ಕೆ.ಜಿ.ಎಫ್: ಗಡಿಪಾರು ಕಾಯ್ದೆ ಉಲ್ಲಂಘಿಸಿದ ಕುಖ್ಯಾತ ರೌಡಿ ಬಂಧನ
ಕೆಜಿಎಫ್.,ಏ. 06: ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ರೌಡಿ ಆಸಾಮಿ ವೈ.ವಿಕ್ರಮ್ @ ಕಾಣಿಕ್ ರಾಜ್ ಬಿನ್ ಲೇಟ್ ಯಾಕೂಬ್, 39 ವರ್ಷ, ವಾಸ: ಲೂರ್ದನಗರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ತಾಲ್ಲೂಕು ಎಂಬಾ ತನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ 01 ಕೊಲೆ, 01 ಕೊಲೆ ಪ್ರಯತ್ನ, 01 ಹಲ್ಲೆ ಒಟ್ಟು 03 ಪ್ರಕರಣಗಳಲ್ಲಿ ಭಾಗಿಯಾಗಿ ಘನ ನ್ಯಾಯಾಲಯದಿಂದ ಜಾಮೀನು ಪಡೆದು ಪುನಃ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರಿಂದ ರೌಡಿ ಚಟುವಟಿ ಕೆಗಳನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಪೊಲೀಸ್ ಅಧಿನಿಯಮ 1963 ಕಲಂ 55(ಎ) ಅಡಿಯಲ್ಲಿ ಈತನನ್ನು ಕೆ.ಜಿ.ಎಫ್ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ 6 ತಿಂಗಳು ಕಾಲ ಗಡಿಪಾರು ಮಾಡಿ ಆದೇಶಿಸಿದ್ದು, ಆದರೆ ಈತನು ಗಡಿಪಾರು ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ಯಾದಗಿರಿ ನಗರ ಪೊಲೀಸ್ ಠಾಣೆಯಿಂದ ಬಂದ ಮಾಹಿ ತಿಯ ಮೇರೆಗೆ ಸದರಿ ರೌಡಿ ಆಸಾಮಿಯನ್ನು ಆತನ ವಾಸದ ಮನೆಯ ಬಳಿ ಆಂಡ್ರಸನ್‌ಪೇಟೆ ಪೊಲೀಸರು ವಶಕ್ಕೆ ಪಡೆದು ಈತನ ವಿರುದ್ಧ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ಮೊಕದೊಮ್ಮೆ ಸಂಖ್ಯೆ: 38/2026 ಕಲಂ 113, 114 ಕೆ.ಪಿ. ಆಕ್ಟ್ ಹಾಗೂ 128 (ಎ) ಕರ್ನಾಟಕ ಪೊಲೀಸ್ ಅಧಿನಿಯಮ ತಿದ್ದುಪಡಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಆತನ ವಿರುದ್ಧ ಕಾನೂನು ಕ್ರಮ ವಹಿಸಿರುತ್ತಾರೆ. ರೌಡಿ ಆಸಾಮಿಗಳು ಗಡಿಪಾರು ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಇದೇ ರೀತಿ ಕಠಿಣ ಕಾನೂನು ಕ್ರಮ ಕೈಗೊಂಡು ಬಂಧನ ಮಾಡಲಾಗುವುದು. ಪೊಲೀಸ್ ಉಪಾಧೀಕ್ಷಕರಾದ ವಿ.ಲಕ್ಷö್ಮ ಯ್ಯ ಮತ್ತು ರಾಬರ್ಟ್ಸನ್‌ಪೇಟೆ ವೃತ್ತ ನಿರೀಕ್ಷಕರಾದ ಅನಿಲ್ ಕುಮಾರ್.ಎಮ್.ಎಸ್. ಮಾರ್ಗದರ್ಶನದಲ್ಲಿ ರೌಡಿ ಆಸಾ ಮಿಯನ್ನು ಬಂಧಿಸುವಲ್ಲಿ ಪಿ.ಎಸ್.ಐ ಮಂಜುನಾಥ.ಬಿ ಮತ್ತು ಸಿಬ್ಬಂದಿಗಳಾದ ರಮೇಶ್ ಜಂಬಗಿ, ಲೋಕೇಶ್ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು, ಇವರ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಶಿವಾಂಶು ರಜಪೂತ್ ರವರು ಶ್ಲಾಘಿಸಿದ್ದಾರೆ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
1
