ಪ್ರೇಕ್ಷಕರ ಮನಸೆಳೆದ ದಾಸವಾಣಿ
ಬೆಂಗಳೂರು :ವಯ್ಯಾಲಿಕಾವಲ್ ಎಕ್ಸ್ ಟೆನ್ಷನ್ ಅಸೋಸಿಯೇಷನ್ ವತಿಯಿಂದ ಶ್ರೀರಾಮ ದೇವಸ್ಥಾನದಲ್ಲಿ ಶ್ರೀರಾಮನವಮಿ ಸಂಗೀತೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರು ಹರಿದಾಸರ,ಅನ್ನಮಾಚಾರ್ಯರ, ತ್ಯಾಗರಾಜರ, ಭದ್ರಾಚಲಂ ರಾಮದಾಸರ ರಚನೆಯ ಕೃತಿಗಳನ್ನು ಹಾಗೂ ಮರಾಠಿ ಅಭಂಗಗಳನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರಸ್ತುತ ಪಡಿಸಿದರು. ಕೀಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ, ತಬಲಾ ವಾದನದಲ್ಲಿ ಶ್ರೀ ಮಧುಸೂದನ್ ಕೊಪ್ಪ, ಕೊಳಲು ವಾದನದಲ್ಲಿ ಶ್ರೀ ಬಾಲಸುಬ್ರಹ್ಮಣ್ಯಂ ಮತ್ತು ತಾಳದಲ್ಲಿ ಮಾ|| ಸಮರ್ಥ್ ದೀಕ್ಷಿತ್ ಸಹಕರಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
