ಕಾಮಸಮುದ್ರಂ ಸರಗಳ್ಳತನ ಮತ್ತು ದೇವಸ್ಥಾನ ಕಳವು, ಅಂತರರಾಜ್ಯ ಆರೋಪಿಗಳ ಬಂಧನ, ಮಾಲು ವಶ
ಕೆಜಿಎಫ್.,ಏ.06: ಕಾಮಸಮುದ್ರಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದ ದೇವಸ್ಥಾನ ಕಳವು ಪ್ರಕರಣ ಹಾಗೂ ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಸಿದ್ದ ಸರಗಳ್ಳತನ ಪ್ರಕರಣ ಗಳಲ್ಲಿ ನಾಲ್ವರು ಅಂತರರಾಜ್ಯ ಆರೋಪಿಗಳನ್ನು ಬಂಧಿಸಿ, ಅವರುಗಳಿಂದ ಸುಮಾರು ರೂ.2,22,500/- ಬೆಲೆ ಬಾಳುವ 18 ಗ್ರಾಂ ಚಿನ್ನದ ಆಭರಣಗಳು,ದೇವರ ಪೂಜೆಯ ಕಂಚಿನ ತಟ್ಟೆ, ಕಂಚಿನ ಗಂಟೆ ಹಾಗೂ ಕೃತ್ಯಕ್ಕೆ ಬಳಿಸಿದ ಒಂದು ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಮಾರ್ಚ 16 ರಂದು ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದು ದೇಶಿಹಳ್ಳಿ ಹೊರವಲಯದ ಚಿಲ್ಲರೆ ಅಂಗಡಿಯ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದು ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊ.ಸಂ 75/2026 ಕಲಂ 309(6) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.ಮತ್ತು ಮಾರ್ಚ 22 ರಂದು ಕಾಮಸಮುದ್ರಂ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಬಂರ‍್ಲಹಳ್ಳಿ ಗ್ರಾಮದ ಲಂಬಾಡಿ ಕೆರೆಯ ಅಂಗಳದಲ್ಲಿರುವ ಶ್ರೀ.ಕುಂಟಿಗAಗಮ್ಮ ದೇವಸ್ಥಾನದಲ್ಲಿ ಕಳವು ಆಗಿದ್ದು ಈ 14/2026 ಕಲಂ 331(4),305 ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಗಳಲ್ಲಿ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆಮಾಡುವ ಸಲುವಾಗಿ ಮಾನ್ಯ ಮಾನ್ಯ ಡಿವೈಎಸ್‌ಪಿ ವಿ.ಲಕ್ಷö್ಮಯ್ಯ ರವರು ಶ್ರೀ.ಮಾರ್ಕೋಂಡಯ್ಯ ಪ್ರಭಾರ ಕಾಮಸಮುದ್ರಂ ವೃತ್ತ ಹಾಗೂ ಶ್ರೀ.ರವಿಕುಮಾರ್, ಸಿ, ಪೊಲೀಸ್ ನಿರೀಕ್ಷಕರು ಬಂಗಾರಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಶ್ರೀಕಿರಣ್‌ಕುಮಾರ್ ಬಿ.ವಿ, ಪಿ.ಎಸ್.ಐ, ಕಾಮಸಮುದ್ರಂ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಕಾಮಸಮುದ್ರಂ ಪೊಲೀಸರು ತಮಿಳುನಾಡು ಆರೋಪಿಗಳಾದ 1) ಶಿವ ಬಿನ್ ಗೋವಿಂದಪ್ಪ,ವಯಸ್ಸು 30 (ವರ್ಷ), 2) ಪ್ರಭಾಕರ್ ಬಿನ್ ಲಕ್ಷö್ಮಪ್ಪ, ವಯಸ್ಸು 30 (ವರ್ಷ), 3) ಅನೀಲ್‌ಕುಮಾರ್ ಬಿನ್ ನಾರಾಯಣಪ್ಪ, ವಯಸ್ಸು 30 (ವರ್ಷ), 4) ರೂಪೇಶ್ ಬಿನ್ ಮುನಿಯಪ್ಪ, ವಯಸ್ಸು 30 (ವರ್ಷ) ರವರುಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಮೇಲ್ಕಂಡ ಪ್ರಕರಣUಳಲ್ಲಿ ಹಾಗೂ ಆರೋಪಿತರು ತಮಿಳುನಾಡಿನ ಕೆಳಮಂಗಲA ಪೊಲೀಸ್ ಠಾಣೆಯ ಮೊ.ಸಂ 46/2026 ಕಲಂ 304 ಬಿ.ಎನ್.ಎಸ್ ಮತ್ತು ಹೊಸಕೋಟೆ ಪೊಲೀಸ್ ಠಾಣೆಯ ಮೊ.ಸಂ 47/2026 ಕಲಂ 303(2), 318(4) ಬಿ.ಎನ್.ಎಸ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬAದಿರುತ್ತದೆ. ಸದರಿ ಆರೋಪಿಗಳಿಂದ ಸುಮಾರು ರೂ.2,22,500/- ಬೆಲೆ ಬಾಳುವ 18 ಗ್ರಾಂ ಚಿನ್ನದ ಆಭರಣಗಳು ,ದೇವರ ಪೂಜೆಯ ಕಂಚಿನ ತಟ್ಟೆ, ಕಂಚಿನ ಗಂಟೆ ಹಾಗೂ ಕೃತ್ಯಕ್ಕೆ ಬಳಿಸಿದ ಒಂದು ಕಾರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕಾಮಸಮುದ್ರಂ ಪಿ.ಎಸ್.ಐ ಬಿ.ವಿ.ಕಿರಣ್‌ಕುಮಾರ್, ಪಿ.ಎಸ್.ಐ ಲಕ್ಷಿö್ಮನಾರಾಯಣ ವಿಶೇಷ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಮಂಜುನಾಥರೆಡ್ಡಿ, ಮುನಾವರ್‌ಪಾಷ, ರಾಮರಾವ್, ರಾಮಕೃಷ್ಣಾರೆಡ್ಡಿ, ಮಂಜುನಾಥ, ಲಕ್ಷಿö್ಮಣತೇಲಿ, ಹಾಗೂ ಜೀಪ್ ಚಾಲಕ ಗುರುಮೂರ್ತಿ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
