ ಸೃಜನಶೀಲತೆಯ ಮೂಲವಾಗಿವೆ ಎಂದು ಅವರು ತಿಳಿಸಿದರು. ರಂಗಭೂಮಿಯಿಂದ ಸಿನಿಮಾವರೆಗೆ ತಮ್ಮ ಕಲಾ ಪಯಣದಲ್ಲಿ ಎದುರಿಸಿದ ಅನುಭವಗಳು ಯುವ ಕಲಾವಿದರಿಗೆ ಪ್ರೇರಣೆಯಾಗುವಂತಿವೆ ಎಂದು ಸಂದರ್ಶಕರು ಅಭಿಪ್ರಾಯಪಟ್ಟರು.
ಈ ಸಂದರ್ಶನ  ಆಕಾಶವಾಣಿ ಧಾರವಾಡ ಕೇಂದ್ರದ ಎಲ್ಲ ಬಾನುಲಿ ಮೂಲಕ ಪ್ರಸಾರಗೊಂಡಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456