ಕಡಲೆ ಖರೀದಿಸಿದ ಹಣವನ್ನು ರೈತರ ಖಾತೆಗೆ ಜಮವಣೆ ಮಾಡಲು ಆಗ್ರಹಿಸಿದ ಅಂದಪ್ಪ. ಕೋಳೂರ
ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸಿದ ಹಣವನ್ನು ಒಂದು ತಿಂಗಳವಾಳಗಾಗಿ.ರೈತರ ಖಾತೆಗೆ ಜಮಾವಣೆ ಮಾಡಬೇಕೆಂದು ರೈತರಿಂದ ಕಡಲೆ ಖರೀದಿಸುವಾಗಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಲಾದರೂ ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಸಿ ಎರಡು ತಿಂಗಳ ಕಳೆದರೂ ಕೂಡ ಸರ್ಕಾರದ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಕಡಲೆ ಖರೀದಿಸಿದ ಹಣವನ್ನು.ರೈತರ ಖಾತೆಗೆ ಜಮವಾಣೆ ಮಾಡಿಲ್ಲ ಕೂಡಲೇ ಸರ್ಕಾರ ಹಂತ ಹಂತವಾಗಿ. ರೈತರ ಖಾತೆಗೆ ಕಡಲೆ ಖರೀದಿಸಿದ ಹಣವನ್ನು ಜಮವಣೆ ಮಾಡಬೇಕೆಂದು ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ. ಇವರು ಆಗ್ರಹಿಸಿದರು.
ಹೌದು ಈಗಾಗಲೇ ರೈತರು 2026-27.ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ರಸಗೊಬ್ಬರ ಖರೀದಿಸುವುದಕ್ಕೆ ಹಣಕಾಸು ಇಲ್ಲದೇ ರೈತರು ಸಂಕಷ್ಟ ಎದುರಿಸಿವಂತಾಗಿದೆ ಇನ್ನೂ ಕೆಲವು ರೈತರು ಯುಗಾದಿ ಹಬ್ಬದಿಂದ ಎರಡುವರೆ ತಿಂಗಳವರಿಗೆ ಜಮೀನು ಖರೀದಿಸುವುದು ಜಮೀನು ಲಿಜಿಗೆ ಮಾಡಿಕೊಳ್ಳೂವುದು ಇದೊಂದು ರೈತರಿಗೆ ಹೊಸ ವರ್ಷದ ದಿನವನ್ನಾಗಿ ಹೊಸದಾಗಿ ಹಣಕಾಸಿನ ವ್ಯವಹಾರವನ್ನು ಮಾಡಿ ಹೊಸ ಕಾಗದ ಪತ್ರವನ್ನು ಸೃಷ್ಟಿ ಮಾಡಿಕೊಡುತ್ತಾರೆ.
ಈ ಸಂದರ್ಭದಲ್ಲಿ ರೈತರ ಕೈಯಲ್ಲಿ ಹಣ ಇಲ್ಲದ ಕಾರಣ ಎಲ್ಲಾ ವ್ಯವಹಾರಗಳು ಕುಂಟಿತವಾಗುತ್ತದೆ ಎಲ್ಲಾ ರೈತರ ವ್ಯವಹಾರ ನಡೆಯಬೇಕಾದರೆ ಸರ್ಕಾರ ರೈತರಿಂದ ಕಡಲೆ ಖರೀದಿಸಿದ ರೈತರ ಹಣ ರೈತರ ಖಾತೆಗೆ ಜಮವಣೆ ಮಾಡಿ ಜಿಲ್ಲೆಯ ರೈತರಿಗೆ ಅಡ್ಡಿ ಆಗದಂತೆ ರೈತರ ವ್ಯವಹಾರಕ್ಕೆ ಅನುಕೂಲ ಆಗುವಂತೆ ಸರ್ಕಾರ ಮಾಡಿಕೊಡಬೇಕೆಂದು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ. ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯದರ್ಶಿ ಅಣಪ್ಪ ನರೇಗಲ್ಲ್. ದೇವರಡ್ಡಿ ನಾಗರಡ್ಡಿ.ಶರಣಪ್ಪ ಜೋಗಿನ್. ಮಾರುತಿ ಮರಡಿ. ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ. ಸೇರಿದಂತೆ ಇನ್ನಿತರರು. ಆಗ್ರಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
