ಬಸವಣ್ಣನವರ ತತ್ವ, ಸಂದೇಶಗಳನ್ನು ಮೈಗೂಡಿಸಿಕೊಳ್ಳಬೇಕು
ಸಂತೆಯಿಂದಹಳ್ಳಿ : ಸಮೀಪದ ತೆಳ್ಳನೂರು ಗ್ರಾಮದಲ್ಲಿ ವೀರಶೈವ ಬಳಗದ ವತಿಯಿಂದ ಬಸವ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಮುಖಂಡ ಹಾಗೂ ಪಿಎಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ರವೀಶ್ ಕುಮಾರ್ ಮಾತನಾಡಿ ಬಸವಣ್ಣ ದೇಶದ ಮಹಾನ್ ಚೇತನ ತಾರಮ್ಯದ ವಿರುದ್ಧ ಹೋರಾಡಿ ಯುವ ಪೀಳಿಗೆಗೆ ಹಲವಾರು ವೇದ ವಚನಗಳನ್ನು ನೀಡಿದಂತಹ ಅದ್ಭುತ ವ್ಯಕ್ತಿ ಎಂದರು.
ಬಸವಣ್ಣನ ತತ್ವ ಬೆಳಸಿಕೊಳ್ಳುವುದರ ಜೊತೆಗೆ ಅವರ ಆದರ್ಶಗಳನ್ನ ಬೆಳೆಸಿಕೊಳ್ಳಬೇಕು ಎಂದರು.
ಇತರ ಬಾನಹಳ್ಳಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ರೇವಣ್ಣ ಸ್ವಾಮಿ ಮಾತನಾಡಿ
ಇಂದಿಗೂ ಪ್ರಪಂಚಾದ್ಯಂತ ಬಸವಣ್ಣನ ತತ್ವಗಳನ್ನು ಆಧರಿಸಿ ಜೀವನದ ಪ್ರೇರಣೆಯಾಗಿದ್ದಾರೆ, ಬಸವಣ್ಣ ಕೇವಲ ಒಂದು ಜಾತಿಗೆ ಸೀಮಿತವಾಗಬಾರದು ಎಂದರು.
ಜಾತಿ ವಿರುದ್ದ ದ್ವನಿ ಎತ್ತಿ ಸಾಮಾಜಿಕ ಕ್ರಾಂತಿಗೆ ಕಾರಣರಾಗಿದ್ದರು, ಬಸವಣ್ಣ ತತ್ವಗಳನ್ನ ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪಟೇಲ್ ನಟರಾಜ್, ಗೌಡ್ರು ರಾಜೇಂದ್ರಪ್ಪ , ಟಿ ಎಂ ಕುಮಾರ್, ರಮೇಶ್, ನಾಗ,ಸೋಮಣ್ಣ, ಅಶೋಕ, ಟಿ ಸಿ ನಾಗೇಶ್, ಸುಗಂಧರಾಜ್, ಲೋಕೇಶ್ ದೇವರಾಜ್ ಮೂರ್ತಿ, ಗುರುಪಾದಸ್ವಾಮಿ ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
