ಕುಸುಬೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಕ್ಕೆ ರೈತ ಸಂಘ ಮನವಿ
ಕೊಪ್ಪಳ: ಜಿಲ್ಲೆಯ ರೈತರಿಗೆ ಕುಸುಬೆ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸುವಂತೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ. ಕುಕನೂರು ತಹಶೀಲ್ದಾರರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಸಿಎಂ ಆರ್ಥಿಕ ಸಲಹೆಗಾರ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿಗೆ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಮಳೆಯಾಶ್ರಿತ ಪ್ರದೇಶದಲ್ಲಿ ಸುಮಾರು 40% ರೈತರು ಕುಸುಬೆ ಬೆಳೆ ಬೆಳೆದಿದ್ದಾರೆ. ಆರಂಭದಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ಗೆ ₹6000ರಿಂದ ₹8000ರವರೆಗೆ ಬೆಲೆ ಸಿಕ್ಕಿದ್ದರೂ, ಇತ್ತೀಚೆಗೆ ಬೆಲೆ ₹5400ರಿಂದ ₹4200ಕ್ಕೆ ಕುಸಿದಿದೆ. ಈ ಹಿನ್ನೆಲೆ ಆರಂಭದಲ್ಲಿ ಖಾಸಗಿ ಮಾರುಕಟ್ಟೆಯಲ್ಲಿ ಮಾರಾಟವಾದ ಬೆಲೆಕಿಂತ ಕಡಿಮೆ ಬೆಲೆಗೆ ನಿಗದಿಪಡಿಸಿ ರೈತರಿಗೆ ಅನ್ಯಾಯ ಮಾಡಿದ ಕೇಂದ್ರ ಸರ್ಕಾರ
ಈಗ ಕೇಂದ್ರ ಸರ್ಕಾರ ನಿಗದಿಪಡಿಸಿರುವ ₹6540 ಬೆಂಬಲ ಬೆಲೆಯನ್ನಾದರೂ ಶೀಘ್ರದಲ್ಲಿ ರಾಜ್ಯ ಸರ್ಕಾರ ಖರೀದಿ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವಂತೆ ರೈತರು ಆಗ್ರಹಿಸಿದ್ದಾರೆ.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರು ನೇತೃತ್ವದಲ್ಲಿ ತಹಶೀಲ್ದಾರ ಬಸವರಾಜ ಬೆಣ್ಣೆ ಶಿರೂರು ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದಾಗಿ ತಹಶೀಲ್ದಾರರು ಭರವಸೆ ನೀಡಿದ್ದಾರೆ. ಕೂಡಲೇ ತಾಲೂಕಿನ ಅಳವಂಡಿ, ಕುಕನೂರು, ಯಲಬುರ್ಗಾ ಹಾಗೂ ಕುಷ್ಟಗಿ ಪ್ರದೇಶಗಳಲ್ಲಿ ನಾಲ್ಕು ಖರೀದಿ ಕೇಂದ್ರಗಳನ್ನು ಆರಂಭಿಸಲು ರೈತರು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಕರ್ತರರಾದ ದೇವರಡ್ಡಿ ನಾಗರಡ್ಡಿ. ಅಣ್ಣಪ್ಪ ನೆರೇಗಲ್. ಶಶಿಧರ ಮಾದಿನೂರು. ಗಂಗದರ ರಾಜೂರು. ಮಾರುತಿ ಮರಡಿ. ಉಮೇಶ ನಾಗರಡ್ಡಿ. ಬಸವರಾಜ ಮರಡಿ. ಶರಣಪ್ಪ ಚಿಟ್ಟಿ. ಸುನಿಲ್ ಸಿದ್ನೇಕೊಪ್ಪ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
