ಫ್ಯೂಚರ್ ವಾರಿಯರ್ಸ್ ಆಫ್ ಇಂಡಿಯನ್ ಆರ್ಮಿ ಕೆಜಿಎಫ್ ವತಿಯಿಂದ ಬೇಸಿಗೆ ಶಿಬಿರ

Apr 26, 2026 - 19:31
Apr 26, 2026 - 19:38
 0  31
ಫ್ಯೂಚರ್ ವಾರಿಯರ್ಸ್ ಆಫ್  ಇಂಡಿಯನ್ ಆರ್ಮಿ ಕೆಜಿಎಫ್ ವತಿಯಿಂದ ಬೇಸಿಗೆ ಶಿಬಿರ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಕೆಜಿಎಫ್: ಫ್ಯೂಚರ್ ವಾರಿಯರ್ಸ್ ಆಫ್ ಇಂಡಿಯನ್ ಆರ್ಮಿ ಕೆಜಿಎಫ್ ಇವರ ಸಂಯೋಗದ ಬೇಸಿಗೆ ಕ್ರೀಡಾ ಶಿಬಿರ ಆಯೋಜನೆ ಮಕ್ಕಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. 

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಪಿಎಸ್ಐ. ಬಿ. ಮಂಜುನಾಥ್ ಮಾತನಾಡಿ ವಿ.ಪ್ರಕಾಶ್ ಮಾಜಿ ಸೈನಿಕರು ಅವರು ತನ್ನದೇ ಆದ ಸಂಘಟನೆಯನ್ನು ಮಾಡಿಕೊಂಡು ಬೇಸಿಗೆ ಶಿಬಿರಗಳನ್ನು ಆಯೋಜನೆ ಮಾಡಿ ಮಕ್ಕಳಲ್ಲಿ ಜೀವನದ ಬಗ್ಗೆ ಅರಿವಿ ಮೂಡಿಸುವುದು. ನಮ್ಮ ದೇಶವನ್ನು ಕಾಯಬೇಕೆಂದು ಸೈನಿಕರನ್ನು ತಯಾರಿ ಮಾಡಿಸುವುದು ಇವರ ಮಾರ್ಗದರ್ಶನ ಪಡೆದು ಹಲವಾರು ವಿದ್ಯಾರ್ಥಿಗಳು ಸೇನೆಗೆ ಸೇರಿದ್ದಾರೆ. ಅದೇ ರೀತಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಅವರ ಉದ್ದೇಶ ಒಂದೇ. ಮಕ್ಕಳನ್ನು ಒಳ್ಳೆ ದಾರಿಗೆ ತರಬೇಕು ಅವರು ತನ್ನ ಕಾಲ ಮೇಲೆ ನಿಂತು ಸ್ವವಲಂಬೆ ಜೀವನ ನಡೆಸಬೇಕು ಎನ್ನುವುದು. ಎಂದರು.

ಫ್ಯೂಚರ್ ವಾರಿಯರ್ಸ್ ಆಫ್ ಇಂಡಿಯನ್ ಆರ್ಮಿ ಕೆಜಿಎಫ್ ಸಂಘದ ಅಧ್ಯಕ್ಷರು ಆಗಿರುವ ಶ್ರೀ ಪ್ರಕಾಶ್ ರವರು ಶಾಲಾ ಮಕ್ಕಳಿಗೆ ಕ್ರೀಡೆಗಳನ್ನು ಆಯೋಜಿಸಿ ಪ್ರಶಸ್ತಿಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆಯುವುದು ಮುಖ್ಯವಲ್ಲ ಪಾಲ್ಗೊಳ್ಳುವುದೇ ಮುಖ್ಯ ಈಗಿನ ಮಕ್ಕಳು ಮೊಬೈಲ್ ವ್ಯಾಮೋಹವನ್ನು ಬಿಡಬೇಕು. ತಂದೆ ತಾಯಿಯ ಮಾತನ್ನು ಕೇಳಬೇಕು. ದೊಡ್ಡವರು ಚಿಕ್ಕವರು ಎನ್ನುವುದನ್ನು ನೋಡಿ ಗೌರವ ನೀಡಬೇಕು. ಆಗ ಸಮಾಜ ನಮ್ಮನ್ನು ಗೌರವಿಸುತ್ತದೆ ಎಂದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456