ಘಟ್ಟು ವೆಂಕಟರಮಣ ಸ್ವಾಮಿ ಜಾತ್ರೆ: ಭಕ್ತಿಯ ಪರಾಕಾಷ್ಠೆಯಲ್ಲಿ ಪೆದ್ದೂರು ಗ್ರಾಮಸ್ಥರಿಂದ ಶೇಷವಾಹನೋತ್ಸವ
ಬೈರಕೂರು: ಮುಳಬಾಗಿಲು ತಾಲ್ಲೂಕಿನ ಎಂ ಚಮಕಲಹಳ್ಳಿ ಗ್ರಾಮದ ಸಮೀಪದ ನೆಲೆಸಿರುವ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಘಟ್ಟು ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ, ಪೆದ್ದೂರು ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಶೇಷವಾಹನೋತ್ಸವ ವು ಅತ್ಯಂತ ವೈಭವದಿಂದ ಜರುಗಿತು.
ಬೆಳಿಗ್ಗೆಯಿಂದಲೇ ಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ಶೇಷವಾಹನದ ಮೇಲೆ ಕುಳಿತ ವೆಂಕಟರಮಣ ಸ್ವಾಮಿಯ ಉತ್ಸವ ಮೂರ್ತಿಯನ್ನು ನಾನಾ ತರಹದ ಪುಷ್ಪಗಳಿಂದ ಕಂಗೊಳಿಸುವಂತೆ ಅಲಂಕರಿಸಲಾಗಿತ್ತು. ಪೆದ್ದೂರು ಗ್ರಾಮಸ್ಥರು ಭಕ್ತಿಭಾವದಿಂದ ಸ್ವಾಮಿಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು,ನಮ್ಮ ಗ್ರಾಮದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಘಟ್ಟು ವೆಂಕಟರಮಣ ಸ್ವಾಮಿಗೆ ಶೇಷವಾಹನೋತ್ಸವ ಸೇವೆ ಸಲ್ಲಿಸಿರುವುದು ನಮ್ಮ ಭಾಗ್ಯ ಸ್ವಾಮಿಯ ಕೃಪೆ ಎಲ್ಲಾ ಭಕ್ತಾದಿಗಳ ಮೇಲಿರಲಿ ಎಂದು ಕೋರಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಶ್ರೀ ಘಟ್ಟು ವೆಂಕಟರಮಣ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಶೇಷವಾಹನೋತ್ಸವವು ದೇಗುಲ ಮುಂಭಾಗ ಮೆರವಣಿಗೆ ನಡೆಯಿತು ಮೆರವಣಿಗೆ ಪ್ರಯುಕ್ತ ವಾದ್ಯ ಗೋಷ್ಠಿ, ಕೋಲಾಟ, ಮುಂತಾದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪೆದ್ದೂರಿನ ಗ್ರಾಮಸ್ಥರು ಯುವಕರು ಮತ್ತು ಭಕ್ತಾದಿಗಳು ಹಾಗೂ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
